/newsfirstlive-kannada/media/post_attachments/wp-content/uploads/2024/04/Whatsapp-2.jpg)
ಮೆಟಾ ಒಡೆತನದ ವಾಟ್ಸಪ್​ ತನ್ನ ಬಳಕೆದಾರರಿಗೆ ಹೊಸ ಫೀಚರ್​ ಪರಿಚಯಿಸಲು ಮುಂದಾಗಿದೆ. ಬಳಕೆದಾರರು ಬಹು ಖಾತೆಗಳಲ್ಲಿ ತಮ್ಮ ಸಂಪರ್ಕ ಸಿಂಕ್​ ಮಾಡುವ ಫೀಚರ್​ ಇದಾಗಿದೆ. ಇದರ ಮೂಲಕ ಗ್ರಾಹಕರಿಗೆ ಸಂಪರ್ಕ ಸಾಧಿಸಲು ಇನ್ನಷ್ಟು ಸುಲಭವಾಗಲಿದೆ ಎನ್ನಲಾಗುತ್ತಿದೆ.
ವಾಬೇಟಾಇನ್​ಫೋ ಪ್ರಕಾರ, ಬಹು ಖಾತೆಗಳಲ್ಲಿ ಸಂಪರ್ಕಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಸುಧಾರಿಸುವ ಗುರಿಯನ್ನು ಹೊಸ ವೈಶಿಷ್ಟ್ಯ ಹೊಂದಿದೆ. ಇದು ಸಂಪರ್ಕ ಸಿಂಕ್ರೋನೈಸೇಶನ್​ ಮಾಡಲು ಹೆಚ್ಚಿನ ನಿಯಂತ್ರಣವನ್ನು ಒದಗಿಸುವ ನಿರೀಕ್ಷೆಯಿದೆ. ಇದಲ್ಲದೆ ಗೌಪ್ಯತೆ ಮತ್ತು ಅನುಕೂಲತೆಗೆ ತಕ್ಕಂತೆ ಕಾರ್ಯನಿರ್ವಹಿಸಲಿದೆ ಎನ್ನಲಾಗುತ್ತಿದೆ.
ವಾಟ್ಸಪ್​ ಸಂಪರ್ಕ ಸಿಂಕ್​ ಎಂದರೇನು?
ಸ್ಮಾರ್ಟ್​ಫೋನ್​​ನಲ್ಲಿರುವ ಕ್ವಾಂಟ್ಯಾಕ್ಟನ್ನು ಸ್ವಯಂಚಾಲಿತವಾಗಿ ಸಿಂಕ್​ ಮಾಡುವ ಪ್ರಕ್ರಿಯೆ ಇದಾಗಿದೆ. ಇದು ಸಂಪರ್ಕ ಪಟ್ಟಿಯನ್ನು ಪ್ರವೇಶಿಸಲು ಮತ್ತು ನವೀಕರಿಸಲು ಸಹಾಯ ಮಾಡುತ್ತದೆ. ವಾಟ್ಸಪ್​ ಹೊಸ ಬಹು ಖಾತೆಯ ಬೆಂಬಲದೊಂದಿಗೆ ವಿವಿಧ ಖಾತೆಯನ್ನು ಸಂಪರ್ಕಿಸಬಹುದಾಗಿದೆ.
/newsfirstlive-kannada/media/post_attachments/wp-content/uploads/2024/04/Whats-app.webp)
ಹೇಗೆ ಕೆಲಸ ಮಾಡುತ್ತೆ?
ಒಬ್ಬ ಬಳಕೆದಾರ 2 ವಾಟ್ಸಪ್​ ಖಾತೆಯನ್ನು ಹೊಂದಿರಬಹುದು. ಅದರಲ್ಲಿ ಒಂದನ್ನು ಕೆಲಸಕ್ಕಾಗಿ ಬಳಸಿದರೆ ಮತ್ತೊಂದನ್ನು ವೈಯಕ್ತಿಕವಾಗಿ ಬಳಸಬಹುದು. ಆದರೆ ಒಂದು ಖಾತೆಯನ್ನು ಮತ್ತೊಂದು ಖಾತೆಗೆ ಸಿಂಕ್​ ಮಾಡುವ ಮೂಲಕ ಮತ್ತೊಂದನ್ನು ನಿಷ್ಕ್ರೀಯ ಮಾಡಬಹುದಾಗಿದೆ.
ಅಂದಹಾಗೆಯೇ ಈ ಫೀಚರ್​ನಲ್ಲಿ ವೈಯಕ್ತಿಕ ಖಾತೆಯಲ್ಲಿ ಬ್ಯುಸಿನೆಸ್​​ ಸಂಪರ್ಕ ಘೋಚರಿಸುವುದಿಲ್ಲ. ಇದರಲ್ಲದೆ ಮ್ಯಾನುಯೆಲ್​​ ಸಿಂಕ್​ ಆಯ್ಕೆಯನ್ನು ನೀಡುತ್ತದೆ. ಗೌಪತ್ಯೆ ಮತ್ತು ಸುರಕ್ಷತೆಯ ಬಗ್ಗೆಯೂ ಹೆಚ್ಚು ಒತ್ತು ನೀಡುತ್ತದೆ. ಸಿಂಕ್​ ಮಾಡಲಾದ ಸಂಪರ್ಕಗಳ ಬ್ಯಾಕಪ್​ ಸುರಕ್ಷಿತವಾಗಿರುತ್ತದೆ.
ವಾಟ್ಸಪ್ ಸಂಪರ್ಕ ನಿರ್ವಹಣೆಯನ್ನು ಸರಳಗೊಳಿಸಲು ಈ ಸಿಂಕ್​​ ಮಾಡುವ ಫೀಚರ್​ ಪರಿಚಯಿಸುತ್ತಿದೆ. ಸದ್ಯ ಈ ನೂತನ ಫೀಚರ್​ ಬೀಟಾದಲ್ಲಿದೆ. ಬಳಕೆದಾರರ ಅನುಕೂಲತೆಗೆ ತಕ್ಕಂತೆ ವಿಕಸನ ಮಾಡುತ್ತಿದೆ. ಸದ್ಯದಲ್ಲೇ ಈ ಹೊಸ ಫೀಚರ್​ ಪರಿಚಯಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us