/newsfirstlive-kannada/media/post_attachments/wp-content/uploads/2024/04/whatsapp-3.jpg)
ಮೆಟಾ ಒಡೆತನದ ವಾಟ್ಸಪ್ ಬಗ್ಗೆ ಗೊತ್ತಿರದವರು ಯಾರಿದ್ದಾರೆ ಹೇಳಿ? ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ವಾಟ್ಸಪ್ ಬಳಕೆಯಲ್ಲಿದೆ. ಅದೆಷ್ಟೋ ಜನರು ವಾಟ್ಸಪ್ನಲ್ಲಿಯೇ ದೈನಂದಿನ ವ್ಯವಹಾರವನ್ನು ಹಿಡಿದು, ಅಗತ್ಯವಾದ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೀಗ ಜನಪ್ರಿಯ ವಾಟ್ಸಪ್ ಶಾಕಿಂಗ್ ವಿಚಾರವನ್ನು ತೆರೆದಿಟ್ಟಿದೆ. ಅದೇನೆಂದರೆ ಕೆಲವೊಂದು ಸ್ಮಾರ್ಟ್ಫೋನ್ ಮತ್ತು ಐಫೋನ್ಗಳಲ್ಲಿ ತನ್ನ ಕಾರ್ಯವನ್ನು ಸ್ಥಗಿತ ಮಾಡುವುದಾಗಿ ತಿಳಿಸಿದೆ.
ಹೌದು, ವಾಟ್ಸಪ್ ಸದಾ ಏನಾದರೊಂದು ಹೊಸ ಫೀಚರ್ಗಳನ್ನು ಪರಿಚಯಿಸುತ್ತಿರುತ್ತದೆ. ಅದರಂತೆಯೇ ಇದೀಗ ಹೊಸ ವೈಶಿಷ್ಟ್ಯಗಳನ್ನು ಬೆಂಬಲಿಸಲು ಸಾಧ್ಯವಾಗದ ಹಳೆಯ ಸಾಧನಗಳಿಗೆ ಬೆಂಬಲವನ್ನು ಕೊನೆಗೊಳಿಸಲು ಮುಂದಾಗಿದೆ. ಸುರಕ್ಷತೆ ಮತ್ತು ಭದ್ರತಾ ವಿಚಾರವಾಗಿ ಈ ನವೀಕರಣವನ್ನು ಮಾಡಲು ವಾಟ್ಸಪ್ ಮುಂದಾಗಿದೆ.
ವಾಟ್ಸಪ್ ರನ್ ಆಗಲು ಆ್ಯಂಡ್ರಾಯ್ಡ್ 5.0 ಆವೃತ್ತಿ ಮತ್ತು ಐಒಎಸ್ 12 ಆವೃತ್ತಿ ಅಗತ್ಯವಿದೆ. ಆದರೆ ಈ ಆವೃತ್ತಿಗಳಲ್ಲದ ಸ್ಮಾರ್ಟ್ಫೋನ್ ಅಥವಾ ಐಫೋನ್ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುವುದು ಅಸಾಧ್ಯವಾಗಿದೆ.
ವಾಟ್ಸ್ಆ್ಯಪ್ ಈ ಫೋನ್ಗಳಲ್ಲಿ ಕಾರ್ಯನಿರ್ವಹಿಸಲ್ಲ
- Samsung Galaxy Ace Plus
- Samsung Galaxy Core
- Samsung Galaxy Express 2
- Samsung Galaxy Grand
- Samsung Galaxy Note 3
- Samsung Galaxy S3 mini
- Samsung Galaxy S4 Active
- Samsung Galaxy S4 Mini
- Samsung Galaxy S4 Zoom
ಮೊಟೊರೊಲಾ
- Moto G
- Moto X
ಹುವಾವೇ
- Huawei Ascend P6
- Huawei Ascend G525
- Huawei C199
- Huawei GX1s
- Huawei Y625
ಸೋನಿ
- Sony Xperia Z1
- Sony Xperia E3
LG ಫೋನ್
- LG Optimus 4X HD
- LG Optimus G
- LG Optimus G Pro
- LG Optimus L7
Apple
- Iphone 5
- Iphone 6
- Iphone 6 S
- Iphone 6 S Plus
ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ ಆರ್ಸಿಬಿ; 7 ವಿಕೆಟ್ಗಳ ಭರ್ಜರಿ ಗೆಲುವು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ