/newsfirstlive-kannada/media/post_attachments/wp-content/uploads/2023/12/CYBER_CRIME_1.jpg)
ಇಂದಿನ ಆಧುನಿಕ ಯುಗದಲ್ಲಿ ಸೋಷಿಯಲ್​​ ಮೀಡಿಯಾದ ಎಲ್ಲರ ಜೀವನದ ಭಾಗವಾಗಿದೆ. ಅದರಲ್ಲೂ ಇಡೀ ದೇಶಾದ್ಯಂತ ಬಹುತೇಕರು ವಾಟ್ಸಪ್​​ ಬಳಕೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ದಿನನಿತ್ಯ ಸಂಪರ್ಕ ಸಾಧನವಾಗಿ ಬಳಸುತ್ತಿದ್ದಾರೆ. ವಾಟ್ಸಪ್​​ನಲ್ಲಿ ನಿಮಗೆ ಎಷ್ಟು ಯೂಸ್​ ಆಗುತ್ತೋ ಅಷ್ಟೇ ಅಪಾಯಗಳನ್ನು ತಂದೊಡ್ಡಲಿದೆ. ಸೈಬರ್​ ಅಪರಾಧಿಗಳು ವಾಟ್ಸಪ್​​ನಲ್ಲೇ ಮೋಸ, ವಂಚನೆ, ಹ್ಯಾಕಿಂಗ್​ ಕೂಡ ಮಾಡುತ್ತಾರೆ.
ವಾಟ್ಸಪ್​​ನಲ್ಲಿ ಆಗೋ ಅಪಾಯಗಳೇನು?
ಲಾಟರಿ ಹೆಸರಲ್ಲಿ ಸ್ಕ್ಯಾಮ್​​
ಇನ್ನು, ವಾಟ್ಸಪ್​​ನಲ್ಲಿ ಹೆಚ್ಚು ಸ್ಕ್ಯಾಮ್​​ ನಡೆಯುತ್ತದೆ. ಅಪರಿಚಿತ ಸಂಖ್ಯೆಯಿಂದ ನೀವು ಲಾಟರಿ ಗೆದ್ದಿದ್ದೀರಿ ಅನ್ನೋ ಮೆಸೇಜ್​ ಬರುತ್ತೆ. ನಿಮಗೆ ವಿಶೇಷ ಉಡುಗೊರೆ ಸಿಗಲಿದೆ ಎಂಬ ಸಂದೇಶಗಳು ಕಳಿಸಲಾಗುತ್ತೆ. ಈ ಮೆಸೇಜ್​​ ಜೊತೆಗೆ ಬರೋ ಲಿಂಕ್​ ಕ್ಲಿಕ್​ ಮಾಡಿದರೆ ಸೈಬರ್​​​ ಅಪರಾಧಿಗಳಿಗೆ ನಿಮ್ಮ ಬ್ಯಾಂಕ್​​ ಖಾತೆ ಸಿಗುತ್ತದೆ. ಕೂಡಲೇ ನಿಮ್ಮ ಬ್ಯಾಂಕ್​ ಖಾತೆಯಿಂದ ಹಣ ಲಪಟಾಯಿಸುತ್ತಾರೆ.
ನಕಲಿ ಉದ್ಯೋಗ ಮತ್ತು ಸಾಲದ ಆಫರ್ಸ್​
ಇತ್ತೀಚೆಗೆ ವಾಟ್ಸಪ್​​ನಲ್ಲಿ ದೊಡ್ಡ ಕಂಪನಿಗಳ ಹೆಸರಿನಲ್ಲಿ ನಕಲಿ ಉದ್ಯೋಗದ ಆಫರ್​ಗಳು ಬರುತ್ತವೆ. ಹಾಗೆಯೇ ಎಷ್ಟು ಬೇಕೋ ಅಷ್ಟು ಸಾಲ ನೀಡುತ್ತೇವೆ ಎಂದು ಆಫರ್​ ಕೂಡ ಕೊಡುತ್ತಾರೆ. ಹೇಗಾದ್ರೂ ಮಾಡಿ ನಿಮ್ಮ ಆಧಾರ್​ ಮತ್ತು ಪಾನ್​​ ಕಾರ್ಡ್​ ಮಾಹಿತಿ ಪಡೆಯುತ್ತಾರೆ. ನಿಮ್ಮ ವೈಯಕ್ತಿಕ ಡಾಟಾ ಸೈಬರ್​​ ವಂಚಕರು ಬ್ಯಾಂಕ್​ ಖಾತೆ ಹ್ಯಾಕ್​ ಮಾಡಲು ಬಳಸುತ್ತಾರೆ.
/newsfirstlive-kannada/media/post_attachments/wp-content/uploads/2024/04/Whatsapp-1.jpg)
ಫಿಶಿಂಗ್ ಮತ್ತು ಹ್ಯಾಕಿಂಗ್
ಸೈಬರ್​ ಕ್ರೈಮ್​​ನ ಭಾಗವಾಗಿರೋ ಫಿಶಿಂಗ್ ಮತ್ತು ಹ್ಯಾಕಿಂಗ್ ಭಾರೀ ಡೇಂಜರಸ್​​​. ನೀವು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿದಾಗ ನಿಮ್ಮ ಫೋನ್​ ಹ್ಯಾಕ್​ ಆಗಲಿದೆ. ಇದರಿಂದ ನಿಮ್ಮ ಮೊಬೈಲ್​ನಲ್ಲಿ ಆಟೋಮ್ಯಾಟಿಕ್​​ ಮಾಲ್ವೇರ್​ ಡೌನ್​ಲೋಡ್​ ಆಗುತ್ತದೆ. ಇದರಿಂದ ಬ್ಯಾಂಕಿಂಗ್​ ಪಾಸ್​ವಾರ್ಡ್​ ಮತ್ತು OTP ಇತ್ಯಾದಿ ಮಾಹಿತಿ ಕದಿಯಲಾಗುತ್ತದೆ.
ಸುಳ್ಳುಸುದ್ದಿ ಹರಡುವ ಟೂಲ್​ಕಿಟ್​​
ಸೋಷಿಯಲ್​ ಮೀಡಿಯಾದಲ್ಲಿ ಸುಳ್ಳುಸುದ್ದಿ ಹರಡುವುದು ಸರ್ವೇಸಾಮಾನ್ಯ. ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕೋಮು ಮತ್ತು ರಾಜಕೀಯ ದ್ವೇಷ ಹರಡಲಿದ್ದಾರೆ. ನೀವು ಬ್ಲೈಂಡ್​ ಆಗಿ ಶೇರ್​ ಮಾಡೋದರಿಂದ ಅಪಾಯವೇ ಹೆಚ್ಚು.
ವಾಟ್ಸಪ್​​ ಸ್ಕ್ಯಾಮ್​ನಿಂದ ಬಚಾವ್​​ ಆಗೋದು ಹೇಗೆ?
Unknown ನಂಬರ್ಸ್​ನಿಂದ ಬಂದ ಲಿಂಕ್​​ಗಳನ್ನು ಕ್ಲಿಕ್​ ಮಾಡಬೇಡಿ
ನಿಮ್ಮ ಬ್ಯಾಂಕ್​​ ಮತ್ತು ಪರ್ಸನಲ್​ ಮಾಹಿತಿಯನ್ನು ಶೇರ್​ ಮಾಡಲೇಬೇಡಿ
ಯಾವುದೇ ಆಕರ್ಷಕ ಹಣಕಾಸು ಆಫರ್​ಗಳು ಬಂದಾಗ ಮರುಳಾಗಬೇಡಿ
ರಿಲಿಜಿಯಸ್​​, ವೈಲೆನ್ಸ್, ಕೋಮು ದ್ವೇಷ ಹರಡುವ ಸಂದೇಶ ಕಳಿಸಬೇಡಿ
ವಾಟ್ಸಪ್​ ಸೆಟ್ಟಿಂಗ್​​ನಲ್ಲಿ ಪ್ರೈವಸಿಗೆ ಹೋಗಿ ಖಾಸಗಿತನ ಕಾಪಾಡಿಕೊಳ್ಳಿ
ಯಾವುದೇ ಅನುಮಾನಾಸ್ಪದ ಸಂದೇಶಗಳು ಬಂದಾಗ ರಿಪೋರ್ಟ್​ ಮಾಡಿ
ಯಾರೇ ಆಗಲಿ ವಾಟ್ಸಪ್​ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಹ್ಯಾಕರ್ಸ್​ ಇಂಟರ್​ನೆಟ್​ನಲ್ಲಿ ಸೈಬರ್​​ ಕ್ರೈಮ್​ ಮಾಡಲು ಹೊಸ ದಾರಿಗಳನ್ನು ಹುಡುಕುತ್ತಲೇ ಇದ್ದಾರೆ. ನೀವು ಎಚ್ಚರಿಕೆಯಿಂದ ಇರದೆ ಹೋದಲ್ಲಿ ಕೋಟ್ಯಂತರ ಹಣ ಕಳೆದುಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ:ಬೇಸಿಗೆಯಲ್ಲಿ ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನೋ ಮುನ್ನ ಎಚ್ಚರ! ಓದಲೇಬೇಕಾದ ಸ್ಟೋರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us