newsfirstkannada.com

ಹೀಗೆ ಮಾಡಿದ್ರೆ ಭಾರತ ಬಿಟ್ಟು ಹೋಗ್ತೇವೆ ಎಂದು ಎಚ್ಚರಿಸಿದ ವಾಟ್ಸ್​ಆ್ಯಪ್​! ಅಷ್ಟಕ್ಕೂ ಸರ್ಕಾರ​​ದ ಜೊತೆಗಿನ ಜಟಾಪಟಿ ಏನು?

Share :

Published April 27, 2024 at 9:32am

Update April 27, 2024 at 9:54am

    ಮೆಟಾ ಒಡೆತನದ ವಾಟ್ಸ್​ಆ್ಯಪ್​ನಿಂದ ಎಚ್ಚರಿಕೆಯ ಸಂದೇಶ

    ಎನ್​ಕ್ರಿಪ್ಟ್​​ ಭೇದಿಸಲು ಹೊರಟರೆ ಭಾರತ ಬಿಟ್ಟು ಹೋಗ್ತೇವೆ

    ಸರ್ಕಾರ ಮತ್ತು ಮೆಟಾ ಒಡೆತನದ ವಾಟ್ಸ್​ಆ್ಯಪ್​ ನಡುವಿನ ಜಟಾಪಟಿ ಏನು?

ಮೆಟಾ ಒಡೆತನದ ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ಎಂಡ್​-ಟು-ಎಂಡ್​​ ಎನ್​ಕ್ರಿಪ್ಟ್​​ ಸೇವೆಯನ್ನ ಒದಗಿಸುತ್ತಿದೆ. ಆ ಮೂಲಕ ಬಳಕೆದಾರರನ್ನು ಸುರಕ್ಷಿತವಾಗಿರಿಸಿದೆ. ಆದರೆ ಮುಂದಿನ ದಿನಗಳಲ್ಲಿ ಚಾಟ್​​ ಎನ್​ಕ್ರಿಪ್ಟ್​ ಅನ್ನು ಭೇದಿಸಲು ಹೊರಟರೆ ಭಾರತದಿಂದ ನಿರ್ಗಮಿಸುವುದಾಗಿ ದಿಲ್ಲಿ ಹೈಕೋರ್ಟ್​ಗೆ ವಾಟ್ಸ್​ಆ್ಯಪ್​ ತಿಳಿಸಿದೆ.

ಭಾರತ ಸರ್ಕಾರ ಮತ್ತು ವಾಟ್ಸ್​ಆ್ಯಪ್​ ಗೌಪ್ಯತೆಯ ದೃಷ್ಟಿಯ ವಿಚಾರವಾಗಿ ಹೋರಾಡುತ್ತಿದೆ. ಅದರಲ್ಲೂ ಚಾಟ್​​, ಕರೆ, ವಿಡಿಯೋ ಕರೆಗಳನ್ನು ಸುರಕ್ಷಿತವಾಗಿರಿಸಲು ವಾಟ್ಸ್​ಆ್ಯಪ್​ ಹೋರಾಡುತ್ತಲೇ ಬಂದಿದೆ. ಆದರೆ ಸರ್ಕಾರ ಸಂದೇಶದ ಮೂಲವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ದೆಹಲಿ ಕೋರ್ಟ್​ ಮೊರೆ ಹೋಗಿದೆ.

ಮೆಟಾ-ಮಾಲೀಕತ್ವದ ವಾಟ್ಸ್​ಆ್ಯಪ್​ ಕೋರ್ಟ್​ನಲ್ಲಿ ವಾಧಿಸಲು ತೇಜಸ್​ ಕರಿಯಾ ಅವರನ್ನು ನೇಮಕ ಮಾಡಿದೆ. ಅವರು ಎನ್​ಕ್ರಿಪ್ಟ್​ ಅನ್ನು ಭೇದಿಸಲು ಮುಂದಾದರೆ ಕಾನೂನನ್ನು ಅನುಸರಿಸುವ ಬದಲು ವಾಟ್ಸ್​ಆ್ಯಪ್​ ದೇಶಬಿಟ್ಟು ನಿರ್ಗಮಿಸುವುದಾಗಿ ತಿಳಿದ್ದಾರೆ.

ಜೊತೆಗೆ ವಾಟ್ಸ್​​ಆ್ಯಪ್ ಹಲವು ವೈಶಿಷ್ಟ್ಯ ಜೊತೆಗೆ ಸುರಕ್ಷಿತವಾಗಿರುವುದರಿಂದ ಕೋಟ್ಯಾಂತರ ಜನರು ಬಳಸುತ್ತಿದ್ದಾರೆ. ಯುಪಿಐ ಪಾವತಿ ಸೇವೆ ಒದಗಿಸಿರುವ ದೇಶಗಳಲ್ಲಿ ವಾಟ್ಸ್​ಆ್ಯಪ್​​ 400 ಮಿಲಿಯನ್​ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ಹೇಳಿದ್ದಾರೆ.

ಏನಿದು ಜಟಾಪಟಿ?

ಮಾಹಿತಿ ತಂತ್ರಜ್ಞಾನ ನಿಯಮ 2021ರ ಅಡಿಯಲ್ಲಿ ವಾಟ್ಸ್​ಆ್ಯಪ್​ ಮತ್ತು ಇನ್ನಿತರ ಮೆಸೇಜಿಂಗ್ ​​ಆ್ಯಪ್​ಗಳ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ಸಲುವಾಗಿ ಎನ್​​ಕ್ರಿಪ್ಟ್​​ ನಿಯಮ ಸಡಿಲಗೊಳಿಸುವ ಅಗತ್ಯವಿದೆ ಎಂದು ಭಾರತ ಸರ್ಕಾರ ಹೇಳಿಕೊಂಡು ಬಂದಿದೆ. ಆದರೆ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸುರಕ್ಷಿತವಾದ ವೈಶಿಷ್ಯದ ಜೊತೆಗೆ ಸೇವೆಯನ್ನು ನೀಡುತ್ತಿರುವಾಗ ಎನ್​ಕ್ರಿಪ್ಟ್​ ಸಡಿಲಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದೆ. ಜೊತೆಗೆ ಭಾರತೀಯ ಐಟಿ ನಿಯಮದ ಪ್ರಕಾರ ಮೆಟಾ ಒಡೆತನದ ವಾಟ್ಸ್​ಆ್ಯಪ್​ ಹೋರಾಡುತ್ತಿದೆ. ಮಾತ್ರವಲ್ಲದೆ ಭಾರತೀಯ ಸಂವಿಧಾನದ ಅಡಿಯಲ್ಲಿ ಬಳಕೆದಾರರ ಗೌಪ್ಯತೆ ಉಲ್ಲಂಘಿಸುವುದು ಸರಿಯಲ್ಲ ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೀಗೆ ಮಾಡಿದ್ರೆ ಭಾರತ ಬಿಟ್ಟು ಹೋಗ್ತೇವೆ ಎಂದು ಎಚ್ಚರಿಸಿದ ವಾಟ್ಸ್​ಆ್ಯಪ್​! ಅಷ್ಟಕ್ಕೂ ಸರ್ಕಾರ​​ದ ಜೊತೆಗಿನ ಜಟಾಪಟಿ ಏನು?

https://newsfirstlive.com/wp-content/uploads/2024/04/whatsapp-3.jpg

Load More