/newsfirstlive-kannada/media/post_attachments/wp-content/uploads/2024/12/WhatsApp-1.jpg)
ಮೆಸೇಜ್ ಮತ್ತು ಕಾಲ್​ಗಳನ್ನು ಫ್ರೀಯಾಗಿ ಮಾಡಬಹುದಾದ ಮೇಟಾದ ಮತ್ತೊಂದು ವೇದಿಕೆ ಅಂದ್ರೆ ಅದು ವಾಟ್ಸಾಪ್​. ಈ ಒಂದು ಆ್ಯಪ್ ಜಗತ್ತಿನ ಪ್ರತಿಯೊಂದು ಸ್ಮಾರ್ಟ್​ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್​ಗಳಲ್ಲಿ ಇದ್ದೇ ಇರುತ್ತೆ. ಇದು ಖಾಯಂ ಆಗಿ ಸರಳವಾಗಿ ನಡೆಯಬೇಕು ಅಂದ್ರೆ ಅದನ್ನು ಆಗಾಗ ಅಪ್​ಡೇಟ್​ ಮಾಡಿಕೊಳ್ಳುತ್ತಲೇ ಇರಬೇಕು. ಆದ್ರೆ ಮೆಟಾ ಕಂಪನಿ ಈಗೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ಕೆಲವು ಹಳೆಯದಾದ ಫೋನ್​ಗಳಲ್ಲಿ ಇನ್ಮುಂದೆ ವಾಟ್ಸಾಪ್ ಆ್ಯಕ್ಸಸ್ ಇರುವುದಿಲ್ಲ ಎಂದು ತಿಳಿಸಿದೆ.
/newsfirstlive-kannada/media/post_attachments/wp-content/uploads/2024/09/whatsapp.jpg)
ಹೆಚ್​ಡಿ ಬ್ಲಾಗ್ ವರದಿ ಮಾಡಿರುವ ಪ್ರಕಾರ ಕನಿಷ್ಠ 20 ಬಗೆಯ ಆ್ಯಂಡ್ರಾಯ್ಡ್ ಮತ್ತು ಸ್ಮಾರ್ಟ್​ಫೋನ್​ಗಳಲ್ಲಿ ಇನ್ಮುಂದೆ ವಾಟ್ಸಾಪ್ ಕಾಣಿಸಲ್ಲ ಎಂದು ಹೇಳಲಾಗಿದೆ.ಅದು ಜನವರಿ 1ನೇ ತಾರೀಖು, ಹೊಸ ವರ್ಷದ ಮೊದಲ ದಿನದಿಂದಲೇ ಪ್ರಮುಖ ಸ್ಮಾರ್ಟ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್​ನಲ್ಲಿ ವಾಟ್ಸಾಪ್ ಮಾಯವಾಗಲಿದೆ. ಇಂತಹ ಒಂದು ವರದಿಯನ್ನು ಹೆಚ್​ಡಿ ಬ್ಲಾಗ್​ ಡಿಸೆಂಬರ್ 20 ರಂದು ಪ್ರಕಟಿಸಿದೆ.
ಆ್ಯಂಡ್ರಾಯ್ಡ್​​ ಕಿಟ್​ಕಾಟ್ ಡಿವೈಸ್​ ನ್ನು ಇಂದಿಗೂ ಉಪಯೋಗಿಸುತ್ತಿರುವ,ಮುಂಚಿನ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್​ಗಳಲ್ಲಿ ವಾಟ್ಸಾಪ್ ಆ್ಯಕ್ಸಿಸ್ ಆಗುವುದಿಲ್ಲ ಎಂದು ಹೇಳಲಾಗಿದೆ. ವಾಟ್ಸಾಪ್ ಜೊತೆ ಜೊತೆಗೆ ಮೆಟಾ ಆ್ಯಪ್​ಗಳಾದಂತಹ ಇನ್​​ಸ್ಟಾಗ್ರಾಮ್ ಹಾಗೂ ಫೇಸ್​ಬುಕ್​ಗಳು ಕೂಡ ಕಣ್ಮರೆಯಾಗಲಿವೆ.
ಕನಿಷ್ಟ 10 ವರ್ಷಗಳ ಹಿಂದಿನಷ್ಟು ಹಳೆಯದಾದ ಮೊಬೈಲ್​ಗಳು ತಮ್ಮ ವಾಟ್ಸಾಪ್​ ಆ್ಯಕ್ಸಿಸ್​ಗಳನ್ನು ಕಳೆದುಕೊಳ್ಳಲಿವೆ. ಒಂದು ವೇಳೆ ನೀವು 5 ರಿಂದ 6 ವರ್ಷದಷ್ಟು ಹಳೆಯ ಮೊಬೈಲ್ ಯೂಸ್ ಮಾಡುತ್ತಿದ್ದರೆ ಅದರಲ್ಲಿ ವಾಟ್ಸಾಪ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಒಂದು ವೇಳೆ ಕೆಳಗೆ ನೀಡಿರುವ ಪಟ್ಟಿಗಳಲ್ಲಿ ನಿಮ್ಮ ಮೊಬೈಲ್​ ಇದ್ದರೆ ಕೂಡಲೇ ವಾಟ್ಸಾಪ್ ಚಾಟ್​ಗಳನ್ನು ಎಕ್​ಪೋರ್ಟ್ ಮಾಡಿಕೊಳ್ಳುವುದು ಉತ್ತಮ.
ಈ ಕೆಳಗಂಡ ಮೊಬೈಲ್​​ಗಳಲ್ಲಿ ಜನವರಿ 1 ರಿಂದ ವಾಟ್ಸಾಪ್ ಆಕ್ಸಿಸ್​​ ಇರುವುದಿಲ್ಲ
Samsung Galaxy S3, Samsung Galaxy Note 2 Samsung Galaxy Ace 3, Samsung Galaxy S4 Mini, Moto G (1st Gen),Motorola Razr HD, Moto E 2014,HTC One X,HTC One X+,HTC Desire 500,HTC Desire 601, HTC Optimus G, HTC Nexus 4, LG G2 Mini, LG L90, Sony Xperia Z,Sony Xperia SP, Sony Xperia T, Sony Xperia V
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us