/newsfirstlive-kannada/media/post_attachments/wp-content/uploads/2025/05/Wheat_Harvesting_2.jpg)
ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ಭೀಕರ ಗುಂಡಿನ ದಾಳಿ ಬೆನ್ನಲ್ಲೇ 2 ದೇಶಗಳ ನಡುವೆ ಸಾಕಷ್ಟು ಬೆಳವಣಿಗೆ ನಡೆಯುತ್ತಿವೆ. ಹೀಗಾಗಿ ಭಾರತ- ಪಾಕ್ ನಡುವೆ ಯಾವ ಸಂದರ್ಭದಲ್ಲಾದರೂ ಏನಾದರೂ ಸಂಭವಿಸಬಹುದೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕ್ ಗಡಿಗೆ ಹೊಂದಿಕೊಂಡಿರುವ ಗೋಧಿ ಬೆಳೆಯ ಕಟಾವನ್ನು ಸಂಪೂರ್ಣವಾಗಿ ಭಾರತದ ರೈತರು ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತದ ಗಡಿ ರಾಜ್ಯಗಳಾದ ಗುಜರಾತ್, ರಾಜಸ್ಥಾನ, ಪಂಜಾಬ್ ಹಾಗೂ ಜಮ್ಮು ಕಾಶ್ಮೀರದಲ್ಲಿ ಸುಮಾರು 3,310 ಕಿಲೋ ಮೀಟರ್‌ಗಳಷ್ಟು ವ್ಯಾಪಿಯಲ್ಲಿ ರೈತರು ಗೋಧಿ ಬೆಳೆ ಕಟಾವನ್ನು ಮುಗಿಸಿದ್ದಾರೆ. ಈ ರಾಜ್ಯಗಳ ಹಲವು ರೈತರ ಬೆಳೆಗಳು ಪಾಕಿಸ್ತಾನದ ಗಡಿಯೊಂದಿಗೆ ಹೊಂದಿಕೊಂಡಿವೆ. 2 ರಾಷ್ಟ್ರಗಳ ಮಧ್ಯ ಯುದ್ಧದ ಸನ್ನಿವೇಶ ಏರ್ಪಟ್ಟರೆ ಬೆಳೆಗಳು ನಾಶವಾಗಬಹುದೆಂದು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ಸದ್ಯ ಎರಡು ದೇಶಗಳ ನಡುವೆ ಘರ್ಷಣೆ ನಡೆಯುವ ಸೂಚನೆ ಇದೆ. ಹೀಗಾಗಿ ಬೆಳೆಯನ್ನು ಬೇಗ ಕಟಾವು ಮಾಡಿಕೊಳ್ಳುವಂತೆ ರೈತರಿಗೆ, ಸರ್ಕಾರಿ ಅಧಿಕಾರಿಗಳು ಸೂಚಿಸಿದ್ದರು. ಇದರ ಬೆನ್ನಲ್ಲೇ ಗಡಿ ಪ್ರದೇಶದಲ್ಲಿರುವ ಗೋಧಿ ಬೆಳೆ ಕಟಾವನ್ನು ರೈತರು ಮುಗಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಹಿಟ್ಮ್ಯಾನ್ ರೋಹಿತ್ ಸ್ಫೋಟಕ, ರಯಾನ್ ಸಿಡಿಲಬ್ಬರ.. ಓಪನರ್ಸ್ ಇಬ್ಬರೂ ಭರ್ಜರಿ ಅರ್ಧಶತಕ
ಬೆಳೆಗಳ ಕಟಾವು ಪೂರ್ಣಗೊಂಡಿದ್ದು ಇಳುವರಿ ಕೂಡ ಉತ್ತಮವಾಗಿ ಬಂದಿದೆ. ಗಡಿ ಪ್ರದೇಶಗಳಲ್ಲಿ ಕೊಯ್ಲು ಮಾಡಿದ ಒಟ್ಟು ಗೋಧಿ ಪ್ರಮಾಣದ ಕುರಿತು ಪ್ರತ್ಯೇಕ ದತ್ತಾಂಶದ ಮಾಹಿತಿ ಇಲ್ಲ. ಇತರೆ ರಾಜ್ಯಗಳಿಗೆ ಹೋಲಿಸಿದ್ರೆ ಪಂಜಾಬ್ ಗಡಿಯಲ್ಲಿ ಬೆಳೆಯನ್ನು ಹೆಚ್ಚು ಕೊಯ್ಲು ಮಾಡಲಾಗಿದೆ ಎಂದು ಕೃಷಿ ಆಯುಕ್ತ ಪ್ರವೀಣ್ ಕುಮಾರ್ ಸಿಂಗ್ ಹೇಳಿದ್ದಾರೆ. ಇನ್ನು ರಾಜಸ್ಥಾನದಲ್ಲೂ ಕೊಯ್ಲು ಪೂರ್ಣವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ