Advertisment

144 ವರ್ಷದ ಮಹಾಕುಂಭಮೇಳಕ್ಕೆ ಇಂದು ತೆರೆ; ಮುಂದಿನ ಕುಂಭಮೇಳ ಎಲ್ಲಿ ನಡೆಯಲಿದೆ? ಯಾವಾಗ?

author-image
Gopal Kulkarni
Updated On
144 ವರ್ಷದ ಮಹಾಕುಂಭಮೇಳಕ್ಕೆ ಇಂದು ತೆರೆ; ಮುಂದಿನ ಕುಂಭಮೇಳ ಎಲ್ಲಿ ನಡೆಯಲಿದೆ? ಯಾವಾಗ?
Advertisment
  • ಇಂದು ಶಿವರಾತ್ರಿಯ ನಿಮಿತ್ಯ ಅಮೃತಸ್ನಾನದ ಮೂಲಕ ಮಹಾಕುಂಭಕ್ಕೆ ತೆರೆ
  • ಮುಂದಿನ ಮಹಾಕುಂಭಮೇಳ ನಡೆಯಲಿರುವುದು ಎಲ್ಲಿ ಮತ್ತು ಯಾವಾಗ ?
  • ಯಾವ ರಾಜ್ಯದ, ಯಾವ ನದಿಯ ದಡದಲ್ಲಿ ನಡೆಯಲಿದೆ ಮುಂದಿನ ಮಹಾಕುಂಭ?

ಜನವರಿ 13 ರಿಂದ ಪ್ರಯಾಗರಾಜ್​ನಲ್ಲಿ ಆರಂಭಗೊಂಡ ಮಹಾಕುಂಭಮೇಳ ಇಂದು ಸತತ ಆರು ವಾರಗಳ ನಂತರ ಅಂದ್ರೆ 45 ದಿನಗಳ ನಂತರ ಮಹಾಶಿವರಾತ್ರಿ ಪ್ರಯುಕ್ತ ಅಮೃತಸ್ನಾನದೊಂದಿಗೆ ಕೊನೆಗೊಳ್ಳಲಿದೆ. 144 ವರ್ಷಗಳ ನಂತರ ನಡೆದ ಮಹಾಕುಂಭಮೇಳಕ್ಕೆ ಭಕ್ತಾದಿಗಳಿಂದ ನಿರೀಕ್ಷೆ ಮೀರಿ ಪ್ರೋತ್ಸಾಹ ದೊರೆಯಿತು. 40 ಕೋಟಿ ಜನರ ಆಗಮನದ ನಿರೀಕ್ಷೆಯಿಟ್ಟಿದ್ದ ಆಡಳಿತ ಮಂಡಳಿಯ ಲೆಕ್ಕಾಚಾರವೇ ತಲೆಕೆಳಗಾಗುವಂತೆ ಸುಮಾರು 60 ಕೋಟಿಗೂ ಹೆಚ್ಚು ಜನರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಇಂದು ಶಿವರಾತ್ರಿ, ಶಿವ ಹಾಗೂ ಪಾರ್ವತಿಯ ಸ್ಮರಣಾರ್ಥವಾಗಿ ವಿಶೇಷ ದಿನದಂದ ಅಮೃತ ಸ್ನಾನದೊಂದಿಗೆ ಕೊನೆಗೊಳ್ಳಲಿದೆ.

Advertisment

ಕುಂಭಮೇಳವನ್ನು ಒಟ್ಟು ಪ್ರತಿ ಮೂರು ವರ್ಷಕ್ಕೊಮ್ಮೆ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ನಡೆಸಲಾಗುತ್ತದೆ. ಪ್ರಯಾಗರಾಜ್, ಹರಿದ್ವಾರ, ಉಜ್ಜೈನಿ ಹಾಗೂ ನಾಸಿಕ್​ ಇನ್ನು ಮತ್ತೆ ಪ್ರಯಾಗರಾಜ್​ನಲ್ಲಿ ಕುಂಭಮೇಳ ನಡೆಯಬೇಕು ಅಂದ್ರೆ 12 ವರ್ಷ ಕಾಯಬೇಕು 2037ಕ್ಕೆ ಪ್ರಯಾಗರಾಜ್​ನಲ್ಲಿ ಕುಂಭಮೇಳ ನಡೆಯಲಿದೆ.

ಮಹಾಕುಂಭಮೇಳದಲ್ಲಿ ಅಮೃತಸ್ನಾನದಿಂದಾಗಿ ಪವಿತ್ರ ನದಿಗಳ ಸಂಗಮದಲ್ಲಿ ಮಿಂದೆಳುವುದುರಿರಂದ ನಮ್ಮ ಪಾಪಗಳೆಲ್ಲಾ ಕರಗಿ ಹೊಗಿ, ಮೋಕ್ಷದ ದಾರಿಗೆ ನಾವು ತೆರೆದುಕೊಳ್ಳುತ್ತೇವೆ ಎಂಬ ಪ್ರತೀತಿ ಇದೆ. ಹೀಗಾಗಿ ಪ್ರತಿ ಕುಂಭಮೇಳವು ಭಕ್ತಸಾಗರದಿಂದ ತುಂಬಿ ಹೋಗುತ್ತದೆ. ಈಗ ಪ್ರಯಾಗರಾಜ್​ನಲ್ಲಿ ಮಹಾಕುಂಭಮೇಳಕ್ಕೆ ತೆರೆ ಬೀಳಲಿದೆ. ಇದಾದ ಬಳಿಕ ಕುಂಭಮೇಳ ಎಲ್ಲಿ ನಡೆಯಲಿದೆ ಎಂದು ನೋಡುವುದಾದ್ರೆ.

publive-image

ಇದನ್ನೂ ಓದಿ: ಮೊನಾಲಿಸಾಳಿಂದ ಐಐಟಿ ಬಾಬಾ.. ಇಂಟರ್​ನೆಟ್​ನಲ್ಲಿ ಸಂಚಲನ ಮೂಡಿಸಿದ ಮಹಾಕುಂಭದ ಈ ಘಟನೆಗಳು

Advertisment

ಮುಂದಿನ ಪೂರ್ಣ ಕುಂಭಮೇಳ ಮಹಾರಾಷ್ಟ್ರದ ನಾಸಿಕ್​ನಲ್ಲಿ 2027ರಂದು ನಡೆಯಲಿದೆ. 12 ವರ್ಷಗಳ ಹಿಂದೆ ಅಂದ್ರೆ 2013ರಲ್ಲಿ ನಾಸಿಕ್​ನಲ್ಲಿ ಪೂರ್ಣಕುಂಭಮೇಳ ನಡೆದಿತ್ತು. ನಾಸಿಕ್​ನ್ನು ಕೂಡ ನಾವು ಧಾರ್ಮಿಕ ಹಾಗೂ ಪೌರಾಣಿಕವಾಗಿ ಪವಿತ್ರ ಸ್ಥಳ ಎಂದು ಗುರುತಿಸುತ್ತೇವೆ. ಮುಂಬರುವ ಪೂರ್ಣಕುಂಭಮೇಳ ಗೋದಾವರಿ ನದಿ ತೀರದಲ್ಲಿ ನೆಡಯಲಿದೆ. ಇದನ್ನು ಸಿಂಹಹಸ್ತಾ ಕುಂಭಮೇಳ ಎಂದು ಕೂಡ ಕರೆಯಲಾಗುತ್ತದೆ. ಸುಮಾರು 17ನೇ ಶತಮಾನದಿಂದಲೂ ಕೂಡ ನಾಸಿಕ್​ನಲ್ಲಿ ಕುಂಭಮೇಳ ನಡೆಯುತ್ತಲೇ ಬಂದಿವೆ ಎಂಬುದಕ್ಕೆ ಪ್ರಮಾಣ ಸಿಗುತ್ತವೆ.

ಇದನ್ನೂ ಓದಿ:24 ವರ್ಷದ ಹಿಂದೆ ಮನೆ ಬಿಟ್ಟು ಹೋಗಿ ಕುಂಭಮೇಳದಲ್ಲಿ ಸಿಕ್ಕ ಕನ್ನಡಿಗ; ಸಾಧು ವೇಷಧಾರಿ ಸಿಕ್ಕಿದ್ದೇ ರೋಚಕ!

ಈಗಾಗಲೇ ಮಹಾರಾಷ್ಟ್ರ ಸರ್ಕಾರ ಕುಂಭಮೇಳದ ಆಯೋಜನೆಗೆ ರೂಪುರೇಷೆಗಳನ್ನು ಹಾಕಲು ಶುರು ಮಾಡಿದೆ. ಪಿಡಬ್ಲ್ಯೂಡಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನಿಶಾ ಪಟನ್ಕರ್​ ಇತ್ತೀಚೆಗೆ ನಾಸಿಕ್​ಗೆ ಭೇಟಿ ನೀಡಿ ಮುಂದಿನ ಯೋಜನೆಯ ಲೆಕ್ಕಾಚಾರವನ್ನು ಹಾಕಿದ್ದಾರೆ. ರಸ್ತೆಯ ಮೂಲಸೌಕರ್ಯದ ಅಭಿವೃದ್ಧಿಯ ಜೊತೆಗೆ ಟ್ರಾಫಿಕ್ ನಿರ್ವಹಣೆಯ ಬಗ್ಗೆಯೂ ಮತ್ತು ಸರಿಯಾದ ಸಂಪರ್ಕ ಕಲ್ಪಿಸುವ ಬಗ್ಗೆಯೂ ಚರ್ಚೆ ಮಾಡಿದ್ದಾರೆ ಎಂದು ವರದಿಗಳಾಗಿವೆ.

Advertisment

ನಾಸಿಕ್​ನ ಬಳಿಕ ಮಧ್ಯಪ್ರದೇಶದ ಉಜ್ಜೈನಿ ಮಹಾಕಾಳೇಶ್ವರನ ಸನ್ನಿಧಾನದಲ್ಲಿ 2028ಕ್ಕೆ ಮಹಾಕುಂಭಮೇಳ ನಡೆಯಲಿದೆ ಇದಾದ ಬಳಿಕ ಅಂದ್ರೆ 2030ಕ್ಕೆ ಮತ್ತೆ ಪ್ರಯಾಗರಾಜ್​ನಲ್ಲಿ ಅರ್ಧಕುಂಭಮೇಳವನ್ನು ನಡೆಸಲಾಗುವುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment