/newsfirstlive-kannada/media/post_attachments/wp-content/uploads/2025/03/TRAIN-HIJACK-2.jpg)
ಇತ್ತೀಚೆಗೆ ಪಾಕಿಸ್ತಾನದಲ್ಲಿ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಜಾಫರ್ ಎಕ್ಸ್ಪ್ರೆಸ್ ಟ್ರೇನ್ನನ್ನು ಹೈಜಾಕ್ ಮಾಡಿ ಸುಮಾರು 450 ಜನ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಕ್ವೆಟ್ಟಾದಿಂದ ಪೇಶಾವರ್ಗೆ ಹೊರಟಿದ್ದ ಟ್ರೇನ್ನ್ನು ಹೈಜಾಕ್ ಮಾಡಿದ್ದ ಬಿಎಲ್ಎ ಜಾಗತಿಕವಾಗಿ ದೊಡ್ಡ ಸುದ್ದಿಯಾಗಿತ್ತು. ಆದ್ರೆ ಭಾರತದಲ್ಲಿಯೂ ಕೂಡ ಇಂತಹುದೇ ಒಂದು ಘಟನೆ ನಡೆದಿತ್ತು. ದಶಕಗಳ ಹಿಂದೆ ಭಾರತದಲ್ಲಿಯೂ ಒಂದು ಟ್ರೇನ್ ಹೈಜಾಕ್ ಆಗಿತ್ತು.
ಫೆಬ್ರವರಿ 6, 2013ರಂದು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರೇನ್ ಹೈಜಾಕ್ ಆಗಿತ್ತು. ಛತ್ತೀಸ್ಗಢದ ದುರ್ಗ ಎಂಬಲ್ಲಿ ನಟೋರಿಯಸ್ ರೌಡಿಗಳ ಗುಂಪೊಂದು ಸೇರಿ ಜನ ಶತಾಬ್ದಿ ಟ್ರೇನ್ನನ್ನು ಹೈಜಾಕ್ ಮಾಡಿದ್ದರು. ಹೈಜಾಕ್ ಮಾಡಿದ್ದ ಗುಂಪು ಗನ್ ಪಾಯಿಂಟ್ನಲ್ಲಿ ಲೋಕೊ ಪೈಲೆಟ್ ಹಾಗೂ ಟ್ರೈನ್ ಸಿಬ್ಬಂದಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಜೊತೆಗೆ ಜನಶತಾಬ್ದಿ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಕೂಡ ಒತ್ತೆಯಾಳುಗಳಾಗಿದ್ದರು. ಟ್ರೇನ್ ಚಾಲಕನ ನೆತ್ತಿಯ ಮೇಲೆ ಗನ್ ಇಟ್ಟು ನಾವು ಹೇಳಿದ ಸ್ಟೇಷನ್ನತ್ತ ರೈಲು ಓಡಿಸು ಎಂಬ ಧಮ್ಕಿ ಕೂಡ ಹಾಕಿದ್ದರು.
ನಟೋರಿಯಸ್ ಗ್ಯಾಂಗ್ಸ್ಟಾರ್ ಉಪೇಂದ್ರನ ಮಗ ತನ್ನ ತಂದೆಯನ್ನು ಬಿಡುಗಡೆ ಮಾಡುವಂತೆ ಧಮ್ಕಿ ಹಾಕಿ ಈ ಒಂದು ಟ್ರೇನ್ನ್ನು ಹೈಜಾಕ್ ಮಾಡಿದ್ದ. ಈ ಟ್ರೇಜ್ ಹೈಜಾಕ್ ಹಿಂದಿದ್ದ ಮಾಸ್ಟರ್ ಮೈಂಡ್ ಅಂದ್ರೆ ಅದು ಉಪೇಂದ್ರನ ಮಗ ಪ್ರೀತಮ್ ಸಿಂಗ್ ಅಲಿಯಾಸ್ ರಾಜೇಶ್. ತನ್ನ ಸಹಾಯಕರೊಂದಿಗೆ ಸೇರಿ ಪಕ್ಕಾ ಪ್ಲ್ಯಾನ್ ಮಾಡಿ ಜನ ಶತಾಬ್ದಿ ಎಕ್ಸ್ಪ್ರೆಸ್ನ್ನು ಹೈಜಾಕ್ ಮಾಡಿದ್ದ.
ಈ ವೇಳೆ ನಟೋರಿಯಸ್ ಗ್ಯಾಂಗ್ಸ್ಟಾರ್ ಉಪೇಂದ್ರ ಬಿಲಾಸ್ಪುರ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷ ಅನುಭವಿಸುತ್ತಿದ್ದ. ಕ್ರಿಮಿನಲ್ ಕೇಸ್ವೊಂದರಲ್ಲಿ ಆರೋಪಿಯಾಗಿದ್ದ ಉಪೇಂದ್ರನ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ಅವನನ್ನು ಪೊಲೀಸ್ ಕಸ್ಟಡಿಗೆ ನೀಡಿತ್ತು. ವಿಚಾರಣೆ ಮುಗಿದ ಬಳಿಕ ಉಪೇಂದ್ರನನ್ನು ಕಸ್ಟಡಿಗೆ ಪಡೆದುಕೊಂಡ ಪೊಲೀಸರು ಬಿಲಾಸ್ಪುರ್ಗೆ ಅದೇ ಟ್ರೇನ್ನಲ್ಲಿ ವಾಪಸ್ ಬರುತ್ತಿದ್ದರು. ಇದನ್ನೇ ಎನ್ಕ್ಯಾಶ್ ಮಾಡಿಕೊಂಡ ಉಪೇಂದ್ರನ ಮಗ ಪ್ರೀತಮ್ ಸಿಂಗ್ ಜನ ಶತಾಬ್ದಿ ಎಕ್ಸ್ಪ್ರೆಸ್ನ್ನು ದುರ್ಗ ಮತ್ತ ರಾಯಗಢ ನಡುವೆ ಅವನ ಗುಂಪಿನೊಂದಿಗೆ ಹೈಜಾಕ್ ಮಾಡಿದ.ಟ್ರೇನ್ ಹೈಜಾಕ್ ಮಾಡಿದ ಪ್ರೀತಮ್ ಸಿಂಗ್ ಯಶಸ್ವಿಯಾಗಿ ತನ್ನ ತಂದೆಯನ್ನು ಕುಮ್ಹಾರಿ ರೈಲ್ವೆ ಸ್ಟೇಷನ್ ಬಳಿ ಬಿಡಿಸಿಕೊಂಡು ಸಮೀಪದ ರಾಯ್ಪುರ್ಗೆ ತನ್ನ ತಂದೆಯೊಂದಿಗೆ ಎಸ್ಕೇಪ್ ಆಗಿದ್ದ
ನಂತರ ಕೆಲವು ತಿಂಗಳ ಬಳಿಕ ಉಪೇಂದ್ರ ಹಾಗೂ ಅವನ ಪುತ್ರ ಪ್ರೀತಮ್ ಸಿಂಗ್ ಹಾಗೂ ಆತನ ಜೊತೆಗಾರರನ್ನು ಸೆರೆಹಿಡಿಯಲಾಯ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ