‘ನನಗೆ ಎಚ್ಚರವಾದಾಗ, ನನ್ನ ಸುತ್ತಲು..’ ದುರಂತದ ಕ್ಷಣ ಬಿಚ್ಚಿಟ್ರು ಬದುಕಿ ಬಂದ ಗಟ್ಟಿ ಜೀವ..

author-image
Ganesh
Updated On
ಹಾಸ್ಟೆಲ್​​ನಲ್ಲಿದ್ದ 24 ಭಾವಿ ವೈದ್ಯರೂ ಸೇರಿ 265 ಮಂದಿಯ ಜೀವ ತೆಗೆದ ವಿಮಾನ ದುರಂತ..
Advertisment
  • ಗುಜರಾತ್​​ನಲ್ಲಿ ವಿಮಾನ ಘೋರ ದುರಂತ ಸಂಭವಿಸಿದೆ
  • 242 ಪ್ರಯಾಣಿಕರು ಓರ್ವ ಮಾತ್ರ ಬದುಕಿ ಬಂದಿದ್ದಾನೆ
  • 20 ವರ್ಷಗಳಿಂದ ಲಂಡನ್​ನಲ್ಲಿದ್ದ ವಿಶ್ವಾಸ್ ಕುಮಾರ್

ಅಹ್ಮದಾಬಾದ್‌ ಏರ್ ಇಂಡಿಯಾ ಅಪಘಾತದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾನೆ. ಅಹ್ಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್.ಮಲಿಕ್ ಮಾತನಾಡಿ.. ನಮ್ಮ ಪೊಲೀಸರು 11ಎ ಸೀಟಿನಲ್ಲಿ ಬದುಕುಳಿದ ವ್ಯಕ್ತಿಯನ್ನು ಕಂಡುಕೊಂಡಿದ್ದಾರೆ. ಆ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬೆನ್ನಲ್ಲೇ ಬದುಕುಳಿದ ವ್ಯಕ್ತಿಯ ಹೆಸರು ಕೂಡ ಗೊತ್ತಾಗಿದೆ. ಆತನ ಹೆಸರು ವಿಶ್ವಾಸ್ ಕುಮಾರ್. ವರ್ಷ 40. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವಾಸ್ ಕುಮಾರ್ ರಮೇಶ್ (Vishwas Kumar Ramesh) ತಮಗೆ ಆಗಿರುವ ಅನುಭವ ಹಂಚಿಕೊಂಡಿದ್ದಾರೆ..

ಇದನ್ನೂ ಓದಿ: ವಿಮಾನ ದುರಂತದಲ್ಲಿ ಒಂದು ಪವಾಡ.. ಓರ್ವ ಬದುಕಿರುವ ಬಗ್ಗೆ ಕಮಿಷನರ್ ಮಾಹಿತಿ..

publive-image

ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ ದೊಡ್ಡ ಶಬ್ದವಾಯಿತು. ನಂತರ ವಿಮಾನ ಅಪಘಾತಕ್ಕೀಡಾಯಿತು. ಇದೆಲ್ಲ ಕೆಲವೇ ಕ್ಷಣಗಳಲ್ಲಿ ನಡೆದಿದೆ. ಕೊನೆಗೆ ನನಗೆ ಎಚ್ಚರವಾದಾಗ ನನ್ನ ಸುತ್ತಲೂ ಮೃತದೇಹಗಳು ಬಿದ್ದಿದ್ದವು. ನಾನು ಭಯಗೊಂಡು ಓಡಿದೆ. ವಿಮಾನದ ತುಣುಕುಗಳು ನನ್ನ ಸುತ್ತಲೂ ಹರಡಿಕೊಂಡಿದ್ದವು. ಯಾರೋ ನನ್ನನ್ನು ರಕ್ಷಿಸಿ ಆ್ಯಂಬುಲೆನ್ಸ್​ನಲ್ಲಿ ಹಾಕಿದರು. ನಂತರ ಆಸ್ಪತ್ರೆಗೆ ಕರೆದೊಯ್ದರು ಎಂದಿದ್ದಾರೆ.

ಸುಮಾರು 20 ವರ್ಷಗಳಿಂದ ವಿಶ್ವಾಸ್ ಕುಮಾರ್​ ಲಂಡನ್​ನಲ್ಲಿ ನೆಲೆಸಿದ್ದರು. ತಮ್ಮ ಕುಟುಂಬಸ್ಥರ ಭೇಟಿಗಾಗಿ ಭಾರತಕ್ಕೆ ಬಂದಿದ್ದರು. ಕುಟುಂಬದ ಜೊತೆ ಕಾಲ ಕಳೆದು ಸಹೋದರ ಅಜಯ್ ಕುಮಾರ್ ಜೊತೆ ಲಂಡನ್​ಗೆ ವಾಪಸ್ ಹೋಗುವಾಗ ದುರಂತ ಸಂಭವಿಸಿದೆ.

ಇದನ್ನೂ ಓದಿ: ವಿಜಯ್ ರೂಪಾನಿ ದುರಂತ ಅಂತ್ಯ.. ಶೋಕದಲ್ಲಿ ಮುಳುಗಿದ ಗುಜರಾತ್..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment