BBK11: ಬಿಗ್​ಬಾಸ್​ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಯಾವಾಗ? ಹೇಗಿದೆ ಪ್ಲಾನ್​?

author-image
Veena Gangani
Updated On
BBK11: ಬಿಗ್​ಬಾಸ್​ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಯಾವಾಗ? ಹೇಗಿದೆ ಪ್ಲಾನ್​?
Advertisment
  • 93ನೇ ದಿನಕ್ಕೆ ಕಾಲಿಟ್ಟು ಮುನ್ನುಗ್ಗುತ್ತಿದೆ ಬಿಗ್​ಬಾಸ್​ ಸೀಸನ್​ 11
  • ಗ್ರ್ಯಾಂಡ್‌ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಅಲರ್ಟ್​ ಆಗಿದ್ದಾರಾ?
  • ಬಿಗ್​ಬಾಸ್​ ಟಾಪ್​ 5ನಲ್ಲಿ ಯಾವೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಗೊತ್ತಾ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 93ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಇನ್ನೇನೋ ಕೆಲವೇ ದಿನಗಳಲ್ಲಿ ಬಿಗ್​ಬಾಸ್ ಸೀಸನ್ 11ರ ಗ್ರ್ಯಾಂಡ್​ ಫಿನಾಲೆ ಹತ್ತಿರವಾಗುತ್ತಿದೆ. ಗ್ರ್ಯಾಂಡ್‌ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಮನೆಯ 9 ಸ್ಪರ್ಧಿಗಳು ಹೈ ಅಲರ್ಟ್‌ ಆಗಿದ್ದಾರೆ.

ಇದನ್ನೂ ಓದಿ:BBK11: ಬಿಗ್​ಬಾಸ್​ ಮನೆಯಲ್ಲಿ ದುರಹಂಕಾರದ ದರ್ಬಾರ್; ಉಗ್ರಂ ಮಂಜುಗೆ ಭವ್ಯಾ ಗೌಡ ಸಖತ್ ಟಾಂಗ್

publive-image

ಇನ್ನೂ, ಈ ಬಾರಿಯ ಸೀಸನ್​ 11 ಗ್ರ್ಯಾಂಡ್​ ಫಿನಾಲೆಯನ್ನು ಎರಡು ವಾರಗಳ ಕಾಲ ಮುಂದಕ್ಕೆ ಹಾಕುವ ಪ್ಲಾನ್​ನಲ್ಲಿದ್ದಾರಂತೆ ಬಿಗ್​ಬಾಸ್​ ಟೀಮ್. ಏಕೆಂದರೆ ಈ ಬಾರಿಯ ಬಿಗ್​ಬಾಸ್​ ಸೀಸನ್ 11 ಹೊಸ ಅಧ್ಯಾಯ ಟೈಟಲ್​ನೊಂದಿಗೆ ಶುರುವಾಗಿತ್ತು. ಹೀಗಾಗಿ ಈ ಬಾರಿಯ ಬಿಗ್​ಬಾಸ್​ ಸೀಸನ್​ 11, 125 ದಿನಗಳ ನಡೆಸಬೇಕು ಅಂತ ಪ್ಲಾನ್​ನಲ್ಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

publive-image

ಸಾಮಾನ್ಯವಾಗಿ ಕಳೆದ 10 ಸೀಸನ್​ಗಳಿಗಿಂತ ಈ ಬಾರಿಯ ಸೀಸನ್ ಹೊಸ ಅಧ್ಯಾಯದೊಂದಿಗೆ ತೆರೆಗೆ ಬಂದಿತ್ತು. ಮೊದಲು ಸ್ವರ್ಗ ಹಾಗೂ ನರಕ ಎಂಬ ಕಾನ್ಸೆಪ್ಟ್ ಮೂಲಕ ಬಂದಿದ್ದರಿಂದ ಅತೀ ಹೆಚ್ಚು ವೀಕ್ಷಕರನ್ನು ತನ್ನತ್ತ ಸೆಳೆದುಕೊಂಡು ಟಿಆರ್​ಪಿಯಲ್ಲೂ ಟಾಪ್​ ಸ್ಥಾನವನ್ನು ಪಡೆದುಕೊಂಡು ಮುನ್ನುಗ್ಗುತ್ತಿತ್ತು. ಜೊತೆಗೆ ವೀಕ್ಷಕರಿಂದ ಒಳ್ಳೆಯ ರೆಸ್ಪಾನ್ಸ ಪಡೆದುಕೊಂಡು ಮುನ್ನುಗ್ಗುತ್ತಿದೆ. ಹೀಗಾಗಿ ವೀಕ್ಷಕರು ಕೂಡ ಟಾಪ್​ 5ನಲ್ಲಿ ಯಾವೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಕುತೂಹಲ ಮನೆ ಮಾಡಿದೆ.​

ಇದನ್ನೂ ಓದಿ: ಇಡೀ ದೇಶದಲ್ಲಿ ಕಿಟಕಿ ಇಲ್ಲದ ಮನೆ ಕಟ್ಟಲು ಆದೇಶ ಹೊರಡಿಸಿದ ಸರ್ಕಾರ; ಕಾರಣವೇನು?

ಸದ್ಯ ಬಿಗ್​ಬಾಸ್​ ಸೀಸನ್​ 11, 93ನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರದ ಸಂಚಿಕೆಯಲ್ಲಿ ಐಶ್ವರ್ಯಾ ಸಿಂಧೋಗಿ ಬಿಗ್​ಬಾಸ್​ ಮನೆಗೆ ವಿದಾಯ ಹೇಳಿದ್ದರು. ಹೀಗಾಗಿ ಈಗ ಬಿಗ್​ಬಾಸ್​ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 9 ಸ್ಪರ್ಧಿಗಳ ಪೈಕಿ ಯಾರು ಟಾಪ್​ 5 ಫೈನಲಿಸ್ಟ್​ ಆಗಲಿದ್ದಾರೆ ಅಂತ ಮುಂದಿನ ಕೆಲವು ದಿನಗಳಲ್ಲಿ ಗೊತ್ತಾಗಲಿದೆ.

publive-image

ಬಿಗ್​ಬಾಸ್​ ಸೀಸನ್​ 9 ಗ್ರ್ಯಾಂಡ್​ ಫಿನಾಲೆಯೂ 2022, 31 ಡಿಸೆಂಬರ್ ರಂದು ನಡೆದಿತ್ತು. ಸೀಸನ್​ 9ರಲ್ಲಿ ರೂಪೇಶ್‌ ರಾಜಣ್ಣ, ರೂಪೇಶ್‌ ಶೆಟ್ಟಿ , ರಾಕೇಶ್‌ ಅಡಿಗ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್‌ ಟಾಪ್‌ 5ರ ಸ್ಥಾನದಲ್ಲಿ ಇದ್ದರು. ಇವರ ಪೈಕಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆದ್ರೂ ರೂಪೇಶ್ ಶೆಟ್ಟಿ. ಬಿಗ್​ಬಾಸ್​ ಸೀಸನ್​ 10 ಗ್ರ್ಯಾಂಡ್​ ಫಿನಾಲೆಯೂ 2023 ಜನವರಿ 29ರಂದು ನಡೆದಿತ್ತು. ಸೀಸನ್​ 10ರಲ್ಲಿ ಟಾಪ್‌ 5ರ ಸ್ಥಾನದಲ್ಲಿ ಡ್ರೋನ್​​ ಪ್ರತಾಪ್​​, ಸಂಗೀತಾ, ಕಾರ್ತಿಕ್, ವಿನಯ್​​​, ವರ್ತೂರು ಸಂತೋಷ್​ ಇದ್ದರು. ಆದರೆ ಈ ಬಾರಿಯ ಸೀಸನ್​ 11ರಲ್ಲಿ ಯಾವೆಲ್ಲಾ ಸ್ಪರ್ಧಿಗಳು ಟಾಪ್​ 5 ಫೈನಲಿಸ್ಟ್​ ಆಗಿ ಹೊರ ಹೊಮ್ಮಿಲಿದ್ದಾರೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment