/newsfirstlive-kannada/media/post_attachments/wp-content/uploads/2025/02/VIJAY-EKADASHI.jpg)
ವಿಜಯ ಏಕಾದಶಿ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರವಾದ ದಿನ ಎಂದು ಹೇಳಲಾಗುತ್ತದೆ. ಇದು ಭವಾನ್ ವಿಷ್ಣುವಿಗೆ ಅರ್ಪಿತವಾದ ದಿನ. ಫೆಬ್ರವರಿ 24 ರಂದು ಈ ವರ್ಷ ವಿಜಯ ಏಕಾದಶಿ ಬಂದಿದೆ. ಕೃಷ್ಣ ಪಕ್ಷದಂದು ಏಕಾದಶಿ ತಿಥಿಯಂದೂ ಈ ವಿಜಯ ಏಕಾದಶಿ ಬಂದಿದ್ದು.
ಈ ವರ್ಷದ ವಿಜಯ ಏಕಾದಶಿಯ ಬಗ್ಗೆ ಹಲವು ಗೊಂದಲಗಳಿವೆ. ಉಪವಾಸವನ್ನು ಯಾವಾಗ ಆರಂಭಮಾಡಬೇಕು ಎಂಬ ಬಗ್ಗೆ ಅನೇಕ ಸಂಶಯಗಳಿವೆ. ಫೆಬ್ರವರಿ 23 ರಂದಾ ಇಲ್ಲವೇ 24 ರಂದ ಎಂದು. ಹಿಂದು ಕ್ಯಾಲೆಂಡರ್ ಪ್ರಕಾರ ಏಕಾದಶಿ ತಿಥಿ ಫೆಬ್ರವರಿ 23 11.55 ರಿಂದ ಪ್ರಾರಂಂಭವಾಗುತ್ತದೆ. ಮತ್ತು ಫೆಬ್ರವರಿ 24 1.44ಕ್ಕೆ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ನೀವು 24 ರಂದು ಅಂದರೆ ಸೋಮವಾರ ಬೆಳಗ್ಗೆ ಸೂರ್ಯೋದಯದಿಂದ ಉಪವಾಸವನ್ನು ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.25 ರಂದು ಪರಾಣ ಅಂದ್ರೆ ಉಪವಾಸವನ್ನು ಮುಗಿಸಬಹುದು ಎಂದು ಹಿಂದೂ ಕ್ಯಾಲೆಂಡರ್ ಹೇಳುತ್ತದೆ.
ಇದನ್ನೂ ಓದಿ:ಪ್ರಯಾಣಿಕರೇ ಎಚ್ಚರ.. ಮತ್ತೆ ಕಾಲ್ತುಳಿತದ ಭೀತಿ; ದೇಶದ ರೈಲು ನಿಲ್ದಾಣಗಳಲ್ಲಿ ಫುಲ್ ಅಲರ್ಟ್ ಘೋಷಣೆ
ವಿಜಯ ಏಕಾದಶಿ ಹಿಂದೂಗಳ ಮಹತ್ವದ ಒಂದು ಸಂಪ್ರದಾಯ. ಈ ಉಪವಾಸವನ್ನು ಆಚರಿಸುವುದರಿಂದ ಯಶಸ್ಸು, ಗೆಲುವು ಹಾಗೂ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಗಳು ಇವೆ. ಇದರಿಂದ ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಕೂಡ ಗಳಿಸಬಹದು ಎಂಬ ನಂಬಿಕೆಗಳು ಕೂಡ ಇವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ