/newsfirstlive-kannada/media/post_attachments/wp-content/uploads/2025/03/SUNITA.jpg)
8 ದಿನದ ಬಾಹ್ಯಾಕಾಶ ಅಧ್ಯಯನಕ್ಕೆ ಹೋದವರು 9 ತಿಂಗಳ ಕಳೆದರೂ ಬರಲು ಸಾಧ್ಯವಾಗಿರಲಿಲ್ಲ. ಕೊನೆಗೂ ಸಂಕಷ್ಟಕ್ಕೆ ಸಿಲುಕಿದ್ದ ಇಬ್ಬರು ಗಗನಯಾತ್ರಿಗಳಿಗೆ ಬಾಹ್ಯಾಕಾಶದಿಂದ ಮುಕ್ತಿ ಸಿಗುವ ಸಮಯ ಬಂದಿದೆ. ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಎಲಾನ್ ಮಸ್ಕ್ ಅವರ SpaceX ನೌಕೆ ನಭಕ್ಕೆ ಚಿಮ್ಮಿದೆ.
ನಾಸಾ (NASA) ಮತ್ತು ಸ್ಪೇಸ್‌ಎಕ್ಸ್ (SpaceX) ಬಾಹ್ಯಾಕಾಶ ನೌಕೆಯನ್ನು ಕಳುಹಿಸಿವೆ. ಇಂದು ಬೆಳಗ್ಗೆ 4.33 ಸುಮಾರಿಗೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್-9 ರಾಕೆಟ್ ಯಶಸ್ವಿಯಾಗಿ ಉಡಾವಣೆ ಆಗಿದೆ. 4 ಸದಸ್ಯರನ್ನು ಹೊತ್ತೊಯ್ಯುವ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ (Crew-10 mission) ಅನ್ನು ರಾಕೆಟ್‌ನ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ.
ಪಾಲ್ಕನ್ ರಾಕೆಟ್ನಲ್ಲಿ ಯಾರೆಲ್ಲ ಇದ್ದಾರೆ..?
ನಾಸಾದ ಆನ್ನೆ ಮೆಕ್‌ಕ್ಲೇನ್ ( Anne McClain ), ನಿಕೋಲ್ ಅಯರ್ಸ್ (Nichole Ayers), ಜಪಾನ್‌ನ ಬಾಹ್ಯಾಕಾಶ ಸಂಸ್ಥೆ JAXA ಗಗನಯಾತ್ರಿ ಟಕುಯಾ ಒನಿಶಿ (Takuya Onishi) ಮತ್ತು ರಷ್ಯಾದ ಕಿರಿಲ್ ಪೆಸ್ಕೋವ್ (Kirill Peskov) ಬಾಹ್ಯಾಕಾಶದತ್ತ ಹೊರಟಿದ್ದಾರೆ. ಈ ನಾಲ್ವರು ಸುನಿತಾ ವಿಲಿಯಮ್ಸ್, ವಿಲ್ಮೋರ್ ಅವರನ್ನು ಭೂಮಿಗೆ ವಾಪಸ್ ಕರೆತರುವಲ್ಲಿ ಪ್ರಮುಖ ಕಾರ್ಯಚರಣೆ ನಡೆಸಲಿದ್ದಾರೆ.
ಇದನ್ನೂ ಓದಿ: ಗುಡ್ನ್ಯೂಸ್.. ಸುನಿತಾ ವಿಲಿಯಮ್ಸ್ ಭೂಮಿಗೆ ಬರುವ ಬಗ್ಗೆ ಅಪ್ಡೇಟ್ಸ್..!
ಇವತ್ತು NASA-SpaceX ನೌಕೆಯು ಬಾಹ್ಯಾಕಾಶ ನಿಲ್ದಾಣ ತಲುಪಲಿದೆ. ನಂತರ ಡಾಕಿಂಗ್ ಪ್ರಕ್ರಿಯೆ ನಡೆಯಲಿವೆ ಕ್ರೂ-9ನಲ್ಲಿರುವ ನಾಲ್ವರು ಗಗನಯಾತ್ರಿಗಳು ಈ ಪ್ರಕ್ರಿಯೆ ನಡೆಸಲಿದ್ದಾರೆ. ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಅಂದರೆ ಮಾರ್ಚ್ 19 ರಂದು ನೌಕೆಯು ಭೂಮಿಯತ್ತ ಹೊರಡಲಿದೆ. ಇದರರ್ಥ ಸುನಿತಾ ವಿಲಿಯಮ್ಸ್, ವಿಲ್ಮೋರ್ ಹಾಗೂ ಕ್ರೂ-9 ಮೂಲಕ ಬಂದಿರುವ ನಾಲ್ವರಲ್ಲಿ ಇಬ್ಬರು ಮಾರ್ಚ್ 19 ರಂದು ಭೂಮಿ ಕಡೆಗೆ ಹೊರಡುತ್ತಾರೆ. ಮಾರ್ಚ್ 19 ರಂದು ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಲಿದ್ದಾರೆ.
ಭೂಮಿಗೆ ಬರೋದು ಯಾವಾಗ?
ಎಲ್ಲವೂ ಅಂದ್ಕೊಂಡಂತೆ ಆದ್ರೆ ಸುನಿತಾ ವಿಲಿಯಮ್ಸ್, ವಿಲ್ಮೋರ್ ಮಾರ್ಚ್ನಲ್ಲೇ ಭೂಮಿ ಮೇಲೆ ಇರುತ್ತಾರೆ. 9 ತಿಂಗಳ ನಂತರ ಭೂಮಿಗೆ ಬರ್ತಿರುವ ಕಾರಣ ಅವರಿಗೆ ಹವಾಮಾನ ಅನುಕೂಲಕರ ಆಗಿರಬೇಕು. ಬಾಹ್ಯಾಕಾಶದಿಂದ ಹೊರಟ ಎರಡು-ಮೂರು ದಿನಗಳ ನಂತರ ಭೂಮಿ ಮೇಲೆ ಇರುತ್ತಾರೆ.
ಗಗನಯಾತ್ರಿಗಳ ಸುರಕ್ಷಿತ ಮರಳುವಿಕೆಗೆ ನಾಸಾ ಮತ್ತು ಸ್ಪೇಸ್‌ಎಕ್ಸ್ ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ. ಅಂಟ್ಲಾಂಟಿಕ್ ಸಾಗರದಲ್ಲಿ ಬಂದು ಇಳಿಯಲಿದ್ದಾರೆ. ಬಾಹ್ಯಾಕಾಶದಿಂದ ಭೂಮಿಯ ಮೇಲೆ ಇಳಿಯುವ ಪ್ರಕ್ರಿಯೆಯನ್ನು ಸ್ಪ್ಲಾಶ್‌ಡೌನ್ ಎನ್ನಲಾಗುತ್ತದೆ.
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಮೂಲಕ ಕೇವಲ ಎಂಟು ದಿನಗಳಿಗಾಗಿ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿದ್ದರು. ಆದರೆ ಸ್ಟಾರ್‌ಲೈನರ್‌ನಲ್ಲಿನ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಇನ್ನೂ ಹಿಂತಿರುಗಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ‘ಪೊಲಿಟಿಷಿಯನ್, ಮಾಜಿ MLA ಅವನೇ ನನ್ನ ಗಂಡ’ ಎಂದ ಮಹಿಳಾ ಅಧಿಕಾರಿ; ದಡೇಸೂಗೂರ್ 2ನೇ ಮದುವೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ