/newsfirstlive-kannada/media/post_attachments/wp-content/uploads/2024/11/Odisha-1.jpg)
ವಿಚಾರಣಾಧೀನ ಕೈದಿಯೊಬ್ಬ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ದೃಶ್ಯ ಸಮೇತ ಘಟನೆ ಬೆಳಕಿಗೆ ಬಂದಿದೆ. ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣ ಸಂಬಂಧ ಜುಯಲ್​ ಸಬರ್​ ಎಂಬ ವಿಚಾರಣಾಧೀನ ಕೈದಿಯನ್ನು ಬಂಧಿಸಲಾಗಿತ್ತು. ಆತ ತಪ್ಪಿಸಿಕೊಳ್ಳುತ್ತಾನೆಂಬ ಕಾರಣಕ್ಕೆ ಕಾಲಿಗೆ ಸರಪಳಿಯನ್ನು ಹಾಕಲಾಗಿತ್ತು. ಆದರೆ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದು ಹೋಟೆಲ್​ನಲ್ಲಿ​ ತಂಗಿದ್ದಾಗ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ರಸ್ತೆ ದಾಟುವಾಗ ಟೆಕ್ಕಿಗೆ ಡಿಕ್ಕಿ ಹೊಡೆದ ಬೆನ್ಜ್ ಕಾರು.. ಯುವತಿ ಸ್ಥಳದಲ್ಲೇ ಸಾ*ವು
/newsfirstlive-kannada/media/post_attachments/wp-content/uploads/2024/11/Odisha-1.jpg)
ಜುಯಲ್​ ಸಬರ್​ ಮಹಾರಾಷ್ಟ್ರದಲ್ಲಿ ಮಾದಕ ದ್ರವ್ಯ ವಸ್ತುಗಳನ್ನು ಕಳ್ಳಸಾಗಣಿಕೆ ಮಾಡುತ್ತಿದ್ದ ಎಂಬ ಕಾರಣಕ್ಕೆ ರೈಲ್ವೆ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತನಿಖೆಗೆ ಒಳಪಡಿಸಿದಾಗ ಅತ್ಯಾಚಾರ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದರು. ಹೀಗಾಗಿ ನವೆಂಬರ್​ 2 ರಂದು ನ್ಯಾಯಾಲಯ ವಿಚಾರಣೆಗಾಗಿ ಗಜಪತಿಗೆ ಕರೆದುಕೊಂಡು ಬರಲಾಗಿತ್ತು.
ಇದನ್ನೂ ಓದಿ: ದೀಪಾವಳಿ ಹಬ್ಬದಂದು ಗಲಾಟೆ.. ಗಂಡನ ಮೊದಲ ಪತ್ನಿಗೆ 50 ಬಾರಿ ಇರಿದ 2ನೇ ಹೆಂಡತಿ
/newsfirstlive-kannada/media/post_attachments/wp-content/uploads/2024/11/Odisha-2.jpg)
ಜುಯಲ್​​ನನ್ನು ನಾಗ್ಪುರದಿಂದ ಗಜಪತಿಗೆ ಕರೆದುಕೊಂಡು ಬಂದ ಪೊಲೀಸರು ಅಂದು ಹೋಟೆಲ್​​​ನಲ್ಲಿ ತಂಗಿದ್ದರು. ಜುಯೆಲ್ ತಪ್ಪಿಸಿಕೊಳ್ಳುತ್ತಾನೆ ಎಂಬ ಕಾರಣಕ್ಕೆ ಆತನ ಕಾಲಿಗೆ ಸರಪಳಿ ಹಾಕಿದ್ದರು. ಆದರೆ ಪೊಲೀಸರ ಕಣ್ಣು ತಪ್ಪಿಸಿ ನಿಧಾನವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ದೃಶ್ಯ ಹೋಟೆಲ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರು ಜುಯಲ್​​ನನ್ನು ಹುಡುಕುತ್ತಿದ್ದಾರೆ. ಅದಕ್ಕಾಗಿ ವಿಶೇಷ ತಂಡ ರಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us