ಭಾರತದಲ್ಲಿ ಮೊಟ್ಟ ಮೊದಲು ಬಸ್​ ಪ್ರಯಾಣ ಶುರುವಾಗಿದ್ದು ಯಾವಾಗ? ಇದರ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?

author-image
Gopal Kulkarni
Updated On
ಭಾರತದಲ್ಲಿ ಮೊಟ್ಟ ಮೊದಲು ಬಸ್​ ಪ್ರಯಾಣ ಶುರುವಾಗಿದ್ದು ಯಾವಾಗ? ಇದರ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?
Advertisment
  • ಭಾರತದಲ್ಲಿ ಮೊದಲ ಬಸ್​ ಸಂಚಾರ ಆರಂಭವಾಗಿದ್ದು ಎಲ್ಲಿ?
  • ಮೊದಲ ಬಸ್​ ಎಲ್ಲಿಂದ ಎಲ್ಲಿಯವರೆಗೆ ಸಂಚರಿಸಿತ್ತು ಗೊತ್ತಾ?
  • ಅಂದು ಪ್ರಯಾಣ ಆರಂಭಿಸಿದ ಬಸ್​ನ ಟಿಕೆಟ್ ದರ ಎಷ್ಟಿತ್ತು?

ವರ್ತಮಾನದಲ್ಲಿ ಮನುಷ್ಯನ ಓಡಾಟಕ್ಕೆ ಅನೇಕ ಸೌಲಭ್ಯಗಳಿವೆ. ಟ್ರೈನ್, ಪ್ರೈವೇಟ್ ಕಾರು, ಸ್ವಂತ ಕಾರು, ವಿಮಾನ ಹೀಗೆ ಹಲವು ಸೌಲಭ್ಯಗಳಿವೆ. ಆದ್ರೆ ದೇಶದಲ್ಲಿ ಅತಿಹೆಚ್ಚು ಜನರು ಪ್ರಯಾಣ ಮಾಡುವುದು ಬಸ್​ನಲ್ಲಿ. ದೂರದ ಊರಿನ ಪ್ರಯಾಣದಿಂದ ಹಿಡಿದು ಪಕ್ಕದ ಸಿಟಿಗೆ ಸಂತೆಗೆ ಹೋಗಲು ಕೂಡ ಜನರು ಹೆಚ್ಚು ಆಯ್ಕೆ ಮಾಡೋದು ಬಸ್​ನ್ನೇ. ಭಾರತದಲ್ಲಿ ಒಟ್ಟು ರಾಜ್ಯ ಸರ್ಕಾರದ ಅಧೀನದಲ್ಲಿರುವ 1.4 ಲಕ್ಷ ಬಸ್​​ಗಳಿವೆ ಎಂಬುದು ಸರ್ಕಾರಿ ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ:₹5 ಲಕ್ಷಕ್ಕೆ ಒಂದು ಹೆಣ್ಣು.. 1,500 ಕನ್ಯೆಯರನ್ನು ಮಾರಾಟ ಮಾಡಿದ ಮಹಿಳೆ; ಇದು ಖತರ್ನಾಕ್ ಜಾಲ!

ದೇಶದ ಶ್ರೀಸಾಮಾನ್ಯನ ಪ್ರಯಾಣಕ್ಕೆ ಕಡಿಮೆ ದರ ಹಾಗೂ ಸುಖಕರ ಪ್ರಯಾಣಕ್ಕೆ ಬಸ್​ಗಳು ಹೇಳಿ ಮಾಡಿಸಿದಂತಿವೆ. ಕಡಿಮೆ ದರದಲ್ಲಿ ನಾವು ಅಂದುಕೊಂಡಿರುವ ಗಮ್ಯವನ್ನು ಸರಳವಾಗಿ ತಲುಪಬಹುದು. ಈಗೀಗಂತಲೂ, ಹೆಣ್ಣು ಮಕ್ಕಳಿಗೆ ಬಸ್ ಫ್ರೀ ಮಾಡಿದ ಮೇಲಂತೂ ಅನೇಕ ರಾಜ್ಯಗಳಲ್ಲಿ ಸರ್ಕಾರಿ ಬಸ್​ಗಳಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೇ ಪರದಾಡುವ ಪರಿಸ್ಥಿತಿ ಬಂದಿದೆ. ಬಸ್​ ಬಗ್ಗೆ ನಾವು ಈ ಎಲ್ಲಾ ಪೀಠಿಕೆಗಳನ್ನು ಏಕೆ ಹಾಕುತ್ತಿದ್ದೇವೆ ಗೊತ್ತಾ? ನಮ್ಮ ದೇಶದಲ್ಲಿ ಬಸ್​ನ ಇತಿಹಾಸ ಹೇಗೆ ಶುರುವಾಗಿದ್ದು ಎಂದು ತಿಳಿಸಲು.

publive-image

ನಿಮಗೆ ಗೊತ್ತಾ ಭಾರತದಲ್ಲಿ ಮೊಟ್ಟ ಮೊದಲು ಬಸ್​ ಪ್ರಯಾಣ ಮಾಡಿದ್ದು ಎಲ್ಲಿ ಅಂತ? ಮತ್ತು ಅದು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಿತ್ತು ಅಂತಾ? ಅದರ ಬಗ್ಗೆ ನಾವು ನಿಮಗೆ ಇಲ್ಲಿ ವಿವರಿಸಲಿದ್ದೇವೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್​ ಸರ್ವಿಸ್ ಶುರುವಾಗಿದ್ದು ಜುಲೈ 15, 1926ರಲ್ಲಿ. ಮಹಾರಾಷ್ಟ್ರದ ಮುಂಬೈನಲ್ಲಿ ಈ ಬಸ್ ಮೊದಲ ಬಾರಿ ಸೇವೆ ನೀಡಲು ಆರಂಭ ಮಾಡಿತ್ತು. ಮೊದಲ ಪ್ರಯಾಣ ಕೋಲಬಾದಿಂದ ಜ್ಯೋತಿಬಾ ಪುಳೆ ಮಾರ್ಕೆಟ್​ವರೆಗೂ ಈ ಬಸ್ ಸಂಚಾರ ಮಾಡಿತ್ತು. ಮತ್ತು ಆ ಸಮಯದಲ್ಲಿ ಟಿಕೆಟ್ ದರ ಕೇವಲ ನಾಲ್ಕು ಆಣೆ ಇತ್ತು ಎಂಬುದು ಇನ್ನು ಆಶ್ಚರ್ಯದ ಸಂಗತಿ.

ಇದನ್ನೂ ಓದಿ:ಜೀವಂತ ಮೀನು ದೇಹ ಸೇರಿ ಹೋಯ್ತು ಯುವಕನ ಜೀವ.. ಅಸಲಿಗೆ ಆಗಿದ್ದೇನು?

publive-image

ಭಾರತದ ಮೊದಲ ಬಸ್​ ಸಾರಿಗೆಯನ್ನು ಬಾಂಬೆ ಇಲೆಕ್ಟ್ರಿಕ್​ ಸಪ್ಲೈ ಆ್ಯಂಡ್ ಟ್ರಾನ್ಸ್​ಪೋರ್ಟ್​ ಸಂಸ್ಥೆ ಅಂದ್ರೆ BEST ಸಂಸ್ಥೆ ಈ ಬಸ್​ ಸೇವೆಯನ್ನು ಆರಂಭ ಮಾಡಿತ್ತು. ಕೇವಲ ಇಷ್ಟು ಮಾತ್ರವಲ್ಲ ಭಾರತದ ಸ್ವತಂತ್ರಪೂರ್ವದಲ್ಲಿಯೇ ಅಂದರೆ 1937ರಲ್ಲಿಯೇ ಡಬಲ್ ಡೆಕ್ಕರ್ ಬಸ್ ಸರ್ವಿಸ್​ ಶುರು ಆಗಿತ್ತು. ಈ ಬಸ್​ನಲ್ಲಿ ಪ್ರಯಾಣಿಕರಿಗೆ ಬಸ್​ನ ಟಾಪ್​ ಮೇಲೋಂದು ಕುಳಿತುಕೊಳ್ಳಲು ವ್ಯವಸ್ಥೆ ಮಾಡಿ ಅವರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment