/newsfirstlive-kannada/media/post_attachments/wp-content/uploads/2025/06/5th-Gen-Figh.jpg)
ಭಾರತ ಈಗ ಸ್ವದೇಶಿ 5ನೇ ಜನರೇಷನ್ ಫೈಟರ್ ಜೆಟ್ ನಿರ್ಮಾಣಕ್ಕೆ ನಿರ್ಧರಿಸಿದೆ. ಸ್ವದೇಶಿ 5ನೇ ಜನರೇಷನ್ ಫೈಟರ್ ಜೆಟ್ ನಿರ್ಮಾಣಕ್ಕೆ ಖಾಸಗಿ ಕಂಪನಿಗಳಿಂದ ಬಿಡ್ ಆಹ್ವಾನಿಸಿದೆ. ಖಾಸಗಿ ಕಂಪನಿಗಳು, ಖಾಸಗಿ ಕಂಪನಿಗಳ ಗುಂಪು, ಕನ್ಸರ್ಟಿಯಮ್ ಫೈಟರ್ ಜೆಟ್ (Consortium fighter jet) ನಿರ್ಮಾಣಕ್ಕೆ ಆಸಕ್ತಿ ವ್ಯಕ್ತಪಡಿಸಿ ಬಿಡ್ ಸಲ್ಲಿಸಬಹುದು.
ಭಾರತದ ಏರೋಸ್ಪೇಸ್ ಕಂಪನಿಗಳು ಮೊದಲಿಗೆ 5ನೇ ಜನರೇಷನ್ ಫೈಟರ್ ಜೆಟ್ನ ಪ್ರೋಟೋಟೈಪ್ ನಿರ್ಮಿಸಬೇಕಾಗಿದೆ. ಪ್ರೋಟೋಟೈಪ್ ಅಂದರೆ ಫೈಟರ್ ಜೆಟ್ನ ಮಾದರಿಯನ್ನು (Prototype fighter jets) ನಿರ್ಮಿಸಬೇಕಾಗಿದೆ. ಈ ಪ್ರೋಟೋಟೈಪ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು 15 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಿದೆ.
ಇದನ್ನೂ ಓದಿ: ಫೋನ್ ಖರೀದಿಗೆ ಸಾವಿರ, ಸಾವಿರ ಖರ್ಚು ಮಾಡ್ತೀರಿ.. ಆದರೆ ಕೊನೆಯಲ್ಲಿ ಈ ತಪ್ಪು ಮಾಡದಿರಿ..
ಭಾರತ ಸರ್ಕಾರದ ರಕ್ಷಣಾ ಇಲಾಖೆಯಡಿ ಬರುವ ಏರೋನಾಟಿಕಲ್ಸ್ ಡೆವಲಪ್ಮೆಂಟ್ ಏಜೆನ್ಸಿಯು ಡಿಸೈನ್ ಮತ್ತು ಡೆವಲಪ್ ಮಾಡುವ ಜವಾಬ್ದಾರಿ ಹೊಂದಿದ್ದು, ಖಾಸಗಿ ಕಂಪನಿಗಳಿಂದ 5ನೇ ಜನರೇಷನ್ ಫೈಟರ್ ಜೆಟ್ ನಿರ್ಮಾಣಕ್ಕೆ ಆಸಕ್ತಿ ವ್ಯಕ್ತಪಡಿಸುವ ಬಿಡ್ ಆಹ್ವಾನಿಸಿದೆ. 5ನೇ ಜನರೇಷನ್ ಫೈಟರ್ ಜೆಟ್ , ಡಬಲ್ ಇಂಜಿನ್ ಹೊಂದಿರುವ ಫೈಟರ್ ಜೆಟ್ ಆಗಿರಲಿದೆ. ಈಗ 5ನೇ ಜನರೇಷನ್ ಫೈಟರ್ ಜೆಟ್ ನಿರ್ಮಿಸಲು ಆಸಕ್ತಿ ವ್ಯಕ್ತಪಡಿಸುವ ಕಂಪನಿಯು, ಬಳಿಕ ಆಯ್ಕೆಯಾದರೆ ಫೈಟರ್ ಜೆಟ್ ನಿರ್ಮಾಣದ ಕಾರ್ಖಾನೆಯನ್ನು ಆರಂಭಿಸಬೇಕಾಗುತ್ತೆ. 5ನೇ ಜನರೇಷನ್ ಫೈಟರ್ ಜೆಟ್ ಡೆವಲಪ್ಮೆಂಟ್, ಟೆಸ್ಟಿಂಗ್, ಸರ್ಟಿಫಿಕೇಷನ್ ಅನ್ನು ಮುಂದಿನ 8 ವರ್ಷದಲ್ಲಿ ಪೂರ್ಣಗೊಳಿಸಬೇಕು.
ಇದನ್ನೂ ಓದಿ:ಬುಲೆಟ್ ಟ್ರೈನ್ ಕಾರಿಡಾರ್; 8ನೇ ಸ್ಟೀಲ್ ಬ್ರಿಡ್ಜ್ ಪೂರ್ಣ.. ಇನ್ನು ಎಷ್ಟು ಸೇತುವೆ ನಿರ್ಮಿಸಬೇಕು?
ಈಗ ಭಾರತದ ರಕ್ಷಣಾ ಬತ್ತಳಿಕೆಯಲ್ಲಿ ಫ್ರಾನ್ಸ್ನ ಡಸಾಲ್ಟ್ ಏವಿಯೇಷನ್ ಕಂಪನಿ ನಿರ್ಮಿಸಿರುವ ರಫೇಲ್ ಫೈಟರ್ ಜೆಟ್ ಇದೆ. ಈ ರಫೇಲ್ ಫೈಟರ್ ಜೆಟ್ 4.5 ಜನರೇಷನ್ ಫೈಟರ್ ಜೆಟ್. ರಫೇಲ್ ಗಿಂತ ಇನ್ನೂ ಹೆಚ್ಚು ಅತ್ಯಾಧುನಿಕ ಮುಂದುವರಿದ ಫೈಟರ್ ಜೆಟ್ ನಿರ್ಮಾಣಕ್ಕೆ ಈಗ ಭಾರತ ನಿರ್ಧರಿಸಿದೆ. ಮುಂದಿನ 8 ವರ್ಷಗಳಲ್ಲಿ 5ನೇ ತಲೆಮಾರಿನ ಫೈಟರ್ ಜೆಟ್ ನಿರ್ಮಿಸಿ ಭಾರತದ ಮಿಲಿಟರಿಗೆ ಸೇರ್ಪಡೆ ಮಾಡಿಕೊಳ್ಳುವ ಗುರಿ ಹಾಕಿಕೊಳ್ಳಲಾಗಿದೆ.
ಭಾರತವು ಈಗಾಗಲೇ ತೇಜಸ್ ಮೂಲಕ ಅಡ್ವಾನ್ಸ್ ಮೀಡಿಯಂ ಕಂಬಾಟ್ ಏರ್ ಕ್ರಾಫ್ಟ್ಗಳನ್ನು ಸ್ವದೇಶಿಯಾಗಿ ತಯಾರಿಸುತ್ತಿದೆ. ಈಗ 5ನೇ ತಲೆಮಾರಿನ ಫೈಟರ್ ಜೆಟ್ ನಿರ್ಮಾಣಕ್ಕೆ ಭಾರತದ ಕಂಪನಿಗಳು ಮಾತ್ರ ಆಸಕ್ತಿ ವ್ಯಕ್ತಪಡಿಸುವ ಬಿಡ್ ಸಲ್ಲಿಸಬಹುದು. ಭಾರತದ ವಾಯುಪಡೆಯಲ್ಲಿ ರಷ್ಯಾದ ಮಿಗ್ ಯುದ್ಧ ವಿಮಾನಗಳು, ಸುಖೋಯ್ ಯುದ್ಧ ವಿಮಾನಗಳಿವೆ. ಹಳೆಯ ಯುದ್ಧ ವಿಮಾನಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಹೊಸ, ಅತ್ಯಾಧುನಿಕ, 5ನೇ ತಲೆಮಾರಿನ ಫೈಟರ್ ಜೆಟ್ಗಳ ನಿರ್ಮಾಣ ಅನಿವಾರ್ಯವಾಗಿದೆ.
ಇದನ್ನೂ ಓದಿ: ಸುಟ್ಟು ಕರಕಲಾದ ದೇಹಗಳ ಗುರುತು ಪತ್ತೆ ಹಚ್ಚೋದೇ ಚಾಲೆಂಜ್.. ಡೆಂಟಲ್ ಫೋರೆನ್ಸಿಕ್ ಹೇಗೆ ಕೆಲಸ ಮಾಡುತ್ತೆ?
ಭಾರತದ ವೈರಿ ರಾಷ್ಟ್ರ ಪಾಕಿಸ್ತಾನವು ಚೀನಾದಿಂದ 5ನೇ ಜನರೇಷನ್‌ನ ಜೆ-35 ಸೀರೀಸ್ ನ 40 ಯುದ್ಧ ವಿಮಾನಗಳನ್ನು ಖರೀದಿಸುತ್ತಿದೆ. ಈ ವರ್ಷಾಂತ್ಯದ ವೇಳೆಗೆ ಪಾಕಿಸ್ತಾನಕ್ಕೆ ಚೀನಾವು ಜೆ- 35 ಯುದ್ದ ವಿಮಾನಗಳನ್ನು ಪೂರೈಸಲಿದೆ. ಈಗಾಗಲೇ ಪಾಕಿಸ್ತಾನದ ಏರ್ ಫೋರ್ಸ್ನ ಪೈಲಟ್ಗಳು ಕಳೆದ 6 ತಿಂಗಳಿನಿಂದ ಚೀನಾದಲ್ಲಿ 5ನೇ ಜನರೇಷನ್ ಫೈಟರ್ ಜೆಟ್ ಚಲಾಯಿಸಲು ಟ್ರೈನಿಂಗ್ ಪಡೆಯುತ್ತಿದ್ದಾರೆ.
ಪಾಕಿಸ್ತಾನದ ಬಳಿ ಅಮೆರಿಕಾದ ಎಫ್-16 ಯುದ್ಧ ವಿಮಾನವು ಇದೆ. ಆದರೆ ಭಾರತದ ಬಳಿ ಸದ್ಯ 5ನೇ ತಲೆಮಾರಿನ ಯಾವುದೇ ಯುದ್ಧ ವಿಮಾನಗಳಿಲ್ಲ. ಹೀಗಾಗಿ ಭಾರತವು ತನ್ನ ಫೈಟರ್ ಜೆಟ್ಗಳನ್ನು ಅಪ್ ಗ್ರೇಡ್ ಮಾಡಲೇಬೇಕಾಗಿದೆ. ಭಾರತವು 5ನೇ ತಲೆಮಾರಿನ ಫೈಟರ್ ಜೆಟ್ ಹೊಂದಲು ಇನ್ನೂ ಒಂದು ದಶಕದವರೆಗೂ ಕಾಯಬೇಕಾಗಿದೆ. ಭಾರತದ ವಾಯುಪಡೆಯು ಯಾವಾಗಲೂ ಪಾಕಿಸ್ತಾನದ ವಾಯುಪಡೆಗಿಂತ ಒಂದು ಕೈ ಮೇಲಿರುತ್ತಿತ್ತು. ಈಗ ಭಾರತಕ್ಕೂ ಮೊದಲೇ ಪಾಕಿಸ್ತಾನವು 5ನೇ ಜನರೇಷನ್ ಫೈಟರ್ ಜೆಟ್ ಹೊಂದುತ್ತಿರುವುದು ಭಾರತದ ಪಾಲಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಇದು ಕಳವಳಕಾರಿ ಬೆಳವಣಿಗೆ ಎಂದು ಗ್ರೂಪ್ ಕ್ಯಾಪ್ಟನ್ ಅಹಲವಾತ್ ಹೇಳಿದ್ದಾರೆ.
ಇದನ್ನೂ ಓದಿ: ಎಚ್ಚರ ಯಶಸ್ವಿ ಜೈಸ್ವಾಲ್..! ಯುವ ಬ್ಯಾಟರ್ ಎದೆಯಲ್ಲಿ ಶುರುವಾಗಿದೆ ನಡುಕ..!
ಭಾರತಕ್ಕೆ ಎರಡು ಕಡೆ ಬದ್ಧ ವೈರಿಗಳಿದ್ದಾರೆ. ಒಂದೆಡೆ ಪಾಕಿಸ್ತಾನ ಮತ್ತೊಂದೆಡೆ ಚೀನಾ ದೇಶಗಳಿವೆ. ವೈರಿಗಳ ಮಧ್ಯೆ ಇರುವ ಭಾರತವು ರಕ್ಷಣೆಯಲ್ಲಿ ಸ್ವಾವಲಂಬನೆ ಸಾಧಿಸಬೇಕಾಗಿದೆ. ಹೀಗಾಗಿ ರಷ್ಯಾ, ಫ್ರಾನ್ಸ್, ಇಸ್ರೇಲ್ ಮೇಲೆ ಹೆಚ್ಚಿನ ಅವಲಂಬನೆ ಒಳ್ಳೆಯದ್ದಲ್ಲ ಎಂಬ ಕಾರಣಕ್ಕಾಗಿ ಸ್ವದೇಶಿ 5ನೇ ಜನರೇಷನ್ ಫೈಟರ್ ಜೆಟ್ ನಿರ್ಮಾಣಕ್ಕೆ ಮುಂದಾಗಿದೆ. 5ನೇ ತಲೆಮಾರಿನ ಫೈಟರ್ ಜೆಟ್ ಭಾರತದ ಮಿಲಿಟರಿ, ವಾಯುಪಡೆ, ನೌಕಾಪಡೆಗೆ ಸೇರ್ಪಡೆಯಾಗುವುದು 2035 ಕ್ಕಿಂತ ಮುಂಚೆ ಸಾಧ್ಯವಿಲ್ಲ ಅಂತ ವಾಯುಪಡೆಯ ಪೈಲಟ್ಗಳು ತಜ್ಞರು ಹೇಳುತ್ತಿದ್ದಾರೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ