ರಷ್ಯಾದ ಮೇಲೆ ದಾಳಿ.. 117 ಡ್ರೋನ್‌ಗಳನ್ನು ಉಕ್ರೇನ್‌ ತಯಾರಿಸಿದ್ದು ಎಲ್ಲಿ? ಹೇಗೆ? ರೋಚಕ ಸ್ಟೋರಿ

author-image
admin
Updated On
ರಷ್ಯಾದ ಮೇಲೆ ದಾಳಿ.. 117 ಡ್ರೋನ್‌ಗಳನ್ನು ಉಕ್ರೇನ್‌ ತಯಾರಿಸಿದ್ದು ಎಲ್ಲಿ? ಹೇಗೆ? ರೋಚಕ ಸ್ಟೋರಿ
Advertisment
  • ರಷ್ಯಾದಲ್ಲೇ ಸೀಕ್ರೆಟ್ ಆಗಿ 117 ಡ್ರೋನ್‌ ತಯಾರಿಸಿದ ಉಕ್ರೇನ್!
  • ರಷ್ಯಾಕ್ಕೆ 7 ಬಿಲಿಯನ್ ಡಾಲರ್ ಮೌಲ್ಯದ ಯುದ್ಧ ವಿಮಾನ ನಷ್ಟ
  • ದಾಳಿಯಲ್ಲಿ ಭಾಗಿಯಾಗಿದ್ದವರೆಲ್ಲಾ ಸಕಾಲದಲ್ಲೇ ಉಕ್ರೇನ್‌ಗೆ ವಾಪಸ್

ರಷ್ಯಾದ ಒಳಗೆ ನುಗ್ಗಿ ಉಕ್ರೇನ್ ಭಯಾನಕ ಡ್ರೋನ್ ದಾಳಿ ಮಾಡಿದ್ದು ಬೆಚ್ಚಿ ಬೀಳಿಸಿದೆ. ಈ ದಾಳಿಗೆ ಬಳಸಿದ ಡ್ರೋನ್‌ಗಳನ್ನು ಉಕ್ರೇನ್ ತಯಾರಿಸಿದ್ದು ಎಲ್ಲಿ? ಹೇಗೆ? ಅನ್ನೋ ಮಾಹಿತಿಗಳು ಈಗ ಬಯಲಾಗಿದೆ.

ರಷ್ಯಾದ ಮೇಲೆ ದಾಳಿ ಮಾಡಲು ಉಕ್ರೇನ್ ರಷ್ಯಾದಲ್ಲೇ ಸೀಕ್ರೆಟ್ ಆಗಿ 117 ಡ್ರೋನ್‌ಗಳನ್ನು ತಯಾರು ಮಾಡಿದೆ. ರಷ್ಯಾದಲ್ಲೇ ಡ್ರೋನ್ ತಯಾರಿಸಿ, ರಷ್ಯಾದ ಮೇಲೆಯೇ ಉಕ್ರೇನ್‌ ದಾಳಿಗೆ ಬಳಸಿದೆ.

ಮತ್ತೊಂದು ಕುತೂಹಲಕಾರಿ ವಿಚಾರ ಏನಂದ್ರೆ ಉಕ್ರೇನ್‌ ರಷ್ಯಾದಲ್ಲಿ 117 ಡ್ರೋನ್ ತಯಾರಿಸಲು ಬಹಳ ಕಡಿಮೆ ಹಣವನ್ನು ಖರ್ಚು ಮಾಡಿದೆ. ಆದರೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಿಂದ ರಷ್ಯಾಗೆ ಸುಮಾರು 7 ಬಿಲಿಯನ್ ಡಾಲರ್‌ನಷ್ಟು ನಷ್ಟ ಉಂಟಾಗಿದೆ.

publive-image

A-50 ಯುದ್ಧ ವಿಮಾನವು 40-50 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ. TU-160 ಯುದ್ಧ ವಿಮಾನವು 200-300 ಮಿಲಿಯನ್ ಡಾಲರ್, TU-95 ಯುದ್ಧ ವಿಮಾನವು 40-50 ಮಿಲಿಯನ್ ಡಾಲರ್ ಮೌಲ್ಯದ್ದು ಎನ್ನಲಾಗಿದೆ.

ಬೆಲಾಯಾ ಏರ್ ಬೇಸ್‌ನಲ್ಲಿ TU-160, TU-95MS, A-50 ಯುದ್ಧ ವಿಮಾನಗಳು ಧ್ವಂಸವಾಗಿವೆ. ರಷ್ಯಾ ಯುದ್ಧ ವಿಮಾನಗಳ ಮೇಲೆ ದಾಳಿಗೆ ಉಕ್ರೇನ್ ತಯಾರಿಸಿದ್ದು FPV ಡ್ರೋನ್‌ಗಳಾಗಿದೆ. ಇದರ ಮೌಲ್ಯ 500 ರಿಂದ 2 ಸಾವಿರ ಡಾಲರ್ ಮಾತ್ರ. ಅತ್ಯಂತ ಕಡಿಮೆ ಬೆಲೆಯ ಡ್ರೋನ್‌ಗಳಿಂದ ರಷ್ಯಾಕ್ಕೆ 7 ಬಿಲಿಯನ್ ಡಾಲರ್ ಮೌಲ್ಯದ ಯುದ್ಧ ವಿಮಾನಗಳು ಸುಟ್ಟು ಭಸ್ಮವಾಗಿದೆ.

publive-image

ಇದನ್ನೂ ಓದಿ: ರಷ್ಯಾ ಮೇಲೆ ಉಕ್ರೇನ್ ಅತಿ ದೊಡ್ಡ ಡ್ರೋನ್ ದಾಳಿ; 2 ವಾಯುನೆಲೆ, 40 ವಿಮಾನಗಳು ಪೀಸ್‌, ಪೀಸ್‌! 

ಇದಿಷ್ಟೇ ಅಲ್ಲ ರಷ್ಯಾದಲ್ಲಿ ಸೀಕ್ರೆಟ್‌ ಆಗಿ ಡ್ರೋನ್ ತಯಾರಿಸಿದ್ದವರು ಹಾಗೂ ಉಕ್ರೇನ್‌ ದಾಳಿಯಲ್ಲಿ ಭಾಗಿಯಾಗಿದ್ದವರೆಲ್ಲಾ ಸಕಾಲದಲ್ಲೇ ಉಕ್ರೇನ್‌ಗೆ ವಾಪಸ್ ಆಗಿದ್ದಾರೆ. ಉಕ್ರೇನ್ ಈ ಡ್ರೋನ್ ದಾಳಿಯಿಂದ ರಷ್ಯಾ ಸಿಡಿದೆದ್ದಿದ್ದು, ಪ್ರತೀಕಾರದ ದಾಳಿಗೆ ಪಕ್ಕಾ ಪ್ಲ್ಯಾನ್ ರೂಪಿಸುತ್ತಿದೆ. ಈಗೇನಿದ್ದರೂ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಗ್ರೀನ್ ಸಿಗ್ನಲ್‌ಗೆ ರಷ್ಯಾ ಸೇನಾಧಿಕಾರಿಗಳು ಕಾದು ಕುಳಿತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment