Advertisment

ಕುಂಭಮೇಳ ಮುಗಿಯುತ್ತಿದ್ದಂತೆ ನಾಗಾಸಾಧುಗಳು ಎಲ್ಲಿಗೆ ಹೋಗುತ್ತಾರೆ? ನಿಗೂಢ, ಅಚ್ಚರಿಯ ವಿಷಯಗಳು ಇಲ್ಲಿದೆ!

author-image
Gopal Kulkarni
Updated On
ಕುಂಭಮೇಳ ಮುಗಿಯುತ್ತಿದ್ದಂತೆ ನಾಗಾಸಾಧುಗಳು ಎಲ್ಲಿಗೆ ಹೋಗುತ್ತಾರೆ? ನಿಗೂಢ, ಅಚ್ಚರಿಯ ವಿಷಯಗಳು ಇಲ್ಲಿದೆ!
Advertisment
  • ಅಮೃತಸ್ನಾನದ ಬಳಿಕ ಪ್ರಯಾಗರಾಜ್ ತೊರೆಯುತ್ತಿರುವ ನಾಗಾಸಾಧುಗಳು
  • ಮಹಾಕುಂಭಮೇಳ ಮುಗಿದ ಬಳಿಕ ನಾಗಾಸಾಧುಗಳು ಎಲ್ಲಿ ಹೋಗುತ್ತಾರೆ?
  • ಯಾವೆಲ್ಲಾ ಜಾಗಗಳಿಗೆ ಹೋಗಿ ತಮ್ಮ ಅನುಷ್ಠಾನಗಳನ್ನು ಮುಂದುವರಿಸುತ್ತಾರೆ?

ಜನವರಿ 13 ರಿಂದ ಶುರುವಾಗಿರುವ ಮಹಾಕುಂಭಮೇಳ ಫೆಬ್ರವರಿ 26ಕ್ಕೆ ಮುಗಿಯಲಿದೆ 26ಕ್ಕೆ ಮುಗಿಯಲಿದೆ ಇಲ್ಲಿಯವರೆಗೂ ಅಂದ್ರೆ ಫೆಬ್ರವರಿ 7ರವರೆಗೂ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದವರ ಸಂಖ್ಯೆ 40 ಕೋಟಿ ಎಂದು ಹೇಳಲಾಗುತ್ತಿದೆ. ಈ ಕುಂಭಮೇಳದ ಪ್ರಮುಖ ಆಕರ್ಷಣೆಯೆಂದರೇ ನಾಗಾಸಾಧುಗಳು ಹಾಗೂ ಅಘೋರಿಗಳು. ಕುಂಭ, ಅರ್ಧಕುಂಭ ಹಾಗೂ ಮಹಾಕುಂಭಮೇಳ ನಡೆದಾಗಲೆಲ್ಲಾ ಅವರು ಸಾಗರೋಪಾದಿಯಲ್ಲಿ ಬಂದು ಪವಿತ್ರ ನದಿಗಳಲ್ಲಿ ಮಿಂದೆದ್ದು ಹೋಗುತ್ತಾರೆ.

Advertisment

ಸದ್ಯ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ನಾಗಾಸಾಧುಗಳು ಹಾಗೂ ಅಘೋರಿಗಳೇ ಪ್ರಮುಖ ಆಕರ್ಷಣೆ ಅವರ ಆಚರಣೆ, ಅವರ ಬದುಕುವ ವಿಧಾನ, ಅವರ ವೇಷಭೂಷಣಗಳು ಅವರ ವರ್ತನೆ ಇಡೀ ಜಗತ್ತನ್ನೆ ಆಕರ್ಷಿಸುತ್ತದೆ. ಮಹಾಕುಂಭ ಮುಗಿಯುವವರೆಗೂ ಅವರು ಪ್ರಯಾಗರಾಜ್​ನಲ್ಲಿ ತಮ್ಮ ಅನುಷ್ಠಾನಗಳನ್ನು ಮುಂದುವರಿಸುತ್ತಾ ಸಾಗುತ್ತಾರೆ. ಮಹಾಕುಂಭ ಮುಗಿದ ನಂತರ ನಾಗಾಸಾಧುಗಳು ಹಾಗೂ ಅಘೋರಿಗಳು ಮತ್ತು ಭೈರವಿಗಳು ಎಲ್ಲಿಗೆ ಹೋಗುತ್ತಾರೆ ಏನು ಮಾಡುತ್ತಾರೆ ಎಂಬ ವಿಚಿತ್ರ ಕುತೂಹಲ ಎಲ್ಲರಲ್ಲಿಯೂ ಇದೆ.

publive-image

ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಕರ್ನಾಟಕದ ಪ್ರಬಲ ರಾಜಕಾರಣಿ ಮಗಳು; ಗೆಸ್​​ ಮಾಡಿ ನೋಡೋಣ!

ಪ್ರಯಾಗರಾಜ್​ನಲ್ಲಿ ಫೆಬ್ರವರಿ 3 ರಂದು ಅಮೃತಸ್ನಾನ ಸಮಾಪ್ತಿಗೊಂಡಿದೆ. ಈ ಒಂದು ಅಮೃತಸ್ನಾನ ಹಾಗೂ ಶಾಹಿ ಸ್ನಾನದಲ್ಲಿ 13 ಅಖಾಡದ ನಾಗಾಸಾಧುಗಳು ಪಾಲ್ಗೊಳ್ಳುತ್ತಾರೆ. ಅಮೃತಸ್ನಾನದ ಬಳಿಕ ನಾಗಾಸಾಧುಗಳು ಮರಳಿ ತಮ್ಮ ಸ್ಥಳಗಳಿಗೆ ಹೊರಡಲು ಆರಂಭಿಸುತ್ತಾರೆ. ನಿಮಗೆ ಗೊತ್ತಾ ಅಮೃತಸ್ನಾನ ಮುಗಿದ ಬಳಿಕ ನಾಗಾ ಸಾಧುಗಳು ಎಲ್ಲಿಗೆ ಹೋಗುತ್ತಾರೆ ಅಂತ.

Advertisment

publive-image

ಇದನ್ನೂ ಓದಿ:ಮಹಾಕುಂಭಮೇಳದಲ್ಲಿ ಸತ್ಸಂಗ, ಗುರುದೇವರೊಡನೆ ಧ್ಯಾನ; ಆರ್ಟ್ ಆಫ್ ಲಿವಿಂಗ್ ಸೇವಾ ಕಾರ್ಯ ಹೇಗಿತ್ತು?

ಈಗಾಗಲೇ ನಾಗಾಸಾಧುಗಳು ಕುಂಭಮೇಳದಿಂದ ನಿರ್ಗಮಿಸಲು ಶುರುಮಾಡಿದ್ದಾರೆ. ಅಮೃತಸ್ನಾನ ಮುಗಿದ ಮೇಲೆ ಮತ್ತು ಕುಂಭಮೇಳ ಮುಗಿದ ಮೇಲೆ ನಾಗಾಸಾಧುಗಳು ತಮ್ಮ ತಮ್ಮ ಅಖಾಡಗಳಿಗೆ ಹೊರಡುತ್ತಾರೆ. ಅಲ್ಲಿ ಧ್ಯಾನ ಅನುಷ್ಠಾನ, ಧಾರ್ಮಿಕ ಶಿಕ್ಷಣ ಅಭ್ಯಾಸವನ್ನ ಮುಂದುವರಿಸುತ್ತಾರೆ. ಇನ್ನು ಕೆಲವು ನಾಗಾಸಾಧುಗಳು ಅಮೃತಸ್ನಾನ, ಮಹಾಕುಂಭಮೇಳ ಮುಗಿದ ಬಳಿಕ ಕಾಶಿ ಮತ್ತು ಹರಿದ್ವಾರವನ್ನು ಸೇರಿಕೊಂಡು ಅಲ್ಲಿ ತಮ್ಮ ನಿತ್ಯ ಅನುಷ್ಠಾನವನ್ನು ಮುಂದುವರಿಸುತ್ತಾರೆ. ಇನ್ನು ಕೆಲವರು ಪ್ರಯಾಗರಾಜ್​ನಂತಹ ತೀರ್ಥ ಸ್ಥಳಗಳಲ್ಲಿಯೂ ಉಳಿದುಕೊಳ್ಳುತ್ತಾರೆ. ನಿರ್ಜನ ಪ್ರದೇಶದಲ್ಲಿ ಅವರ ತಪಸ್ಸು ಅವರ ನಿತ್ಯ ಅನುಷ್ಠಾನ ಮುಂದುವರೆಯುತ್ತದೆ. ಮತ್ತೆ ಕೆಲವು ನಾಗಾಸಾಧುಗಳು ಹಿಮಾಲಯದ ಬೆಟ್ಟ, ನಿರ್ಜನ ಪ್ರದೇಶದ ಕಾಡುಗಳು, ಗುಹೆಗಳನ್ನು ಸೇರಿ ತಮ್ಮ ತಪಸ್ಸು, ಧ್ಯಾನದಲ್ಲಿ ಮುಳುಗುತ್ತಾರೆ. ಮತ್ತೆ ಕುಂಭಮೇಳ ನಡೆದಲ್ಲಿ ಸಾಗರೋಪಾದಿಯಲ್ಲಿ ಬಂದು ಗಂಗೆಯಲ್ಲಿ ಮುಳುಗಿ ಪಾವನಗೊಳ್ಳುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment