ಪ್ರಯಾಗರಾಜ್​ನಲ್ಲಿ ಯಮುನೆ ಗಂಗೆಯೊಂದಿಗೆ ಸೇರುತ್ತಾಳೆ.. ಬ್ರಹ್ಮಪುತ್ರಾ ನದಿ ಜಾಹ್ನವಿಯನ್ನು ಸೇರುವುದು ಎಲ್ಲಿ?

author-image
Gopal Kulkarni
Updated On
ಪ್ರಯಾಗರಾಜ್​ನಲ್ಲಿ ಯಮುನೆ ಗಂಗೆಯೊಂದಿಗೆ ಸೇರುತ್ತಾಳೆ.. ಬ್ರಹ್ಮಪುತ್ರಾ ನದಿ ಜಾಹ್ನವಿಯನ್ನು ಸೇರುವುದು ಎಲ್ಲಿ?
Advertisment
  • ಪ್ರಯಾಗರಾಜ್​ನಲ್ಲಿ ಯಮುನಾ ಗಂಗೆಯನ್ನು ಸೇರಿ ತ್ರಿವೇಣಿ ಸಂಗಮವಾಗುತ್ತದೆ
  • ಬ್ರಹ್ಮಪುತ್ರಾ ನದಿ ಯಾವ ಪ್ರದೇಶದಲ್ಲಿ ಗಂಗಾ ನದಿಯನ್ನು ಸೇರುತ್ತದೆ ಅಂತ ಗೊತ್ತಾ?
  • ಗಂಗಾ ಬ್ರಹ್ಮಪುತ್ರಾ ನದಿಗಳ ಸಂಗಮದ ಜಾಗವನ್ನು ಏನೆಂದು ಗುರುತಿಸಲಾಗುತ್ತದೆ ?

ನಮಗೆಲ್ಲರಿಗೂ ಗೊತ್ತಿದೆ. ಪ್ರಯಾಗರಾಜ್​ನಲ್ಲಿ ಯುಮುನಾ ನದಿ ಗಂಗೆಯೊಂದಿಗೆ ಸೇರಿಕೊಳ್ಳುತ್ತಾಳೆ. ಹೀಗಾಗಿಯೇ ಅದನ್ನು ತ್ರಿವೇಣಿ ಸಂಗಮ ಅಥವಾ ಗಂಗಾ ಯಮುನಾ ಸಂಗಮ ಎಂದ ಕರೆಯಲಾಗುತ್ತದೆ. ಆದರೆ ಇಲ್ಲಿ ಬ್ರಹ್ಮಪುತ್ರ ನದಿ ಗಂಗೆಯೊಂದಿಗೆ ಸೇರುವುದಿಲ್ಲ. ಯಮುನಾ ಉತ್ತರಾಖಂಡ್​ನ ಯಮುನೋತ್ರಿಯಿಂದ ಹರಿಯಲು ಶುರು ಮಾಡಿದರೆ ಬ್ರಹ್ಮಪುತ್ರಾ ಟಿಬೆಟ್​ನ ಮಾನಸರೋವರದ ಮೂಲದಿಂದ ಹರಿಯಲು ಆರಂಭಿಸುತ್ತವೆ. ಆದರೆ ಇವುಗಳ ಮೂಲ ಇರುವುದು ಹಿಮಾಲಯದಲ್ಲಿಯೇ. ಆದ್ರೆ ಬ್ರಹ್ಮಪುತ್ರಾ ನದಿ ಗಂಗೆಯನ್ನು ಸೇರುವುದು ಎಲ್ಲಿ ಅಂತ ನಿಮಗೆ ಗೊತ್ತಾ?

ಇದನ್ನೂ ಓದಿ:ಮನೆಗೊಬ್ಬ ಸರ್ಕಾರಿ ನೌಕರ.. ಭಾರತದ ಈ ಪುಟ್ಟ ಹಳ್ಳಿಯಿಂದ ಅತಿ ಹೆಚ್ಚು ಜನ IAS, IPS ಪಾಸ್!

ಬ್ರಹ್ಮಪುತ್ರಾ ಮತ್ತು ಗಂಗೆಯ ಸಮ್ಮಿಲನಗೊಳ್ಳುವ ಕ್ಷೇತ್ರವನ್ನು ಏನು ಎನ್ನುತ್ತಾರೆ ಅಂತ ನಿಮಗೆ ಗೊತ್ತಾ? ಗಂಗಾ ಮತ್ತು ಬ್ರಹ್ಮಪುತ್ರಾ ನದಿಗಳು ಏಕಕಾಲಕ್ಕೆ ಸಂಗಮಿಸುವುದು ಬಾಂಗ್ಲಾದೇಶದ ಚಂದಾಪುರ ಎಂಬ ಪ್ರದೇಶದಲ್ಲಿ. ಇಲ್ಲಿ ಸಂಗಮಿಸುವ ಈ ಎರಡು ನದಿಗಳು ಮುಂದೆ ಹರಿಯುತ್ತವೆ. ಇವು ಸೇರಿ ಮುಂದೆ ಹರಿಯುವ ನದಿಯನ್ನ ಮೇಘನಾ ನದಿ ಎಂದು ಕರೆಯುತ್ತಾರೆ.

ಗಂಗಾ ಮತ್ತು ಬ್ರಹ್ಮಪುತ್ರಾ ನದಿಗಳ ಸಂಗಮದಿಮದಾಗಿ ಡೆಲ್ಟಾ ಸೃಷ್ಟಿಯಾಗುತ್ತದೆ ಅಂದ್ರೆ ನದಿಮುಖಜ ಭೂಮಿ ಎಂದು ಅರ್ಥ. ಇದನ್ನು ವಿಶ್ವದ ಅತಿದೊಡ್ಡ ಡೆಲ್ಟಾ ಎಂದು ಕರೆಯಲಾಗುತ್ತದೆ. ಈ ಒಂದು ಡೆಲ್ಟಾವನ್ನ ಗಂಗಾ ಬ್ರಹ್ಮಪುತ್ರ ಡೆಲ್ಟಾ, ಸುಂದರಬನ ಡೆಲ್ಟಾ ಅಥವಾ ಬಂಗಾಳ ಡೆಲ್ಟಾ ಎಂದು ಕೂಡ ಕರೆಯಲಾಗುತ್ತದೆ. ಗಂಗಾ ಮತ್ತು ಬ್ರಹ್ಮಪುತ್ರಾ ನದಿಗಳ ಸಂಗಮದ ಈ ಡೆಲ್ಟಾ ಪ್ರದೇಶವನ್ನು ವಿಶ್ವದ ಅತ್ಯಂತ ಫಲವತ್ತಾದ ಭೂಮಿ ಎಂದು ಕೂಡ ಗುರುತಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment