ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ.. ಕೋರ್ಟ್​ನಲ್ಲಿ ಶಿಷ್ಯರಿಂದ ಅಸಲಿ ಸತ್ಯ..!

author-image
Ganesh
Updated On
‘ನಾನೂ ಅಯೋಧ್ಯೆಯ ಆಹ್ವಾನ ಸ್ವೀಕರಿಸಿದ್ದೇನೆ..’ ರಾಮ ಮಂದಿರ ಉದ್ಘಾಟನೆಗೆ ಹೋಗ್ತಾರಾ ನಿತ್ಯಾನಂದ..?
Advertisment
  • ಕೈಲಾಸ ದೇಶದ ಸ್ಥಳದ ಕುರಿತು ನ್ಯಾಯಾಲಯದ ಪ್ರಶ್ನೆ
  • ನಿತ್ಯಾನಂದನ ಭೌತಿಕ ಸ್ಥಳದ ಉತ್ತರ ಬಯಸಿದ ಕೋರ್ಟ್​​
  • ಕೋರ್ಟ್​​ಗೆ ನಿತ್ಯಾನಂದನ ಶಿಷ್ಯ ಅರಚನ ತಿರುಮಲ ಉತ್ತರ

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ 2020ರಲ್ಲಿ ಕೈಲಾಸ ರಾಷ್ಟ್ರ ಘೋಷಿಸಿದ್ರು. ಆದ್ರೆ ಅದೆಲ್ಲಿದೆ ಅನ್ನೋ ಪ್ರಶ್ನೆ ಇತ್ತು. ಈಗ ಮತ್ತೆ ನಿತ್ಯಾನಂದನ ಕೈಲಾಸದ ಬಗ್ಗೆ ಚರ್ಚೆ ಶುರುವಾಗಿದೆ. ಕಾರಣ ಇಷ್ಟೇ, ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗವನ್ನು ಅವರ ಶಿಷ್ಯರೇ ಬಹಿರಂಗ ಮಾಡಿದ್ದಾರೆ.

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಎಲ್ಲಿದ್ದಾನೆ ಎಂಬುದರ ಕುರಿತು ಅಚ್ಚರಿಯ ಮಾಹಿತಿಯನ್ನ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಬಹಿರಂಗ ಆಗಿದೆ. ತಿರುವಣ್ಣಮಲೈ ಮಠದಿಂದ ಸ್ವಾಮಿ ನಿತ್ಯಾನಂದನ ನಿಷೇಧಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ನಿತ್ಯಾನಂದ ಸ್ವಯಂ ಘೋಷಿತ ರಾಷ್ಟ್ರ ಎಲ್ಲಿದೆ ಎಂಬ ಪ್ರಶ್ನೆಗೆ ಕೋರ್ಟ್​ನಲ್ಲಿ ಉತ್ತರ ಸಿಕ್ಕಿದೆ.

ಇದನ್ನೂ ಓದಿ: Israel-Iran War: ಯುದ್ಧಭೂಮಿಗೆ ಟ್ರಂಪ್​ ಎಂಟ್ರಿ ಗೊಂದಲ.. ಅಮೆರಿಕಗೆ ರಷ್ಯಾ, ಕೋರಿಯಾ ಎಚ್ಚರಿಕೆ..

publive-image

ಇದುವರೆಗೂ ಕೈಲಾಸ ಎಲ್ಲಿದೆ ಎಂಬುದರ ಬಗ್ಗೆ ಭಾರೀ ಚರ್ಚೆ ನಡೆಯುತ್ತಿತ್ತು. ಈಗ ಅದೆಕ್ಕೆಲ್ಲಾ ಉತ್ತರ ಸಿಕ್ಕಿದ್ದು, ಪ್ರಸ್ತುತ ಆಸ್ಟ್ರೇಲಿಯಾ ಬಳಿ ಇದ್ದಾನಂತೆ. ಆಸ್ಟ್ರೇಲಿಯಾ ಬಳಿಯ ಯುಎಸ್‌ಕೆ ಎಂಬ ಸ್ವಯಂ ಘೋಷಿತ ರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ ಅಂತ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಎಲ್ಲಿದೆ ನಿತ್ಯಾನಂದ ಕೈಲಾಸ?

ಕೈಲಾಸ ಸ್ಥಳದ ಕುರಿತು ನ್ಯಾಯಾಲಯವು ಸ್ವಾಮಿ ನಿತ್ಯಾನಂದನ ಅನುಯಾಯಿಗಳನ್ನ ಕೆಣಕಿತು. ಅಧಿನಾಮ ಮಠದಿಂದ ಅವರನ್ನ ನಿಷೇಧಿಸುವ ಏಕ-ನ್ಯಾಯಾಧೀಶರ ಆದೇಶದ ವಿರುದ್ಧದ ಮೇಲ್ಮನವಿಯ ವಿಚಾರಣೆಯಲ್ಲಿ ನ್ಯಾ. ಎಸ್‌.ಎಂ ಸುಬ್ರಮಣ್ಯಂ, ಮಾರಿಯಾ ಕ್ಲೆಟ್ ವಿಭಾಗೀಯ ಪೀಠವು ನಿತ್ಯಾನಂದನ ಭೌತಿಕ ಸ್ಥಳದ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನ ಎತ್ತಿದೆ. ಅರ್ಜಿದಾರರು ಎಲ್ಲಿದ್ದಾರೆ ಅಂತ ಕೇಳಿದೆ.. ಇದಕ್ಕೆ ಸಿಕ್ಕ ಉತ್ತರ ಕೈಲಾಸ.. ಹಾಗಾದರೆ ಕೈಲಾಸ ಎಲ್ಲಿದೆ ಅಂತ ಕೋರ್ಟ್​​ ಕೇಳಿದೆ.. ಇದಕ್ಕೆ ನಿತ್ಯಾನಂದನ ಶಿಷ್ಯ ಅರಚನ ತಿರುಮಲ ಉತ್ತರಿಸಿದ್ದಾರೆ.. ಆಸ್ಟ್ರೇಲಿಯಾ ಬಳಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಇದೆ.. ಇದಕ್ಕೆ ವಿಶ್ವಸಂಸ್ಥೆಯ ಮಾನ್ಯತೆಯೊಂದಿಗೆ ಸ್ಥಾಪಿಸಲಾಗಿದೆ ಅಂತ ಪ್ರತಿಪಾದಿಸಿದ್ದಾರೆ..

ಇದನ್ನೂ ಓದಿ: ನಿಮಗಿದು ಗೊತ್ತೇ..! ಐ ಡ್ರಾಪ್​ ತಪ್ಪಾಗಿ ಹಾಕಿಕೊಳ್ಳೋದು ಅಪಾಯಕಾರಿ; ಹೇಗೆ ಗೊತ್ತಾ?
publive-image

ನಿತ್ಯಾನಂದ ಪರ ವಕಾಲತ್ತು ವಹಿಸಲು ಹೊಸ ವಕೀಲರನ್ನ ನೇಮಿಸಲು ಅರ್ಚನಾ ಅನುಮತಿ ಕೋರಿದ್ರು. ಮನವಿಯನ್ನ ಸ್ವೀಕರಿಸಿದ ಕೋರ್ಟ್​​​, ವಿಚಾರಣೆ ಮುಂದೂಡಿದೆ.. ಅದ್ಹೇನೆ ಇರಲಿ ಇಲ್ಲಿಂದ ಓಡಿ ಹೋದ ನಿತ್ಯಾನಂದ, ಈ ಮೊದ್ಲು ದಕ್ಷಿಣ ಅಮೆರಿಕಾದ ಇಕ್ವೇಡಾರ್​ ಬಳಿಯ ಚಿಕ್ಕ ದ್ವೀಪ ಖರೀದಿಸಿ ಹೊಸ ರಾಷ್ಟ್ರ ಕಟ್ಟಲಾಗಿದೆ ಅನ್ನೋ ಸುದ್ದಿ ಇತ್ತು.. ಆದ್ರೆ ಈಗ ಆಸ್ಟ್ರೇಲಿಯಾ ಬಳಿಯಂತೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment