/newsfirstlive-kannada/media/post_attachments/wp-content/uploads/2024/07/Bhaskar-shenoy-1.jpg)
ನ್ಯೂಸ್​​ಫಸ್ಟ್​​ ವಿಶೇಷ ಸಂದರ್ಶನದಲ್ಲಿ ಮಣಿಪಾಲ್​​ ಆಸ್ಪತ್ರೆಯ ಮಕ್ಕಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್​ ಭಾಸ್ಕರ್​ ಶೆಣೈಯವರನ್ನು ಭಾಗವಹಿಸಿದ್ದಾರೆ. ಮಳೆಗಾಲದ ಸಮಯ ಮಕ್ಕಳಲ್ಲಿ ಕಾಣಿಸಿಕೊಳ್ಳುವ ವೈರಲ್​ ಫೀವರ್​ಗಳು ಮತ್ತು ಡೆಂಗ್ಯೂ ಪ್ರಕರಣಗಳ ಗೊಂದಲಗಳ ಕುರಿತು ವೈದ್ಯರು ಮಾತನಾಡಿದ್ದಾರೆ. ಈ ವೇಳೆ ಚಂಡೀಪುರ, ನಿಫಾ ವೈರಸ್​ ಕುರಿತಾಗಿಯೂ ಮಾಹಿತಿ ಹಂಚಿಕೊಂಡಿದ್ದಾರೆ.
ಚಂಡೀಪುರ, ನಿಫಾ ವೈರಸ್​ ಲಕ್ಷಣಗಳೇನು?
ನಿಫಾ ವೈರಸ್​ ಕೇರಳದಲ್ಲಿ ಬಂದಿರೋದು. ಅಲ್ಲಿನ ಸರ್ಕಾರ ಅದನ್ನು ತಡೆಗಟ್ಟುವ ಕೆಲಸ ಮಾಡಿದೆ. ಬೇರೆ ಕಡೆಗೆ ಹರಡದಂತೆ ತಡೆಗಟ್ಟಿದ್ದಾರೆ. ಚಂಡೀಪುರ ವೈರಲ್​​ ಇತ್ತು. 1965ರ ಆಸುಪಾಸಿನಲ್ಲಿ ಮಹಾರಾಷ್ಟ್ರದ ನಾಗಪುರದ ಬಳಿಯ ಚಂಡೀಪುರ ಎಂಬ ಊರಲ್ಲಿ ಪತ್ತೆ ಮಾಡಲಾಯ್ತು. ಈ ವೈರಸ್​ ಸಾಮಾನ್ಯವಾಗಿ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್​ನಲ್ಲಿ ಬರುತ್ತಿತ್ತು. ಆದರೆ ಈ ಬಾರಿ ಗುಜರಾತ್​ನಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಈ ವರ್ಷ 100 ಮಕ್ಕಳು ಇದಕ್ಕೆ ಬಲಿಯಾಗಿವೆ. ಇದು ಕೂಡ ವೈರಸ್​ನಿಂದ ಬರೋದು. ಹೈ-ಫೀವರ್​, ಮಗುವಿಗೆ ಪಿಡ್ಸ್​ ಬರೋದು, ಎಚ್ಚರ ತಪ್ಪಿ ಬೀಳೋದು. ಇದು ತುಂಬಾ ಅಪಾಯಕಾರಿ. 100 ಮಕ್ಕಳಲ್ಲಿ 50 ಮಕ್ಕಳು ಬದುಕುಳಿಯುತ್ತಾರೆ.
ಇದನ್ನೂ ಓದಿ: ಡೆಂಗ್ಯೂ ಬಂದ ಮಗುವಿಗೆ ಮತ್ತೆ ಡೆಂಗ್ಯೂ ಬರಬಹುದು! ಆ್ಯಂಟಿಬಯೋಟಿಕ್ಸ್ ಕೊಡೋದು ಉತ್ತಮವೇ?
ಡೆಂಗ್ಯೂ ಕೇಸ್​ನಲ್ಲಿ ಸಾಯೋದು ಕಡಿಮೆ. ಪ್ರಾರಂಭದಲ್ಲಿ ವೈದರನ್ನು ಭೇಟಿಯಾದವರು ಸಾಯೋದು ಕಡಿಮೆ. ಆದರೆ ಚಂಡೀಪುರ ವೈರಸ್​ ಹಾಗಲ್ಲ. ಮೊದಲ ದಿನವೇ ಆಸ್ಪತ್ರೆ ಸೇರಿದರೆ ಆ ಸಂದಿಗ್ಧತೆ ತಡೆಯೋದು ಕಷ್ಟ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us