/newsfirstlive-kannada/media/post_attachments/wp-content/uploads/2025/03/NO-FLY-AREA.jpg)
ವಿಶ್ವದಲ್ಲಿ ದಿನಕ್ಕೆ ಸಾವಿರಾರು ವಿಮಾನಗಳು ಹಾರಾಡುತ್ತವೆ. ಲಕ್ಷಾಂತರ ಜನರಿಗೆ ಪ್ರಯಾಣ ಸೇವೆ ನೀಡುತ್ತವೇ ಅತಿ ಕಡಿಮೆ ಸಮಯದಲ್ಲಿ, ಅತಿದೂರದ ಸ್ಥಳವನ್ನು ಕ್ರಮಿಸುವ ಏಕೈಕ ಸಂಚಾರ ಮಾರ್ಗ ಅದು ವಿಮಾನ ಮಾರ್ಗ. ವಿಮಾನಗಳ ಆಕಾಶದಲ್ಲಿ ಹಾರಾಡುವುದನ್ನು ನಾವು ನೋಡಿರುತ್ತೇವೆ. ಅವುಗಳ ಸಂಚಾರಕ್ಕೆ ಆಕಾಶವೇ ಮಿತಿ ಎಂಬ ನಂಬಿಕೆ ನಮ್ಮಲ್ಲಿ ಇರುತ್ತದೆ. ಆದರೆ ವಿಮಾನಗಳಿಗೂ ಕೂಡ ಮಾರ್ಗ ಸಂಚಾರಗಳು ನಿಗದಿಯಾಗಿರುತ್ತವೆ. ಇಂತಹ ಪ್ರಮುಖ ಸ್ಥಳಗಳಲ್ಲಿ ಹಾರಾಟ ನಡೆಸಕೂಡದು ಎಂಬ ಮಾರ್ಗಸೂಚಿಗಳು ಅವುಗಳಿಗೆ ಇರುತ್ತವೆ.
ವಿಶ್ವದ ಕನಿಷ್ಠ 7 ಜಾಗಗಳ ಮೇಲೆ ವಿಮಾನ ಹಾರಾಟಗಳ ನಿರ್ಬಂಧವಿದೆ. ಅವುಗಳನ್ನು ನೋ ಫ್ಲೈ ಏರಿಯಾ ಎಂದು ಗುರುತಿಸಲಾಗುತ್ತದೆ. ಆ ಸ್ಥಳಗಳು ಯಾವುವು? ಅಲ್ಲಿ ವಿಮಾನ ಹಾರಾಟಕ್ಕೆ ನಿಷೇಧ ಹೇರಲು ಕಾರಣಗಳೇನು ಎಂಬುದನ್ನು ನಾವು ನಿಮಗೆ ಇಲ್ಲಿ ವಿವರವಾಗಿ ಹೇಳುತ್ತೇವೆ.
ಅದರಲ್ಲಿ ಮೊದಲನೇಯದರು ಡಿಸ್ನಿ ಪಾರ್ಕ್ ಅಮೆರಿಕಾ. ಅಮೆರಿಕಾ ಸರ್ಕಾರ ಕ್ಯಾಲಿಫೋರ್ನಿಯಾದಲ್ಲಿರುವ ಡಿಸ್ನಿಪಾರ್ಕ್ ಮತ್ತು ಫ್ಲೋರಿಡಾದಲ್ಲಿರುವ ಡಿಸ್ನಿಲ್ಯಾಂಡ್ನ್ನು ನೋ ಫ್ಲೈ ಏರಿಯಾ ಎಂದು ಘೋಷಣೆ ಮಾಡಿದೆ. 9/11 ಉಗ್ರರ ದಾಳಿಯ ಬಳಿಕ ಭದ್ರತಾ ವ್ಯವಸ್ಥೆಯನ್ನು ಕಾಪಾಡಲು ಹಾಗೂ ಈ ಪ್ರದೇಶಗಳನ್ನು ಸುರಕ್ಷಿತವಾಗಿ ಇಡುವ ಉದ್ದೇಶದಿಂದ ಈ ಒಂದು ಆದೇಶವನ್ನು ನೀಡಲಾಗಿದೆ.
ಇದನ್ನೂ ಓದಿ:ಇದು ವಿಶ್ವದ ಅತಿಹೆಚ್ಚು ಮಾರಾಟವಾಗುವ ಎರಡನೇ ಪರ್ಫ್ಯೂಮ್.. ಇದರ ಹಿಂದಿದೆ ಮೊಘಲರ ನಂಟು
ಇನ್ನು ವಿಮಾನ ಹಾರಾಟ ನಿರ್ಬಂಧಿಸಿದ ಮತ್ತೊಂದು ಪ್ರಮುಖ ಸ್ಥಳ ಬಂದು ಅದು ಮೆಕ್ಕಾ. ಮೆಕ್ಕಾದ ಮೇಲೆ ಯಾವುದೇ ವಿಮಾನದ ಹಾರಾಟಗಳು ನಡೆಯುವುದಿಲ್ಲ. ಇದೊಂದು ಧಾರ್ಮಿಕ ಕ್ಷೇತ್ರವಾದ ಕಾರಣ ಅದರ ಪಾವಿತ್ರ್ಯವನ್ನು ಕಾಪಾಡುವ ಹಾಗೂ ಅದರ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಕೂಡ ನೋ ಫ್ಲೈಯಿಂಗ್ ಏರಿಯಾದ ಎಂದು ಘೋಷಿಸಲಾಗಿದೆ
ಇನ್ನು ನಮ್ಮ ಭಾರತದ ಆಗ್ರಾದಲ್ಲಿರುವ ವಿಶ್ವದ ಏಳನೇ ಅದ್ಭುತಗಳಲ್ಲಿ ಒಂದಾಗಿರುವ ತಾಜ್ಮಹಲ್ ಮೇಲೂ ಕೂಡ ಯಾವುದೇ ವಿಮಾನಗಳು ಹಾರಾಡಲು ಅವಕಾಶವಿಲ್ಲ. ಅಪಘಾತಗಳನ್ನು ತಡೆಯುವ ಹಾಗೂ ಜನಜಂಗಳಿಯ ಸುರಕ್ಷತೆಯ ದೃಷ್ಟಿಯಿಂದ ತಾಜ್ಮಹಲ್ನ ಸುತ್ತಮುತ್ತಲಿನ ಸುಮಾರು 7 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಿಮಾನ ಹಾರಾಟಕ್ಕೂ ಅವಕಾಶವಿಲ್ಲ.
ಇದನ್ನೂ ಓದಿ:ವಿಶ್ವದಲ್ಲಿಯೇ ಅತ್ಯಂತ ಸಂತೋಷದಿಂದ ಇರುವ ರಾಷ್ಟ್ರಗಳು ಯಾವುವು! ಭೀಕರ ದುಃಖದಲ್ಲಿ ಮುಳುಗಿರುವ ದೇಶ ಯಾವುದು?
ಇನ್ನು ಯುಎಸ್ನಲ್ಲಿರುವ ಕ್ಯಾಂಪ್ ಡೇವಿಡ್ನ್ನು ಕೂಡ ನೋ ಫ್ಲೈ ಏರಿಯಾ ಎಂದು ಘೋಷಿಸಲಾಗಿದೆ. ಅದು ಅಮೆರಿಕಾ ಅಧ್ಯಕ್ಷರ ಪ್ರಮುಖ ತಾಣವಾಗಿದ್ದರಿಂದ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಪ್ಯಾಂಟೆಕ್ಸ್ ನ್ಯೂಕ್ಲೀಯರ್ ಅಸೆಂಬ್ಲಿ ಪ್ಲಾಂಟ್ ಇದು ಕೂಡ ಅಮೆರಿಕಾದಲ್ಲಿದೆ ಟೆಕ್ಸಾಸ್ನಲ್ಲಿರುವ ಈ ನ್ಯೂಕ್ಲೀಯರ್ ಅಸೆಂಬ್ಲಿ ಪ್ಲಾಂಟ್ ಮೇಲೆ ವಿಮಾನ ಹಾರಾಟವನ್ನು ನಿರ್ಬಂಧಿಸಲಾಗಿದೆ.
ನಾವೆಲ್ ಸಬ್ಮೆರಿನ್ ಬೇಸ್ ಕಿಂಗ್ಸ್ ಬೇ ಇದು ಕೂಡ ಅಮೆರಿಕಾದಲ್ಲಿದೆ. ಜಾರ್ಜಿಯಾದಲ್ಲಿರುವ ಈ ನಾವೆಲ್ ಸಬ್ಮೆರಿನ್ ಬೇಸ್ ಕಿಂಗ್ಸ್ ಬೇ ಒಂದು ನಿರ್ಬಂಧಿತ ಸ್ಥಳ. ಸಾರ್ವಜನಿಕರಿಗೂ ಕೂಡ ನಿರ್ಬಂಧವಿದೆ. ಹೀಗಾಗಿ ಇದರ ಮೇಲೆ ವಿಮಾನ ಹಾರಾಟವನ್ನು ಕೂಡ ನಿರ್ಬಂಧಿಸಲಾಗಿದೆ.
ಬುಷ್ ರಾಂಚ್ ಇದು ಅಮೆರಿಕಾದ ಟೆಕ್ಸಾಸ್ನಲ್ಲಿರುವ ಪ್ರದೇಶ. 9/11 ಅಮೆರಿಕಾದ ವಾಣಿಜ್ಯ ಕಟ್ಟಡಗಳ ಮೇಲಾದ ದಾಳಿಯಿಂದಾಗಿ ಅಮೆರಿಕಾ ಸುರಕ್ಷತೆಯ ದೃಷ್ಟಿಯಿಂದಾಗಿ ಹಲವು ಏರಿಯಾಗಳನ್ನು ನೋ ಫ್ಲೈಸ್ ಏರಿಯಾ ಎಂದು ಘೋಷಿಸಿದೆ. ಅದರಲ್ಲಿ ಬುಷ್ ರಾಂಚ್ ಕೂಡ ಒಂದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ