/newsfirstlive-kannada/media/post_attachments/wp-content/uploads/2025/03/CLEANEST-AIR.jpg)
ಶುದ್ಧ ಗಾಳಿಯ ವಿಚಾರವಾಗಿ ಬಾಂಗ್ಲಾದೇಶ ಹಾಗೂ ಭಾರತದ ದೆಹಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇಲ್ಲಿ ಎಕ್ಯೂಐ ಯಾವ ಮಟ್ಟಕ್ಕೆ ಹಾಳಾಗಿದೆ. ಅದರಿಂದಾಗಿ ವರ್ಷಕ್ಕೆ ಎಷ್ಟು ಜನರು ಸಾವನ್ನಪ್ಪುತ್ತಿದ್ದಾರೆ ಎಂಬ ವರದಿಗಳು ಕೂಡ ಆಚೆ ಬಂದಿವೆ. ಉಸಿರಾಟಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಈ ಅಶುದ್ಧ ಗಾಳಿಯಿಂದಾಗಿ ಹೇಗೆ ಹೆಚ್ಚಾಗುತ್ತೆ ಎಂಬುದರ ಬಗ್ಗೆಯೂ ಕೂಡ ಸಂಶೋಧನೆಗಳಾಗಿವೆ. ಆದ್ರೆ ನಿಮಗೆ ವಿಶ್ವದಲ್ಲಿಯೇ ಅತ್ಯಂತ ಪರಿಶುದ್ಧ ಗಾಳಿಯನ್ನು ಹೊಂದಿದ ರಾಷ್ಟ್ರಗಳು ಯಾವುವು ಅಂತ ಗೊತ್ತಾ? ಅಂತಹ ವಿಶೇಷ ದೇಶಗಳ ಬಗ್ಗೆ ನಾವು ನಿಮಗೆ ಇಲ್ಲಿ ಸಂಪೂರ್ಣ ವಿವರ ನೀಡುತ್ತೇವೆ.
ಇದನ್ನೂ ಓದಿ: 2002ರಲ್ಲಿ ಸೂಪರ್ ಡೂಪರ್ ಹಿಟ್ ಸಿನಿಮಾ.. ಮುಂಬೈನಲ್ಲಿ ಅನೇಕ ಮದುವೆಗಳನ್ನೇ ಮುಂದೂಡುವಂತೆ ಮಾಡಿತ್ತು! ಕಾರಣವೇನು ಗೊತ್ತಾ?
2024ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನಲ್ಲಿ ಒಟ್ಟು ಏಳು ರಾಷ್ಟ್ರಗಳು ಅತ್ಯಂತ ಪರಿಶುದ್ಧವಾದ ಗಾಳಿಯನ್ನು ಹೊಂದಿವೆ ಎಂದು ಹೇಳಿದೆ. ಈ ದೇಶಗಳು ವಿಶ್ವ ಸಂಸ್ಥೆಯ ಮಾನದಂಡಗಳ ಪ್ರಕಾರ ಇರಬೇಕಾದ ಪರಿಶುದ್ಧತೆಯ ಗಾಳಿಯನ್ನು ಹೊಂದಿವೆ. ಅವುಗಳ ಬಗ್ಗೆ ಒಂದು ಸಂಪೂರ್ಣ ವರದಿಯನ್ನು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿತ್ತು. ವಿಶ್ವಸಂಸ್ಥೆಗಳು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶುದ್ಧ ಗಾಳಿ ಹೊಂದಿದ ಆ ಏಳು ದೇಶಗಳು ಇವು.
ಆಸ್ಟ್ರೇಲಿಯಾ: ಅತ್ಯಂತ ಕಠಿಣವಾದ ಹವಾಮಾನ ನಿಯಂತ್ರಣದ ನಿಯಮಗಳು. ವಿಶಾಲವಾದ ಪ್ರದೇಶಗಳನ್ನು ಹೊಂದಿರುವ ನಗರಗಳು. ಮತ್ತು ಪರಿಣಾಮಕಾರಿಯಾದ ಗಾಳಿ ಶುದ್ಧತೆಯನ್ನು ಕಾಪಾಡಿಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಆಸ್ಟ್ರೇಲಿಯಾ ಜಗತ್ತಿನ ಅತ್ಯಂತ ಪರಿಶುದ್ಧ ಗಾಳಿ ಹೊಂದಿದ ದೇಶಗಳಲ್ಲಿ ಮೊದಲನೇ ಸ್ಥಾನದಲ್ಲಿದೆ.
2. ನ್ಯೂಜಿಲೆಂಡ್: ಈ ದ್ವೀಪ ರಾಷ್ಟ್ರವೂ ಕೂಡ ಅತ್ಯಂತ ಪರಿಶುದ್ಧ ಗಾಳಿ ಹೊಂದಿದ ದೇಶಗಳಲ್ಲಿ ಗುರುತಿಸಿಕೊಂಡಿದೆ. ಅತ್ಯಂತ ಕಠಿಣ ಎಮಿಷನ್ ನಿಯಮಗಳು. ಕಡಿಮೆ ಕೈಗಾರಿಕೋದ್ಯಮಗಳನ್ನು ಹೊಂದಿರುವುದು. ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳನ್ನು ಹೊಂದಿರುವ ಕಾರಣ ನ್ಯೂಜಿಲೆಂಡ್ನಲ್ಲಿ ಪರಿಶುದ್ಧ ಗಾಳಿಯೂ ವ್ಯಾಪಕವಾಗಿ ದೊರೆಯುತ್ತದೆ
3. ದಿ ಬಹಮಾಸ್: ಬಹಮಾಸ್ ಕೂಡ ಅತ್ಯಂತ ಹೆಚ್ಚು ನವೀಕರಿಸಬಹುದಾದ ಶಕ್ತಿಯ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡಿದೆ. ಇಲ್ಲಿಯೂ ಕೂಡ ಕೈಗಾರಿಕೋದ್ಯಮಗಳ ಅಬ್ಬರ ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆಯೇ. ಇದು ಕೂಡ ನ್ಯೂಜಿಲೆಂಡಿನಂತೆ ಸ್ಟ್ರಿಕ್ಟ್ ಎಮಿಷನ್ ಸ್ಟಾಂಡರ್ಡ್ ಅಳವಡಿಸಿಕೊಂಡಿದೆ. ಹೀಗಾಗಿ ಈ ದೇಶದಲ್ಲಿಯೂ ಅತ್ಯಂತ ಪರಿಶುದ್ಧ ಗಾಳಿಯನ್ನು ಅಲ್ಲಿಯ ಜನರು ಸೇವಿಸುತ್ತಾರೆ.
4. ಬಾರ್ಬಡೋಸ್: ಬರ್ಬೋಡಸ್ನ ಭೌಗೋಳಿಕ ಅಂಶಗಳೇ ಅಲ್ಲಿನ ವಾತಾವರಣದಲ್ಲಿ ಪರಿಶುದ್ಧ ಗಾಳಿ ಸಿಗುವಂತೆ ಮಾಡಿದೆ.
5. ಗ್ರೇನೆಡಾ: ಗ್ರೇನೆಡಾ ಕೆರಿಬಿಯನ್ ರಾಷ್ಟ್ರ, ಇಲ್ಲಿನ ನೈಸರ್ಗಿಕ ವಾತಾವರಣ ಹಾಗೂ ಮಿತಿಯಲ್ಲಿರುವ ಕೈಗಾರಿಕೋದ್ಯಮಗಳ ಚಟುವಟಿಕೆಯಿಂದ ಈ ದ್ವೀಪ ರಾಷ್ಟ್ರದಲ್ಲಿ ಪರಿಶುದ್ಧ ಗಾಳಿ ಸಿಗಲು ಸಹಾಯಕವಾಗಿದೆ.
6. ಇಸ್ತೋನಿಯಾ:ಒಂದು ಕಾಲದಲ್ಲಿ ಮಾಲಿನ್ಯ ತುಂಬಿದ ತೈಲ ಶಕ್ತಿಯಿಂದಾಗಿ ತನ್ನ ದೇಶದ ಪರಿಶುದ್ಧ ಗಾಳಿಯನ್ನು ಕಳೆದುಕೊಂಡಿದ್ದ ಈ ದೇಶವು ನಂತರ ಅನೇಕ ಬದಲಾವಣೆಗಳಿಗೆ ತನ್ನನ್ನು ಒಳಪಡಿಸಿಕೊಂಡು ಶುದ್ಧ ಗಾಳಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಕೊಂಡಿತು.
7. ಐಸ್ಲ್ಯಾಂಡ್: ನವೀಕರಿಸಬಹುದಾದ ಶಕ್ತಿಯನ್ನು ಹೊಂದಿರುವ ಜಾಗತಿಕ ಶಕ್ತಿ ಕೇಂದ್ರ ಅಂತಲೇ ಐಸ್ಲ್ಯಾಂಡ್ನ್ನನು ಕರೆಯುತ್ತಾರೆ. ಇಲ್ಲಿರುವ ವಿದ್ಯುತ್ ಶಕ್ತಿ ಹಾಗೂ ತಾಪಮಾನದ ಮೂಲ ಹೈಡ್ರೋಲಿಕ್ಟ್ರಿಕ್ ಮತ್ತು ಜಿಯೋಥರ್ಮಲ್ ಮೂಲಕವೇ ಪಡೆಯುತ್ತದೆ. ಇದು ಪ್ರಮುಖವಾಗಿ ಅಶುದ್ಧ ಗಾಳಿಗೆ ಕಾರಣವಾಗುವ ಪ್ರಮುಖ ಅಂಶಗಳನ್ನು ನಾಶಗೊಳಿಸಲು ಸಹಾಯಕವಾದವು. ಹೀಗಾಗಿ ಐಸ್ಲ್ಯಾಂಡ್ ಅತ್ಯಂತ ಪರಿಶುದ್ಧ ಗಾಳಿ ಹೊಂದಿದ 7 ರಾಷ್ಟ್ರಗಳಲ್ಲಿ ಒಂದಾಯಿತು.
ಇನ್ನು ಭಾರತ ಈ ಲಿಸ್ಟ್ಗಳಲ್ಲಿ ಕಾಣುವುದೇ ಇಲ್ಲ. ವಿಶ್ವದ ಅತ್ಯಂತ ಕಲುಷಿತ ಗಾಳಿಯನ್ನು ಹೊಂದಿರುವ ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿ ಇರುವುದು ನಮ್ಮೆಲ್ಲರ ದೌರ್ಭಾಗ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ