ಇವು ವಿಶ್ವದ ಅತ್ಯಂತ ಶ್ರೀಮಂತ ಟಾಪ್​ 10 ನಗರಗಳು! ನಂಬರ್ 1 ಸ್ಥಾನದಲ್ಲಿರುವ ನಗರ ಯಾವುದು ಗೊತ್ತಾ?

author-image
Gopal Kulkarni
Updated On
ಇವು ವಿಶ್ವದ ಅತ್ಯಂತ ಶ್ರೀಮಂತ ಟಾಪ್​ 10 ನಗರಗಳು! ನಂಬರ್ 1 ಸ್ಥಾನದಲ್ಲಿರುವ ನಗರ ಯಾವುದು ಗೊತ್ತಾ?
Advertisment
  • ವಿಶ್ವದ ಅತ್ಯಂತ ಶ್ರೀಮಂತ ನಗರಗಳ ಟಾಪ್ 10 ಪಟ್ಟಿಯಲ್ಲಿ ಯಾವ ನಗರಗಳಿವೆ
  • ಈ ನಗರಗಳ ಶ್ರೀಮಂತಿಕೆಯನ್ನು ಯಾವ ಮಾನದಂಡಗಳ ಮೇಲೆ ಅಳೆಯಲಾಗುತ್ತೆ?
  • ಅಮೆರಿಕಾದ ಒಟ್ಟು ಎಷ್ಟು ನಗರಗಳು ಈ ಟಾಪ್ 10 ಪಟ್ಟಿಯಲ್ಲಿವೆ ಅಂತ ಗೊತ್ತಾ?

ಜಗತ್ತಿನಲ್ಲಿ ನೂರಾರು ದೇಶಗಳಿವೆ. ಸಾವಿರಾರು ನಗರಗಳಿವೆ. ಆಯಾ ನಗರಗಳಿಗೆ ಅದರದೇ ಆದ ಕಲೆ, ಸಾಹಿತ್ಯ, ಪರಂಪರೆ ಸಾಂಸ್ಕೃತಿಕ ಶ್ರೀಮಂತಿಕೆಗಳಿವೆ. ಆದರೆ ನಿಜವಾದ ಶ್ರೀಮಂತಿಕೆಯನ್ನು ಅಳೆಯುವ ಮಾನದಂಡ ಅಂದ್ರೆ ಅದು ಹಣ ಹಾಗೂ ಐಷಾರಾಮಿಯ ಬದಕು. ಯಾವ ನಗರಗಳು ಐಷಾರಾಮಿಯಾಗಿ, ಶ್ರೀಮಂತಿಕೆಯಿಂದ ಅತಿಹೆಚ್ಚು ಆದಾಯ ಗಳಿಕೆಯಿಂದ ಕೂಡಿರುತ್ತವೆಯೋ ಅಂತಹ ನಗರಗಳನ್ನು ಶ್ರೀಮಂತ ನಗರಗಳೆಂದು ಗುರುತಿಸಲಾಗುತ್ತದೆ. ಜಗತ್ತಿನ ಅಂತಹ ಟಾಪ್​ 10 ನಗರಗಳು ಯಾವುವು ಅಂತ ನೋಡಿದಾಗ

publive-image

10ನೇ ಸ್ಥಾನದಲ್ಲಿ ಅಮೆರಿಕಾದ ಡಲ್ಲಾಸ್ ನಗರ ಬರುತ್ತದೆ. ಇದು ಜಗತ್ತಿನ ಅತ್ಯಂತ 10ನೇ ಶ್ರೀಮಂತ ನಗರ ಇದರ ಜಿಡಿಪಿ ವರ್ಷಕ್ಕೆ 744 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಹೇಳಲಾಗುತ್ತದೆ.

publive-image

ಇನ್ನು 9ನೇ ಸ್ಥಾನದಲ್ಲಿ ಅಮೆರಿಕಾದ ಮತ್ತೊಂದು ಐಷಾರಾಮಿ ನಗರ ಸ್ಯಾನ್​ಫ್ರಾನ್ಸಿಸ್ಕೋ ಬರುತ್ತದೆ. ಇದು ತನ್ನ ಒಡಲಲ್ಲಿ ನೂರಾರು ಶ್ರೀಮಂತರನ್ನು ಸಾಕುತ್ತಿದೆ. ಇಲ್ಲಿನ ಉದ್ಯಮ, ಸೇವಾ ಕ್ಷೇತ್ರದಿಂದಾಗಿ ಇದು ವರ್ಷಕ್ಕೆ 778 ಬಿಲಿಯನ್ ಡಾಲರ್ ಜಿಡಿಪಿ ಹೊಂದಿದೆ ಎಂದು ಹೇಳಲಾಗುತ್ತದೆ .

publive-image

8ನೇ ಸ್ಥಾನದಲ್ಲಿ ಬ್ರೆಜಿಲ್​ನ ಗ್ರೇಟರ್ ಸಾಒಪಲೋ ಬರುತ್ತದೆ. ಇದು ಜಗತ್ತಿನ ಅತ್ಯಂತ ಶ್ರೀಮಂತ ನಗರಗಳಲ್ಲಿ 7ನೇ ಸ್ಥಾನವನ್ನು ಪಡೆದಿದೆ. ಈ ನಗರದ ಜಿಡಿಪಿ ವರ್ಷಕ್ಕೆ 780 ಬಿಲಿಯನ್ ಡಾಲರ್ ಎಂದು ಹೇಳಲಾಗುತ್ತದೆ.

publive-image

ಸಿವೊಲ್​, ದಕ್ಷಿಣ ಕೊರಿಯಾದ ಪ್ರಮುಖ ನಗರ ಇದು ಜಗತ್ತಿನ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಪಡೆದಿದೆ. ಇದರ ಜಿಡಿಪಿ 878.5 ಬಿಲಿಯನ್ ಡಾಲರ್​ನಷ್ಟು ಎಂದು ಹೇಳಲಾಗುತ್ತದೆ.

publive-image

ಶಿಕಾಗೋ ಅಮೆರಿಕಾದ ಮತ್ತೊಂದು ಶ್ರೀಮಂತ ಹಾಗೂ ಸುಂದರ ನಗರ. ಈ ನಗರ ವಿಶ್ವದ ಅತ್ಯಂತ ಶ್ರೀಮಂತ ನಗರಗಳಲ್ಲಿ ಆರನೇ ಸ್ಥಾನವನ್ನು ಪಡೆದಿದೆ. ಇದರ ಶ್ರೀಮಂತಿಕೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಈ ನಗರದ ಜಿಡಿಪಿಯು ವರ್ಷಕ್ಕೆ 894.9 ಬಿಲಿಯನ್ ಡಾಲರ್​ನಷ್ಟು ಇದೆ.

publive-image

ಲಂಡನ್​, ಯುನೈಟೆಡ್​ ಕಿಂಗ್​ಡಮ್​ನ ಮುಕುಟ. ಇಂಗ್ಲೆಂಡ್​ನ್ನು ಗುರುತಿಸಬೇಕಾದರೆ ಅದರ ಜೊತೆಗೆ ಲಂಡನ್​ ಕೂಡ ನೆನಪಾಗುತ್ತದೆ. ಇದು ವಿಶ್ವದ 5ನೇ ಶ್ರೀಮಂತ ರಾಷ್ಟ್ರವೆಂದು ಹೇಳಲಾಗುತ್ತದೆ. ಕೇವಲ ದೇಶದವರು ಮಾತ್ರವಲ್ಲ, ವಿದೇಶಿಗರು ಕೂಡ ಇಲ್ಲಿ ಹೂಡಿಕೆ ಮಾಡುತ್ತಾರೆ. ರಿಯಲ್ ಎಸ್ಟೇಟ್​ನಲ್ಲಿ ಹಣವನ್ನು ಹಾಕುತ್ತಾರೆ. ಐಷಾರಾಮಿ ಬಿಲ್ಡಿಂಗ್​ಗಳನ್ನು ಖರೀದಿಸುತ್ತಾರೆ. ಜಾಗತಿಕವಾಗಿ ಶ್ರೀಮಂತರನ್ನು ಸೆಳೆಯುವ ನಗರಿಯಿದು. ಲಂಡನ್ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ 5ನೇ ಸ್ಥಾನದಲ್ಲಿದೆ.

publive-image

ಪ್ಯಾರಿಸ್​ ಇದು ಪ್ರೇಮಿಗಳ ನಗರಿ. ಪ್ರೇಮಿಗಳು ವಿಹರಿಸಲೆಂದೇ ಸೃಷ್ಟಿಯಾಗಿರುವ ನಗರವೇನೋ ಅನ್ನೋವಷ್ಟು ಸುಂದರತೆಯನ್ನು ತನ್ನ ಅಂತರಾಳದಲ್ಲಿ ಇಟ್ಟುಕೊಂಡಿರುವ ಚೆಂದದ ಪಟ್ಟಣ. ಪ್ರವಾಸೋದ್ಯಮವೇ ಇದರ ಮೂಲ ಆದಾಯ. ಫ್ರಾನ್ಸ್​ನ ಪ್ಯಾರಿಸ್​ ವಿಶ್ವದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ.

publive-image

ಲಾಸ್​ ಎಂಜೆಲ್ಸ್ ಇದು ಕೂಡ ಅಮೆರಿಕಾದ ಮತ್ತೊಂದು ಶ್ರೀಮಂತ ನಗರ. ಅಮೆರಿಕಾದ ಈ ಹಿಂದೆ ಕಾಣಿಸಿದ ನಗರಗಳಿಗಿಂತಲೂ ಇದು ಅತ್ಯಂತ ಶ್ರೀಮಂತ ನಗರ. ಇದು ಗಳಿಸುವ ಜಿಡಿಪಿ ಎಷ್ಟು ಅಂತ ಗೊತ್ತಾದ್ರೆ ಹೌಹಾರೋದು ಪಕ್ಕಾ. ಇದು ವರ್ಷಕ್ಕೆ ಸುಮಾರು 1.29 ಟ್ರಿಲಿಯನ್ ಯುಎಸ್​ ಡಾಲರ್​ನಷ್ಟು ಜಿಡಿಪಿ ಗಳಿಸುತ್ತದೆ. ಹೀಗಾಗಿ ಇದನ್ನು ಜಗತ್ತಿನ 2ನೇ ಅತಿದೊಡ್ಡ ಶ್ರೀಮಂತ ನಗರ ಎಂದು ಗುರುತಿಸಲಾಗುತ್ತದೆ.

publive-image

ಟೋಕಿಯೋ ಜಪಾನ್​ನ ರಾಜಧಾನಿ, ವಿಶ್ವದ ಅತ್ಯಂತ ಶ್ರೀಮಂತ ನಗರಗಳಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಇದರ ಜಿಡಿಪಿ 2.1 ಟ್ರಿಲಿಯನ್ ಯುಎಸ್ ಡಾಲರ್ ಎಂದು ಹೇಳಲಾಗುತ್ತದೆ.

publive-image

ನ್ಯೂಯಾರ್ಕ್ ವಿಶ್ವದ ನಂಬರ್ 1 ಶ್ರೀಮಂತ ನಗರ. ವಿಶ್ವದ ಪ್ರಮುಖ ಹತ್ತು ಶ್ರೀಮಂತ ನಗರಗಳಲ್ಲಿ ಅತಿಹೆಚ್ಚು ಹೆಚ್ಚು ಆದಾಯ ಗಳಿಸುವ ಹಾಗೂ ಅತಿಹೆಚ್ಚು ಐಷಾರಾಮಿಯತೆಯಿಂದ ಕೂಡಿರುವ ನಗರ ಅಮೆರಿಕಾದ ನ್ಯೂಯಾರ್ಕ್ ನಗರ ಇದರ ಜಿಡಿಪಿ ಸುಮಾರು 2.3 ಟ್ರಿಲಿಯನ್ ಅಮೆರಿಕನ್ ಡಾಲರ್ ಎಂದು ಹೇಳಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment