ಈ ವೇಗಿ ಹೆಚ್ಚು ಡಾಟ್​ ಬಾಲ್ ಎಸೆದರು.. ಟ್ರೋಫಿ ಜೊತೆಗೆ 10 ಲಕ್ಷ ಬಹುಮಾನ ಗೆದ್ದರು..!

author-image
Ganesh
Updated On
ಈ ವೇಗಿ ಹೆಚ್ಚು ಡಾಟ್​ ಬಾಲ್ ಎಸೆದರು.. ಟ್ರೋಫಿ ಜೊತೆಗೆ 10 ಲಕ್ಷ ಬಹುಮಾನ ಗೆದ್ದರು..!
Advertisment
  • ಡಾಟ್ ಬಾಲ್ ಎಸೆಯೋದ್ರಲ್ಲಿ ಯಾರು ಪಂಟರ್​..?
  • RCB ಹೀರೋ ಹೇಜಲ್​ವುಡ್​ ಎಷ್ಟನೇ ಸ್ಥಾನದಲ್ಲಿದ್ದಾರೆ..?
  • ಕನ್ನಡಿಗ ಪ್ರಸಿದ್ಧ್ ಕೃಷ್ಣ ಕಮಾಲ್ ಮಾಡಿದ್ದಾರೆ..

ಐಪಿಎಲ್ ಫೈನಲ್​​ನಲ್ಲಿ ಆರ್​ಸಿಬಿ ಗೆಲ್ಲುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿದೆ. ಪಂಜಾಬ್ ಕಿಂಗ್ಸ್​ ತಂಡವನ್ನು 6 ರನ್​ಗಳಿಂದ ಸೋಲಿಸುವ ಮೂಲಕ ಆರ್​ಸಿಬಿ ಕಪ್​​ ಅನ್ನು ತನ್ನದಾಗಿಸಿಕೊಂಡಿದೆ. ಆರ್​ಸಿಬಿ ಟ್ರೋಫಿ ಗೆದ್ದರೂ, ಅತೀ ಹೆಚ್ಚು ಡಾಟ್ ಬಾಲ್ ಹಾಕಿದ ಪ್ರಶಸ್ತಿ ಆರ್​ಸಿಬಿಗೆ ದಕ್ಕಿಲ್ಲ.

ಈ ಬಾರಿಯ ‘ಗ್ರೀನ್ ಡಾಟ್ ಬಾಲ್​ ಆಫ್​ ದಿ ಸೀಸನ್’ ಅವಾರ್ಡ್​​ ಗುಜರಾತ್ ಟೈಟನ್ಸ್ ಪಾಲಾಗಿದೆ. ಗುಜರಾತ್ ತಂಡದ ಮೊಮ್ಮದ್ ಸಿರಾಜ್ ಅವರು ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 2025ರ ಮೆಗಾ ಹರಾಜಿನಲ್ಲಿ ಗುಜರಾತ್ ತಂಡವು ಸಿರಾಜ್ ಅವರನ್ನು 12.5 ಕೋಟಿಗೆ ಖರೀದಿಸಿತ್ತು. ಈ ಬಾರಿ ಸಿರಾಜ್ 15 ಮ್ಯಾಚ್​​ನಲ್ಲಿ 16 ವಿಕೆಟ್ ಕಿತ್ತಿದ್ದಾರೆ. ಈ ಹಿಂದೆ ಸಿರಾಜ್ ಆರ್​ಸಿಬಿ ಫ್ರಾಂಚೈಸಿಯಲ್ಲಿದ್ದರು. ಇನ್ನು, ಎರಡನೇ ಅತೀ ಹೆಚ್ಚು ಡಾಟ್ ಬಾಲ್ ಹಾಕಿದವರಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಇದ್ದಾರೆ.

ಇದನ್ನೂ ಓದಿ: RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. ಚಿನ್ನಸ್ವಾಮಿ ಸ್ಟೇಡಿಯಂ ಎಂಟ್ರಿಗೆ ಉಚಿತ ಪಾಸ್‌ ಘೋಷಣೆ

ಅತೀ ಹೆಚ್ಚು ಡಾಟ್ ಬಾಲ್ ಹಾಕಿದ ಸ್ಟಾರ್​..!

  • ಮೊಹ್ಮದ್ ಸಿರಾಜ್ (GT) 151 ಡಾಟ್ ಬಾಲ್
  •  ಪ್ರಸಿದ್ಧ್ ಕೃಷ್ಣ (GT) 146 ಡಾಟ್ ಬಾಲ್
  •  ಖಲೀಲ್ ಅಹ್ಮದ್ (CSK) 137 ಡಾಟ್ ಬಾಲ್
  •  ಅರ್ಷದೀಪ್ ಸಿಂಗ್ (PBKS) 137 ಡಾಟ್ ಬಾಲ್
  •  ಜಸ್​ಪ್ರಿತ್ ಬುಮ್ರಾ (MI) 128 ಡಾಟ್ ಬಾಲ್
  • ಇನ್ನು ಆರ್​ಸಿಬಿಯ ಜೋಶ್ ಹೇಜಲ್​ವುಡ್ ಅವರು 120 ಡಾಟ್ ಬಾಲ್ ಹಾಕಿ 8ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳ ಕಣಕಣದಲ್ಲೂ ಆರ್​ಸಿಬಿ.. ಆರ್​ಸಿಬಿ.. ಇದರ ಮಾಲೀಕರು ಯಾರು ಗೊತ್ತಾ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment