Advertisment

ಮಹಿಳೆಯರೇ ಎಚ್ಚರ.. ಬಿರು ಬಿಸಿಲಿನಲ್ಲಿ ಈ ಬಟ್ಟೆ ಧರಿಸಿ ತಪ್ಪು ಮಾಡಬೇಡಿ; ಯಾವ ಉಡುಪು ಹಾಕಿದ್ರೆ ಬೆಸ್ಟ್!

author-image
Veena Gangani
Updated On
ಮಹಿಳೆಯರೇ ಎಚ್ಚರ.. ಬಿರು ಬಿಸಿಲಿನಲ್ಲಿ ಈ ಬಟ್ಟೆ ಧರಿಸಿ ತಪ್ಪು ಮಾಡಬೇಡಿ; ಯಾವ ಉಡುಪು ಹಾಕಿದ್ರೆ ಬೆಸ್ಟ್!
Advertisment
  • ಉರಿ ಬಿಸಿಲಿನಲ್ಲಿ ಹೊರ ಬರುವ ಮುನ್ನ ಸಾರ್ವಜನಿಕರೇ ಎಚ್ಚರ ಎಚ್ಚರ
  • ಬಿರು ಬಿಸಿಲಿನಲ್ಲಿ ಧರಿಸುವ ಬಟ್ಟೆ ಎಷ್ಟು ಆರೋಗ್ಯಕರ ನಿಮಗೆಷ್ಟು ಗೊತ್ತು?
  • ರಣಭೀಕರ ಬಿಸಿಲಿನಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸುವ ಜನರೇ ಗಮನಿಸಿ!

ಇತ್ತೀಚಿಗಂತೂ ಎಲ್ಲೆಲ್ಲೂ ಚುರು ಚುರು ಎನ್ನುವ ಬಿಸಿಲು. ಧೂಳು ಮಣ್ಣು, ಧಗೆ, ಸೆಕೆ ಎಲ್ಲಾ ಸೇರಿಕೊಂಡು ಬೇಸಿಗೆ ಸಾಕಪ್ಪಾ ಸಾಕು ಎನಿಸಿಬಿಡುತ್ತದೆ. ದಿನದಿಂದ ದಿನಕ್ಕೆ ಬಿರು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಹೊರ ಬರೋದಕ್ಕೂ ಜನರು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಇಂತಹ ಉರಿ ಬಿಸಿಲಿನಲ್ಲಿ ಹೊರ ಬರುವ ಮುನ್ನ ನೀವೂ ಧರಿಸುವ ಬಟ್ಟೆ ಕೂಡ ಮ್ಯಾಟರ್ ಆಗುತ್ತೆ ಕಣ್ರಿ.

Advertisment

publive-image

ಇದನ್ನೂ ಓದಿ:ಸಖತ್​​ ಹಾಟ್​ ಆಯ್ತು ನಮ್ಮ ಬೆಂಗಳೂರು;​ ಬಿಸಿ ಗಾಳಿಯಿಂದ ಹೈರಾಣಾದ ರಾಜ್ಯದ ಜನ; ತಪ್ಪದೇ ಸ್ಟೋರಿ ಓದಿ!

ಹೌದು, ಬಿರು ಬಿಸಿಲಿನ ತಾಪಮಾನಕ್ಕೆ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತವೆ. ಅದರಲ್ಲೂ ಇಂತಹ ಸಮಯದಲ್ಲಿ ನಾವು ಧರಿಸುವ ಬಟ್ಟೆ ಎಷ್ಟು ಆರೋಗ್ಯ ಅಂತಾ ತಿಳಿದುಕೊಳ್ಳಬೇಕು. ರಣಭೀಕರ ಬಿಸಿಲಿನಿಂದ ನಮ್ಮ ದೇಹದಿಂದ ಬೆವರು ಹೆಚ್ಚಾಗಿ ಹೊರ ಹೋಗುವುದರಿಂದ ದೇಹದಲ್ಲಿ ನಿರ್ಜಲೀಕರಣ ಶುರುವಾಗುತ್ತದೆ. ಇದನ್ನು ನಿಯಮಿತವಾಗಿ ಹೊಗಲಾಡಿಸಲು ಮೊದಲು ನಾವೆಲ್ಲಾ ತೊಡುವ ಉಡುಪುಗಳು ಸ್ವಚ್ಛವಾಗಿ ಇರಬೇಕು. ಹತ್ತಿ ಬಟ್ಟೆ ಮತ್ತು ಆದಷ್ಟೂ ಹಗುರವಾದ ಬಟ್ಟೆಯನ್ನು ಆಯ್ಕೆ ಮಾಡಿ. ಹತ್ತಿ ಬಟ್ಟೆ ಹಾಕುವುದರಿಂದ ಅದು ಬೇವರನ್ನು ಹೀರಿಕೊಳ್ಳುತ್ತದೆ. ನಂತರ ವಾಶ್​ ಆಗಿರೋ ಬಟ್ಟೆಗಳನ್ನು ಹೆಚ್ಚಾಗಿ ಧರಿಸಬೇಕು. ಕಾಟನ್ ಬಟ್ಟೆಯಗಳನ್ನು ದಿನ ನಿತ್ಯ ಧರಿಸಿದರೇ ಅದು ಇನ್ನೂ ಉತ್ತಮ. ಮಹಿಳೆಯರೇ ಆಗಲಿ ಅಥವಾ  ಪುರುಷರೇ ಆಗಲಿ ಫುಲ್ ಸ್ಲೀವ್ ಹಾಕುವುದನ್ನು ನಿಲ್ಲಿಸಿ. ಆದಷ್ಟೂ ಹಾಫ್​ ಸ್ಲೀವ್​ನಂತಹ ಬಟ್ಟೆಗಳನ್ನು ಧರಿಸಿಕೊಳ್ಳಿ.

publive-image

ಇದನ್ನೂ ಓದಿ:ಎಚ್ಚರ.. ಪ್ರತಿದಿನ ಸ್ನಾನ ಮಾಡದೇ ನಿರ್ಲಕ್ಷ್ಯ ತೋರಿದ್ರೆ ಕಾಡುತ್ತೆ ಈ ಭಯಾನಕ ಕಾಯಿಲೆ; ಏನದು?

Advertisment

ನಮ್ಮ ದೇಹಕ್ಕೆ ಕಿರಿಕಿರಿ ಉಂಟು ಮಾಡುವ ಬಟ್ಟೆಗಳನ್ನು ಮಾತ್ರ ಹಾಕಬೇಡಿ. ಇದರಿಂದ ನಿಮ್ಮ ದಿನವು ಕಷ್ಟಕರವಾಗುತ್ತದೆ. ಕೆಲಸ ಮಾಡಲು ಆಗದೇ ಅಂತಹ ಬಟ್ಟೆಗಳ ಮೇಲೆ ಗಮನ ಹೋಗುತ್ತದೆ. ಹೀಗಾಗಿ ವೆಲ್ವೆಟ್​ನಂತಹ ಬಟ್ಟೆಗಳನ್ನು ಅವೈಡ್ ಮಾಡಿದರೆ ಓಳ್ಳೆಯದು. ಕಪ್ಪು ಬಣ್ಣ ಎಲ್ಲರಿಗೂ ಚೆನ್ನಾಗಿ ಕಾಣಿಸುತ್ತದೆ. ಆದರೆ ಅದೇ ಕಪ್ಪು ಬಣ್ಣ ಬೇಸಿಗೆ ಕಾಲದಲ್ಲಿ ಅಪಾಯಕರ. ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಕಪ್ಪು ಬಣ್ಣದ ಬಟ್ಟೆ ಹಾಕಿದರೇ ನಿಮಗೆಲ್ಲಾ ಅಪಾಯ ಕಟ್ಟಿಟ್ಟ ಬಿತ್ತಿ. ಕಪ್ಪು ದೇಹಕ್ಕೆ ಇನ್ನೂ ಶಾಖ ಕೊಡುತ್ತದೆ. ಬಿಸಿಲಿಗೆ ಹೋಗುತ್ತಿದ್ದಂತೆ ನಮ್ಮ ದೇಹ ಅತಿಯಾಗಿ ಹಿಟ್​ ಆಗಲು ಶುರು ಮಾಡಿಬಿಡುತ್ತೆ. ಹೀಗಾಗಿ ಕಪ್ಪ ಬಣ್ಣದ ಬದಲು ಬಿಳಿ, ಕಂದು, ಗುಲಾಬಿ ಬಣ್ಣದ ಬಟ್ಟೆ ಧರಿಸಿದರೇ ಇನ್ನೂ ಉತ್ತಮ.

ವಿಶೇಷ ವರದಿ: ವೀಣಾ ಗಂಗಾಣಿ ಡಿಜಿಟಲ್​ ಡೆಸ್ಕ್​ ನ್ಯೂಸ್​ಫಸ್ಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment