ಹೋಳಿ ಸಂಭ್ರಮಕ್ಕೆ ಬಣ್ಣ ಯಾವುದಿದ್ದರೆ ಚೆಂದ.. ಪೋಷಕರು ಮಕ್ಕಳಿಗೆ ಕೊಡಿಸಬಹುದಾದ ಬಣ್ಣಗಳ ಪಟ್ಟಿ..!

author-image
Ganesh
Updated On
ಹೋಳಿ ಸಂಭ್ರಮಕ್ಕೆ ಬಣ್ಣ ಯಾವುದಿದ್ದರೆ ಚೆಂದ.. ಪೋಷಕರು ಮಕ್ಕಳಿಗೆ ಕೊಡಿಸಬಹುದಾದ ಬಣ್ಣಗಳ ಪಟ್ಟಿ..!
Advertisment
  • ಹೋಳಿ ಕೇವಲ ಬಣ್ಣಗಳ ಹಬ್ಬವಲ್ಲ.. ಇನ್ನೇನು?
  • ಬಣ್ಣ ಖರೀದಿಸಬೇಕಾದ ನಿಮಗೆ ಏನು ನೆನಪಿರಬೇಕು?
  • ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಬಣ್ಣಗಳು ಒಳ್ಳೇದಲ್ಲ

ಹೋಳಿ ಕೇವಲ ಬಣ್ಣಗಳ ಹಬ್ಬವಲ್ಲ.. ಅದು ಸಂತೋಷ, ಏಕತೆ ಮತ್ತು ಪ್ರೀತಿಯ ಸಂಕೇತವೂ ಹೌದು! ಬದಲಾಗ್ತಿರುವ ಕಾಲದೊಂದಿಗೆ ಬಣ್ಣಗಳ ಶುದ್ಧತೆ ಮತ್ತು ಪರಿಸರದ ಪ್ರಭಾವದ ಬಗ್ಗೆಯೂ ಅರಿವು ಹೆಚ್ಚಾಗಿದೆ. ಇಂದು ಅನೇಕ ಕಂಪನಿಗಳು ಸುರಕ್ಷಿತ ಮತ್ತು ನೈಸರ್ಗಿಕ ಬಣ್ಣಗಳನ್ನು ಉತ್ಪಾದಿಸುತ್ತಿವೆ. ಇದರಿಂದ ಜನ ಈ ಹಬ್ಬವನ್ನು ಯಾವುದೇ ಚಿಂತೆಯಿಲ್ಲದೆ ಸೆಲೆಬ್ರೆಟ್ ಮಾಡಬಹುದು.

ಹೋಳಿ ಬಣ್ಣಗಳ ಮಹತ್ವ..

ಹೋಳಿ ಬಣ್ಣಗಳು ಕೇವಲ ಬಣ್ಣದ ಪುಡಿಗಳಲ್ಲ.. ಅವು ಪ್ರೀತಿ, ಸಂತೋಷ ಮತ್ತು ಸಕಾರಾತ್ಮಕತೆಯ ಸಂಕೇತ. ಇತ್ತೀಚೆಗಿನ ವರ್ಷಗಳಲ್ಲಿ ಸುರಕ್ಷತೆ ಮತ್ತು ಪರಿಸರ ಕುರಿತ ಜಾಗೃತೆಯಿಂದಾಗಿ ಉತ್ತಮ ಗುಣಮಟ್ಟದ ಹೋಳಿ ಬಣ್ಣಗಳಿಗೆ ಬೇಡಿಕೆ ಇದೆ. ಕೆಲವು ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುತ್ತದೆ. ಅದು ಚರ್ಮದ ಅಲರ್ಜಿಗಳು, ಕಣ್ಣಿನ ಕಿರಿಕಿರಿ ಮತ್ತು ಪರಿಸರಕ್ಕೆ ಹಾನಿಯನ್ನುಂಟುಮಾಡಬಹುದು.

ಇದನ್ನೂ ಓದಿ: ನಿತ್ಯ ವ್ಯಾಯಾಮ ಏಕೆ ಮಾಡಬೇಕು.. ಇದರಿಂದ ದೇಹದಲ್ಲಿ ಆಗೋ ಬದಲಾವಣೆಗಳು ಏನು?

publive-image

ಭಾರತದ ಪ್ರಮುಖ ಹೋಳಿ ಬಣ್ಣ ತಯಾರಿಕಾ ಕಂಪನಿಗಳು

  • ಕಾಕ್ ಕಲರ್ಸ್ (Cock Brand Holi Colours & Gulal): ಈ ಕಂಪನಿ ತಯಾರಿಸುವ ಬಣ್ಣವು ಚರ್ಮ ಸುರಕ್ಷಿತ ಮತ್ತು ಪರಿಸರ ಸ್ನೇಹಿಗೆ ಹೆಸರುವಾಸಿ. ಈ ಕಂಪನಿಯು ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಹೂವಿನ ದಳಗಳು, ಅರಿಶಿನ ಮತ್ತು ಗಿಡಮೂಲಿಕೆಗಳ ಸಾರಗಳಿಂದ ನೈಸರ್ಗಿಕವಾಗಿ ಬಣ್ಣ ತಯಾರಿಸುತ್ತಿದೆ.
  • ಅವನಿ ಅರ್ಥ್‌ಕ್ರಾಫ್ಟ್ (Avani Earthcraft): ಈ ಸಂಸ್ಥೆ ಕೂಡ ಸಾವಯವ ಹೋಳಿ ಬಣ್ಣಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದೆ. ಇವರು ಅರಿಶಿನ, ಅಕ್ಕಿ ಪುಡಿ, ಹಿಮಾಲಯನ್ ಇಂಡಿಗೊ ಸೇರಿದಂತೆ ಮುಂತಾದ ನೈಸರ್ಗಿಕ ಪದಾರ್ಥ ಬಳಸಿ ಹೋಳಿ ಬಣ್ಣ ತಯಾರಿಸುತ್ತಾರೆ.
  • ಹರ್ಬಲ್ ಗುಲಾಲ್ (Herbal Gulal): ಈ ಕಂಪನಿಯು ನೈಸರ್ಗಿಕ ಬಣ್ಣಗಳಿಗೆ ಹೆಸರುವಾಸಿ. ಪರಿಸರ ಸ್ನೇಹಿ ಉತ್ಪನ್ನಗಳ ಬಗ್ಗೆ ಹೆಮ್ಮೆಪಡುತ್ತದೆ.
  • ಚೋಕ್ಸಿ ಕೆಮಿಕಲ್ಸ್ (Choksey chemicals)
  • ನೇಚಾ ನ್ಯಾಚುರಲ್ಸ್ (Nacha naturals): ಗಿಡಮೂಲಿಕೆ ಮತ್ತು ಪರಿಸರ ಸ್ನೇಹಿ ಬಣ್ಣಗಳ ತಯಾರಿಕೆ ಹೆಸರುವಾಸಿ.
  •  ರಂಗೋಲಿ ಹರ್ಬಲ್
  •  ಕೃಷ್ಣ ಕೆಮಿಕಲ್ಸ್

ಹೋಳಿ ಬಣ್ಣ ಖರೀದಿಸುವಾಗ ಎಚ್ಚರ..!

  • ನೈಸರ್ಗಿಕ ಮತ್ತು ಸಾವಯವ ಬಣ್ಣಗಳಿಗೆ ಆದ್ಯತೆ ನೀಡಿ
  •  ಪ್ಯಾಕೇಜಿಂಗ್‌ನಲ್ಲಿರುವ ಪದಾರ್ಥಗಳನ್ನು ಪರಿಶೀಲಿಸಿ
  •  ಮಕ್ಕಳ ಸುರಕ್ಷಿತ ಆಯ್ಕೆಗಳನ್ನು ಆರಿಸಿ
  •  ಪರಿಸರ ಸ್ನೇಹಿ ಉತ್ಪನ್ನಗಳನ್ನು ಆರಿಸಿ

ಇದನ್ನೂ ಓದಿ: ಮತ್ತೆ ವಿಘ್ನ.. ಕೊನೆ ಸೆಕೆಂಡ್​ನಲ್ಲಿ ಕೈಕೊಟ್ಟ ಮಷಿನ್; ಸುನಿತಾ ವಿಲಿಯಮ್ಸ್​​ ಭೂಮಿಗೆ ಬರೋದು ಮತ್ತೆ ವಿಳಂಬ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment