BBK11: ಧನರಾಜ್‌ಗೆ ಹೊಡೀತು ಜಾಕ್‌ಪಾಟ್‌.. ವಾರದ ಮಧ್ಯೆ ಎಲಿಮಿನೇಟ್ ಯಾರ್ ಆಗ್ತಾರೆ?

author-image
Veena Gangani
Updated On
BBK11: ಧನರಾಜ್‌ಗೆ ಹೊಡೀತು ಜಾಕ್‌ಪಾಟ್‌.. ವಾರದ ಮಧ್ಯೆ ಎಲಿಮಿನೇಟ್ ಯಾರ್ ಆಗ್ತಾರೆ?
Advertisment
  • ಬಿಗ್​ಬಾಸ್ ಕೊಟ್ಟ ಕೊನೆಯ ಟಾಸ್ಕ್​ನಲ್ಲಿ ಧನರಾಜ್​ ವಿನ್ನರ್
  • ಈ ವಾರ ವಿಡ್ ವೀಕ್​ನಲ್ಲಿ ಯಾವ ಸ್ಪರ್ಧಿ ಆಚೆಗೆ ಹೋಗ್ತಾರೆ?
  • 6 ಸ್ಪರ್ಧಿಗಳ ಎದೆಯಲ್ಲಿ ಶುರುವಾಗಿದೆ ಎಲಿಮಿನೇಷನ್ ನಡುಕ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಇನ್ನೇನೂ ಎರಡು ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ​ಹೀಗಾಗಿ 7 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿತ್ತು.

ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮ; ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ವಿಸ್ಮಯ ಕಣ್ತುಂಬಿಕೊಳ್ಳಲು ಭಕ್ತರು ಕಾತರ

publive-image

ನಾಮಿನೇಷನ್​ನಿಂದ ಪಾರಾಗಲು ಬಿಗ್​ಬಾಸ್​ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್​ ನೀಡುತ್ತಿದ್ದರು. ಬಿಗ್​ಬಾಸ್ ಕೊಟ್ಟ ಟಾಸ್ಕ್​ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್​ನಿಂದ ಪಾರಾಗಲಿದ್ದಾರೆ ಎಂದು ಘೋಷಿಸಿದ್ದರು.

ಇದನ್ನೂ ಓದಿ: ಚಹಲ್​ -ಧನಶ್ರೀ ಪ್ರೇಮ ಕಹಾನಿ ಹೇಳುತ್ತೆ ಈ ಜೆರ್ಸಿ.. ಪ್ರೀತಿಯ ಮಡದಿನ ಮರೆಯದ ಕ್ರಿಕೆಟಿಗ

ಅಚ್ಚರಿ ಎಂಬಂತೆ ಬಿಗ್​ಬಾಸ್​ ಕೊಟ್ಟ ಕೊನೆಯ ಟಾಸ್ಕ್​ನಲ್ಲಿ ಗೆದ್ದು ಬಿಗಿದ್ದಾರೆ. ಈ ವಾರ ಮಿಡ್‌ ವೀಕ್ ಎಲಿಮಿನೇಷನ್ ನಡೆಯಲಿದೆ. ಹೀಗಾಗಿ ಸ್ಪರ್ಧಿಗಳು ಬಿಗ್​ಬಾಸ್​ ಕೊಡುವ ಟಾಸ್ಕ್​ಗಳನ್ನು ಕಷ್ಟಪಟ್ಟು ಆಡುತ್ತಿದ್ದರು. ನಿನ್ನೆಯ ಸಂಚಿಕೆಯಲ್ಲಿ ಧನರಾಜ್​ ಬಿಗ್​ಬಾಸ್​ ಕೊಟ್ಟ ಟಾಸ್ಕ್​ವೊಂದರಲ್ಲಿ ವಿನ್​ ಆಗಿದ್ದಾರೆ.

publive-image

ಕೊನೆಯ ಟಾಸ್ಕ್​ನಲ್ಲೂ ಗೆದ್ದುಕೊಂಡ ಧನರಾಜ್​ಗೆ ಬಿಗ್​ಬಾಸ್​ 100 ಅಂಕಗಳನ್ನು ಕೊಟ್ಟಿದ್ದರು. ಅದರಲ್ಲೂ ಕೊನೆಗೆ ಧನರಾಜ್​ ಪ್ರತಿ ಸ್ಪರ್ಧಿಯ ಅಂಕವನ್ನು ಪಡೆದುಕೊಳ್ಳಬೇಕು ಅಂತ ಹೇಳಿದ್ದರು. ಆಗ ಧನರಾಜ್​ ಭವ್ಯಾ ಗೌಡ ಅಂಕವನ್ನು ಪಡೆದುಕೊಂಡಿದ್ದರು. ಇದಾದ ಬೆನ್ನಲ್ಲೇ ಬಿಗ್​ಬಾಸ್​ ಈ ವಾರದ ಮಿಡ್​ ವೀಕ್ ಎಲಿಮಿನೇಷನ್​ನಿಂದ ಧನರಾಜ್ ಸೇಫ್​ ಆಗಿದ್ದೀರಿ ಎಂದು ಘೋಷಣೆ ಮಾಡಿದ್ದಾರೆ.

ಮಿಡ್​​ ವೀಕ್​ ನಾಮಿನೇಷನ್​ ಸೀಟ್​ನಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್​, ಮಂಜಣ್ಣ, ರಜತ್​, ಮೋಕ್ಷಿತಾ ಹಾಗೂ ಗೌತಮಿ ಇದ್ದಾರೆ. ಸ್ಟ್ರಾಂಗ್ 6 ಸ್ಪರ್ಧಿಗಳು ಯಾರು ಬಿಗ್​ಬಾಸ್​ ಮನೆಯಿಂದ ಮಿಡ್​ ವೀಕ್​ ಎಲಿಮಿನೇಟ್​ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment