ವಿಶ್ವದಲ್ಲಿಯೇ ಅತಿಹೆಚ್ಚು ನದಿಗಳನ್ನು ಹೊಂದಿರುವ ದೇಶಗಳು ಯಾವುವು? ಭಾರತದಲ್ಲಿ ಎಷ್ಟಿವೆ?

author-image
Gopal Kulkarni
Updated On
ವಿಶ್ವದಲ್ಲಿಯೇ ಅತಿಹೆಚ್ಚು ನದಿಗಳನ್ನು ಹೊಂದಿರುವ ದೇಶಗಳು ಯಾವುವು? ಭಾರತದಲ್ಲಿ ಎಷ್ಟಿವೆ?
Advertisment
  • ವಿಶ್ವದಲ್ಲಿಯೇ ಅತಿಹೆಚ್ಚು ನದಿಗಳು ಯಾವ ದೇಶದಲ್ಲಿ ಹರಿಯುತ್ತವೆ?
  • ಭಾರತದಲ್ಲಿ ಹರಿಯುವ ಪ್ರಮುಖ ನದಿಗಳ ಸಂಖ್ಯೆ ಎಷ್ಟು ಅಂತ ಗೊತ್ತಾ?
  • ಯುಎಸ್​ನಲ್ಲಿ ಇರುವ ನದಿಗಳ ಸಂಖ್ಯೆ ಕೇಳಿದ್ರೆ ನೀವು ಬೆಕ್ಕಸ ಬೆರಗಾಗ್ತೀರಿ!

ನದಿಗಳು ಅಂದ್ರೆ ಆ ದೇಶದ ಸಂಸ್ಕೃತಿಯ ಒಂದು ಮೂಲ. ನಮ್ಮ ದೇಶಗಳ ಪರಂಪರೆಯನ್ನು ಶತಮಾನಗಳಿಂದಲೂ ಹೇಳಿಕೊಂಡು ಬರುವ ಗುರುತುಗಳು ಪ್ರತಿ ದೇಶದ ನದಿಗಳು. ಪ್ರತಿಯೊಂದು ಪ್ರಾಚೀನ ನಾಗರಿಕತೆಯ ತೊಟ್ಟಿಲು ತೂಗಲು ಆರಂಭವಾಗಿದ್ದೇ ನದಿಯ ತೀರದಲ್ಲಿ. ಹೀಗಾಗಿ ನದಿಯೂ ತನ್ನ ದೇಶದ ಮೂಲತನದ ಗುರುತಾಗಿ ನಿಂತುಕೊಳ್ಳುತ್ತದೆ. ಹಾಗಿದ್ರೆ ವಿಶ್ವದಲ್ಲಿಯೇ ಅತಿಹೆಚ್ಚು ನದಿಯನ್ನು ಹೊಂದಿರುವ ದೇಶಗಳು ಯಾವುವು ಎಂದು ನೋಡುತ್ತಾ ಹೋಗುವುದಾದ್ರೆ. ವಿಶ್ವದ ಹಲವಾರು ದೇಶಗಳು ಸಾವಿರಾರು ನದಿಗಳನ್ನು ಹೊಂದಿದ ನಿದರ್ಶನವಿದೆ. ಆದ್ರೆ ಆ ಒಂದು ದೇಶದಲ್ಲಿ ಹರಿಯುವ ನದಿಗಳ ಸಂಖ್ಯೆ ಮಾತ್ರ ಬರೋಬ್ಬರಿ 1 ಲಕ್ಷ. ಅತಿಹೆಚ್ಚು ನದಿಗಳನ್ನು ಹೊಂದಿರುವ ಉಳಿದ ದೇಶಗಳು ಯಾವುವು. ಭಾರತದಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು ಎಂಬುದರ ಬಗ್ಗೆ ನಾವು ನಿಮಗೆ ಇಲ್ಲಿ ಮಾಹಿತಿ ಕೊಡ್ತೀವಿ.

publive-image

ರಷ್ಯಾ: ರಷ್ಯಾವನ್ನು ನದಿಗಳ ತವರು ಎಂದೇ ಕರೆಯಲಾಗುತ್ತದೆ. ಈಗಾಗಲೇ ಹೇಳಿದಂತೆ 1 ಲಕ್ಷ ನದಿಗಳು ಹರಿಯುವ ದೇಶ ಅಂದ್ರೆ ಅದು ರಷ್ಯಾ. ಈ ದೇಶದ ತುಂಬಾ ವ್ಯಾಪಕವಾದ ನೀರಿನ ಮೂಲಗಳಿವೆ. ಸುಮಾರು ಒಂದು ಲಕ್ಷ ನದಿಗಳು ಈ ದೇಶದ ತುಂಬಾ ಹರಿಯುತ್ತವೆ. ವೋಲ್ಗಾ ಮತ್ತು ಲೆನಾ ಎಂಬ ಬೃಹತ್​ ನದಿಗಳನ್ನು ರಷ್ಯಾ ಹೊಂದಿದೆ.

publive-image

ಬಾಂಗ್ಲಾದೇಶ: ಭಾರತದ ನೆರೆಯ ರಾಷ್ಟ್ರವಾದ ಬಂಗ್ಲಾದೇಶಲ್ಲಿ ಒಟ್ಟು 700 ನದಿಗಳು ಹರಿಯುತ್ತವೆ . ಇದನ್ನು ನದಿಗಳ ನೆಲವೆಂದೇ ಗುರುತಿಸಲಾಗುತ್ತದೆ. ಅವುಗಳಲ್ಲಿ ಹೆಚ್ಚು ಭಾರತದಿಂದ ಹರಿದು ಬಾಂಗ್ಲಾಗೆ ಸೇರುವ ನದಿಗಳು ಇವೆ. ಬಾಂಗ್ಲಾದೇಶದಲ್ಲಿ ಅತ್ಯಂತ ಪ್ರಮುಖ ನದಿಗಳು ಅಂದ್ರೆ ಪದ್ಮಾನದಿ ಮತ್ತು ಜಮುನಾ ನದಿ.

publive-image

ಭಾರತ: ಭಾರತದಲ್ಲಿ ನದಿಗಳಿಗೆ ವಿಶೇಷ ಸ್ಥಾನಮಾನವನ್ನೇ ನೀಡಲಾಗುತ್ತದೆ. ಇಲ್ಲಿ ಹರಿಯವ ಪ್ರತಿ ನದಿಯ ಹನಿಹನಿಯೂ ಕೂಡ ಪವಿತ್ರವೆಂದೇ ಭಾವಿಸಲಾಗುತ್ತದೆ. ವೇದಗಳಲ್ಲಿಯೂ ಕೂಡ ಭಾರತದಲ್ಲಿ ಹರಿಯುವ ಪ್ರಮುಖ ನದಿಗಳ ಉಲ್ಲೇಖವಿದೆ. ಭಾರತ ದೇಶದಲ್ಲಿ ಒಟ್ಟು ಸುಮಾರು 400 ಪ್ರಮುಖ ಹಾಗೂ ದೊಡ್ಡ ನದಿಗಳು ಇವೆ. ಗಂಗಾ, ಯಮುನಾ, ಕಾವೇರಿ, ಬ್ರಹ್ಮಪುತ್ರಾ ಹೀಗೆ ದೊಡ್ಡ ದೊಡ್ಡ ನದಿಗಳನ್ನು ಭಾರತ ಹೊಂದಿದೆ.

publive-image

ಯುಎಸ್​: ವಿಶ್ವದಲ್ಲಿಯೇ ಅತಿಹೆಚ್ಚು ನದಿಗಳನ್ನು ಹೊಂದಿರುವ ದೇಶ ಅಂದ್ರೆ ಅದು ಯುನೈಟೆಡ್ ಸ್ಟೇಟ್​. ಇಲ್ಲಿ ಹರಿಯುವ ನದಿಗಳನ್ನು ಬೆರಳೆಣಿಕೆಯಲ್ಲಿ ಎಣಿಸಲು ಸಾಧ್ಯವಿಲ್ಲ. ಯುನೈಟೆಡ್​ ಸ್ಟೇಟ್​ನಲ್ಲಿ ಹರಿಯುವ ನದಿಗಳ ಸಂಖ್ಯೆ ಬರೋಬ್ಬರಿ 2 ಲಕ್ಷ 50 ಸಾವಿರ ಅಂದ್ರೆ ನೀವು ನಂಬಲೇಬೇಕು. ಮಿಸ್ಸಿಸ್ಸಿಪ್ಪಿ ಮತ್ತು ಮಿಸೌರಿ ನದಿಗಳು ಅಮೆರಿಕಾದಲ್ಲಿ ಹರಿಯುವ ಬೃಹತ್ ನದಿಗಳು

publive-image

ಕೆನಡಾ: ಕೆನಡಾ ಕೂಡ ನದಿಗಳ ತವರು. ಇಲ್ಲಿ ಒಟ್ಟು ಸುಮಾರು 8500 ನದಿಗಳು ಹರಿಯುತ್ತವೆ. ಕೆನಡಾದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ನದಿಗಳು ಅಂದ್ರೆ ಮ್ಯಾಕೆಂಜಿ, ಯುಕೋನ್​ ಮತ್ತು ಸ್ಟಿ ಲಾರೆನ್ಸ್​.

publive-image

ಇಂಡೊನೇಷಿಯಾ: ಇಂಡೊನೇಷಿಯಾದಲ್ಲಿ ಹರಿಯುವ ನದಿಗಳ ಸಂಖ್ಯೆ ಅಪಾರ. ಸುಮಾರು 5 ಸಾವಿರಕ್ಕೂ ಹೆಚ್ಚು ನದಿಗಳನ್ನು ಇಂಡೋನೇಷಿಯಾ ಹೊಂದಿದೆ. ಅದರಲ್ಲಿ ಕಪೌಸಾ ಮಹಾಕಮ್ ಎಂಬ ಪ್ರಮುಖ ನದಿಗಳು ಇಂಡೋನೇಷಿಯಾದಲ್ಲಿ ಹರಿಯುವ ಬಹುದೊಡ್ಡ ನದಿಗಳು.

publive-image

ಚೀನಾ: ಚೀನಾದಲ್ಲಿ ಭಾರತಕ್ಕಿಂತ ಅತಿಹೆಚ್ಚು ನದಿಗಳು ಇವೆ. ಚೀನಾ ಒಟ್ಟು 1500 ನದಿಗಳನ್ನು ಹೊಂದಿದೆ. ಯಾಂಗ್ಟ್ಜಿ ಹಾಗೂ ಯೆಲ್ಲೊ ನದಿಗಳು ಚೀನಾದಲ್ಲಿ ಹರಿಯುವ ಬಹುದೊಡ್ಡ ನದಿಗಳು ಎಂದು ಗುರುತಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment