ವಿಶ್ವದಲ್ಲೇ ಅತಿ ಹೆಚ್ಚು ಸ್ನಾನ ಮಾಡುವವರ ದೇಶ ಯಾವುದು? ದಿನಕ್ಕೆ ಎಷ್ಟು ಬಾರಿ ಗೊತ್ತಾ?

author-image
Gopal Kulkarni
Updated On
ವಿಶ್ವದಲ್ಲೇ ಅತಿ ಹೆಚ್ಚು ಸ್ನಾನ ಮಾಡುವವರ ದೇಶ ಯಾವುದು? ದಿನಕ್ಕೆ ಎಷ್ಟು ಬಾರಿ ಗೊತ್ತಾ?
Advertisment
  • ನಿತ್ಯ ಅತಿಹೆಚ್ಚು ಸ್ನಾನ ಮಾಡುವವರು ಯಾವ ದೇಶದ ಜನರು ಗೊತ್ತಾ?
  • ಈ ದೇಶದವರು ವಾರಕ್ಕೆ ಕನಿಷ್ಠ ಎರಡು ಬಾರಿ ಶವರ್ ಸ್ನಾನ ಮಾಡುತ್ತಾರೆ
  • ಈ ರೀತಿಯಾಗಿ ಅವರು ನಿತ್ಯ 2 ಬಾರಿ ಸ್ನಾನ ಮಾಡಲು ಕಾರಣವೇನು?

ದೇಹವನ್ನು ಪರಿಶುದ್ಧವಾಗಿ ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ನಿತ್ಯದ ಅಗತ್ಯಗಳಲ್ಲಿ ಒಂದು. ಬಹುತೇಕ ಜನರ ದಿನಗಳು ಆರಂಭವಾಗಿವುದೇ ಸ್ನಾನದಿಂದ. ಆಯಾಸದಿಂದ ಹಿಡಿದು ಚಿಕ್ಕಪುಟ್ಟ ಮೈಕೈ ನೋವುನ್ನು ಕೂಡ ಒಂದು ಶೇವರ್ ಬಾತ್ ಕಡಿಮೆ ಮಾಡಿಬಿಡುತ್ತದೆ. ಅದರಲ್ಲೂ ಲಾಂಗ್ ಜರ್ನಿ ಮಾಡಿ ಬಂದಾಗ ವಿಪರೀತ ಬಿಸಿಲಲ್ಲಿ ತಿರುಗಾಡಿ ಬಂದಾಗ ಮೈ ಮೇಲೆ ಒಂದಿಷ್ಟು ನೀರು ಬಿದ್ದರೆ ಸಾಕು ಇಡೀ ದೇಹವೇ ಹಗುರ.. ಹಗುರ.. ಮನಸ್ಸು ಪ್ರಫುಲ್. ದಿನಕ್ಕೆ ಒಂದು ಬಾರಿ ಸ್ನಾನ ಮಾಡುವುದ ಕಾಮನ್ ಆದ್ರೆ ಜಗತ್ತಿನಲ್ಲಿ ಅತಿಹೆಚ್ಚು ಸ್ನಾನ ಮಾಡುವ ಜನರು ಬ್ರೆಜಿಲ್​ನಲ್ಲಿ ಇದ್ದಾರೆ.

ಇದನ್ನೂ ಓದಿ:ನಾನು ನಿನ್ನೆಯಷ್ಟೇ ಚೀನಾದಿಂದ ವಾಪಸ್ ಬಂದೆ.. ವೈರಸ್ ಬಗ್ಗೆ ಮಂಡ್ಯ ಶಾಸಕ ರವಿಗಣಿಗ ಹೇಳಿದ್ದೇನು?

ಕಾಂತರ್ ವರ್ಲ್ಡ್ ಪ್ಯಾನೆಲ್ ಎಂಬ ಸಂಸ್ಥೆ ಸಂಶೋಧನೆ ಹೇಳುವ ಪ್ರಕಾರ ಬ್ರೆಜಿಲ್​ನಲ್ಲಿ ವಾಸಿಸುವ ಜನರು ಸರಾಸರಿ ವಾರಕ್ಕೆ 14 ಬಾರಿ ಸ್ನಾನವನ್ನು ಮಾಡುತ್ತಾರಂತೆ. ಜಾಗತಿಕವಾಗಿ ಅಂದಾಜು ಮಾಡಿದರೆ ಜನರು ವಾರಕ್ಕೆ 5 ಬಾರಿ ಸ್ನಾನ ಮಾಡುತ್ತಾರೆ ಎಂದು ಇದೆ. ಯುಕೆನಲ್ಲಿ ಮಾತ್ರ ವಾರಕ್ಕೆ 6 ಬಾರಿ ಸ್ನಾನ ಮಾಡುವ ಅಂದಾಜು ಇದೆ. ಆದ್ರೆ ಬ್ರೆಜಿಲಿಗರು ಈ ವಿಷಯದಲ್ಲಿ ತುಂಬಾ ಶುಚಿಯಾಗಿ ಹಾಗೂ ಸ್ನಾನದ ವಿಷಯದಲ್ಲಿ ತುಂಬಾ ಪರ್ಟಿಕ್ಯೂಲರ್​ ಆಗಿ ಇದ್ದಾರೆ. ಅದಕ್ಕೆ ಕಾರಣ ಆ ದೇಶದ ಹವಾಮಾನ

ಬ್ರೆಜಿಲ್​ನಲ್ಲಿ ವಾರ್ಷಿಕವಾಗಿ ಕನಿಷ್ಠವೆಂದರೂ 24.6 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ. ಈ ಒಂದು ಹೀಟ್​ನಿಂದ ಬಚಾವಾಗಲು ಅಲ್ಲಿಯ ಜನ ನಿತ್ಯೆರಡು ಬಾರಿ ಸ್ನಾನವನ್ನು ಮಾಡುತ್ತಾರೆ. ಇದಕ್ಕೆ ವಿರುದ್ಧವಾಗಿ ಬ್ರಿಟನ್​ನಲ್ಲಿ ವಾರ್ಷಿಕ ತಾಪಮಾನ ಕನಿಷ್ಠ 9.3ರಷ್ಟಿರುತ್ತದೆ ಹೀಗಾಗಿ ಅಲ್ಲಿ ಸ್ನಾನಕ್ಕೆ ಅಷ್ಟು ಮಹತ್ವ ಕೊಡುವುದಿಲ್ಲ.

ಇದನ್ನೂ ಓದಿ:ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಪತ್ನಿಗೆ ಮೋದಿ ದುಬಾರಿ ಗಿಫ್ಟ್ ನೀಡಿದ್ದು ಸರಿಯೇ? ಏನಿದು ಹೊಸ ವಿವಾದ?

ಸಂಶೋಧನೆಯೊಂದರ ಪ್ರಕಾರ ಬ್ರಜಿಲ್​ನಲ್ಲಿ ಸುಮಾರು 99 ರಷ್ಟು ಜನರು ವಾರದಲ್ಲಿ 14 ಬಾರಿ ಶವರ್ ಬಾತ್ ಮಾಡುತ್ತಾರಂತೆ. ಇದು ಅಲ್ಲಿ ಕೇವಲ ಶುಚಿತ್ವದ ಒಂದು ಗುರುತಾಗಿಲ್ಲ. ಅದೊಂದು ಪರಂಪರೆಯಂತೆ ನಡೆದುಕೊಂಡು ಬಂದಿದೆ. ಒಬ್ಬ ವ್ಯಕ್ತಿಯು ನಿತ್ಯ ಕನಿಷ್ಠವೆಂದರೂ ಹತ್ತು ನಿಮಿಷಗಳ ಕಾಲ ಶವರ್ ಬಾತ್ ಮಾಡುತ್ತಾಂತೆ ಬ್ರೆಜಿಲ್​​ನಲ್ಲಿ. ಅಮೆರಿಕಾದವರು 9.9 ನಿಮಿಷ ಹಾಗೂ ಬ್ರಿಟನ್​ನವರು 9.6 ನಿಮಿಷಗಳ ಕಾಲ ಶವರ್ ಬಾತ್ ಮಾಡುತ್ತಾರೆ. ಪ್ರತಿ ದೇಶದ ಚಟುವಟಿಕೆ ಆಹಾರ ಹಾಗೂ ಜೀವನಶೈಲಿಯನ್ನುಆಯಾ ದೇಶದ ವಾತಾವರಣವೇ ನಿರ್ಮಿಸುತ್ತದೆ. ಹೀಗಾಗಿ ಬ್ರೆಜಿಲ್​ನಲ್ಲಿರುವ ತಾಪಮಾನ ಅವರನ್ನು ನಿತ್ಯ ಎರಡೆರಡು ಬಾರಿ ಸ್ನಾನ ಮಾಡಲು ಪ್ರೇರೇಪಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment