/newsfirstlive-kannada/media/post_attachments/wp-content/uploads/2025/02/SHORTEST-NATIONAL-ANTHEM.jpg)
ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜ ಪ್ರತಿಯೊಂದು ದೇಶದ ಅನನ್ಯ ಗುರುತಾಗಿ ಮತ್ತು ಪರಂಪರೆಯ ಗುರುತಾಗಿ ಕಾಣಿಸಿಕೊಳ್ಳುತ್ತದೆ. ಜಗತ್ತಿನ ಪ್ರತಿಯೊಂದು ರಾಷ್ಟ್ರವೂ ತನ್ನ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜದ ಎದುರು ತನ್ನ ತಲೆಯನ್ನು ಭಾಗಿಸುತ್ತವೆ. ಇದು ನನ್ನ ನೆಲ, ನನ್ನ ಕರ್ಮಭೂಮಿ, ಇದಕ್ಕಾಗಿಗೆಯೇ ನನ್ನ ಬದುಕು ಸಮರ್ಪಣೆ ಎಂಬ ಭಾವ ಬಿತ್ತುವಲ್ಲಿ ಈ ರಾಷ್ಟ್ರಗೀತೆಗಳು ಹಾಗೂ ರಾಷ್ಟ್ರಧ್ವಜಗಳು ಪ್ರಮುಖ ಪಾತ್ರವಹಿಸುತ್ತವೆ. ಪ್ರತಿಯೊಂದು ರಾಷ್ಟ್ರಗೀತೆ, ರಾಷ್ಟ್ರಧ್ವಜ ತನ್ನ ದೇಶದ ಐತಿಹಾಸಿಕ ಸಾಂಸ್ಕೃತಿಕ ಗುರುತಾಗಿ ನಿಲ್ಲುತ್ತವೆ. ನೀವು ಅಮೆರಿಕಾದ ಧ್ವಜವನ್ನು ನೋಡಿ ಅದರಲ್ಲಿ ಒಟ್ಟು 50 ನಕ್ಷತ್ರಗಳು ಕಾಣಸಿಗುತ್ತವೆ. ಅಂದ್ರೆ ಅವು ಯುಎಸ್ನ 50 ರಾಜ್ಯಗಳನ್ನು ಪ್ರತಿನಿಧಿಸುತ್ತವೆ.
ಈ ರಾಷ್ಟ್ರಗೀತೆಯ ವಿಚಾರಕ್ಕೆ ಬಂದರೆ ಭಾರತದಲ್ಲಿ ಈ ಬಗ್ಗೆ ಅನೇಕ ವಿವಾದಗಳಾಗಿವೆ. ರಾಷ್ಟ್ರಗೀತೆ ಕಡ್ಡಾಯವಾಗಿ ಸಿನಿಮಾ ಥಿಯೇಟರ್ಗಳಲ್ಲಿ ಪ್ರದರ್ಶನವಾಗಬೇಕು ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂಬ ಮನವಿಗಳು ಬಂದಾಗಲೆಲ್ಲಾ ದೇಶಭಕ್ತಿ ಪ್ರದರ್ಶನದ ವಸ್ತುವಲ್ಲ ಎಂಬ ಕ್ಯಾತೆಗಳನ್ನು ತೆಗೆದವರು ಇದ್ದಾರೆ. ಇದೆಲ್ಲದರಾಚೆ ನಾವು ಇವತ್ತು ನಿಮಗೆ ಹೇಳಲು ಹೊರಟಿರುವ ವಿಷಯ ಅಂದ್ರೆ ಜಗತ್ತಿನಲ್ಲಿ ಅತ್ಯಂತ ಚಿಕ್ಕದಾದ ರಾಷ್ಟ್ರ ಗೀತೆ ಹೊಂದಿರುವ ದೇಶ ಯಾವುದು ಅಂತ.
ಇದನ್ನೂ ಓದಿ:ಮದುವೆಯಲ್ಲಿ ದಾಖಲೆ ಬರೆದ ಭಾರತದ ಈ ಉದ್ಯಮಿ ಯಾರು? ಜಿನ್ಹಾ ತಂಗಿಯೊಂದಿಗೂ ಇತ್ತು ಪ್ರೇಮ ಪುರಾಣ..!
ಜಪಾನ್ ಸಾಮ್ರಾಜ್ಯ 1888 ರಿಂದ 1945ರವರೆಗೂ ಕಿಮಿಗಾಯೊವನ್ನು ತನ್ನ ರಾಷ್ಟ್ರಗೀತೆ ಎಂದು ಗುರತಿಸಿತ್ತು. ಎರಡನೇ ವಿಶ್ವಯುದ್ಧ ನಂತರ ಜಪಾನ್ ಶರಣಾಗತಿಗೊಂಡು ಜಪಾನ್ ತನ್ನನ್ನು ತಾನು ಹೊಸದಾಗಿ ಅಸ್ತಿತ್ವವಾಗಿ ಜಗತ್ತಿಗೆ ತೆರೆದುಕೊಂಡು ನಿಂತು. ಆಗಲೂ ಕೂಡ ಕಿಮಿಗಾಯೋ ಜಪಾನ್ನ ರಾಷ್ಟ್ರಗೀತೆಯಯಾಗಿಯೇ ಮುಂದುವರಿಯಿರತು 1999ರಲ್ಲಿ ಇದನ್ನು ಅಧಿಕೃತ ಕಾಯ್ದೆಯಡಿ ರಾಷ್ಟ್ರಗೀತೆ ಹಾಗೂ ತನ್ನ ದೇಶದ ರಾಷ್ಟ್ರಧ್ವಜವನ್ನು ಘೋಷಿಸಿತು ಜಪಾನ್ ಕಿಮಿಗಾಯೊನೇ ಜಪಾನ್ನ ರಾಷ್ಟ್ರಗೀತೆಯಾಗಿ ಮಂದುವರಿಯಿತು.
ಇದನ್ನೂ ಓದಿ: ಮಗನ ಸಾವಿನಲ್ಲೂ ಮಾನವೀಯತೆ ಮೆರೆದ ಯೋಧ.. 6 ಜನರ ಬದುಕಿಗೆ ಆಶಾಕಿರಣ
ಈ ಒಂದು ಗೀತೆಯನ್ನು ಅಕಿಮೊರಿ ಹಯಾಶಿ ಎಂಬುವವರು 1880ರಲ್ಲಿ ಬರೆದಿದ್ದರು, ಜರ್ಮನ್ ಸಂಗೀತಗಾರ ಫ್ರಂಜ್ ಎಕೆರ್ಟ್ ಎಂಬುವವರು ಸಂಗೀತ ಸಂಯೋಜನೆಗೊಳಿಸಿದ್ದರು. ಆಗಸ್ಟ್ 13, 1999ರಂದು ಕಿಮಿಗಾಯೊ ಜಪಾನ್ನ ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳಲಾಯ್ತು.
ಈ ಒಂದು ರಾಷ್ಟ್ರ ಗೀತೆ ಇರುವುದು ಕೇವಲ ಐದೇ ಐದು ಸಾಲಿನಲ್ಲಿ ಈ ನಿನ್ನ ನೆಲವನ್ನು ಸಾವಿರ ವರ್ಷ 8 ಸಾವಿರ ವರ್ಷದ ತಲೆಮಾರಿಗೂ ವಿಸ್ತರಿಸು ಎಂಬುವುದರೊಂದಿಗೆ ಆರಂಭವಾಗುವ ಈ ರಾಷ್ಟ್ರಗೀತೆ ಕೇವಲ ಐದು ಸಾಲಿನಲ್ಲಿ ಮುಗಿದು ಹೋಗುತ್ತದೆ. ಹೀಗಾಗಿ ಇದನ್ನು ಜಗತ್ತಿನ ಅತ್ಯಂತ ಪುಟ್ಟ ರಾಷ್ಟ್ರಗೀತೆ ಎಂದು ಕರೆಯಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ