/newsfirstlive-kannada/media/post_attachments/wp-content/uploads/2025/04/COPPER-MINING-2.jpg)
ಪ್ರತಿಯೊಂದು ದೇಶವು ಒಂದಲ್ಲ ಒಂದು ನೈಸರ್ಗಿಕ ಸಂಪನ್ಮೂಲಗಳನ್ನು ಅತಿಹೆಚ್ಚಾಗಿ ಹೊಂದಿರುವ ದೇಶವೆಂದು ಗುರುತಿಸಿಕೊಂಡಿದೆ. ಕೆಲವು ದೇಶಗಳು ಚಿನ್ನಕ್ಕೆ, ಇನ್ನೂ ಕೆಲವು ದೇಶಗಳ ಕಚ್ಚಾತೈಲಕ್ಕೆ, ವಜ್ರೋದ್ಯಮಕ್ಕೆ ಹೀಗೆ ಹಲವು ರೀತಿಯ ಶ್ರೀಮಂತ ಖನಿಜಗಳ ನಿಕ್ಷೇಪವನ್ನು ಹೊಂದಿರುವ ರಾಷ್ಟ್ರಗಳಾಗಿ ಗುರುತಿಸಿಕೊಂಡಿವೆ. ಅಂತಹ ದುಬಾರಿ ಲೋಹಗಳ ಸಾಲಿನಲ್ಲಿ ಬಂದು ನಿಲ್ಲುವ ಮತ್ತೊಂದು ಲೋಹ ಅಂದ್ರೆ ಅದು ತಾಮ್ರ. ತಾಮ್ರಕ್ಕೆ ಜಗತ್ತಿನಲ್ಲಿ ತುಂಬಾ ಬೇಡಿಕೆಯಿದೆ. ಎಲೆಕ್ಟ್ರಿಕಲ್ ವೈರ್ ತಯಾರಿಕೆಯಿಂದ ಹಿಡಿದು ಮಷಿನ್ ಮತ್ತು ಕಟ್ಟಡಗಳ ನಿರ್ಮಾಣದಲ್ಲಿಯೂ ಕೂಡ ತಾಮ್ರದ ಅವಶ್ಯತೆ ಇದೆ. ಇಂತಹ ಲೋಹವನ್ನು ಅತಿಹೆಚ್ಚು ತಯಾರು ಮಡುವ ದೇಶ ವಿಶ್ವದಲ್ಲಿಯೇ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ.
ಇದನ್ನೂ ಓದಿ: ವಿಶ್ವದಲ್ಲಿ ಅತ್ಯಂತ ದುಬಾರಿ ಏರ್‌ಲೈನ್ಸ್.. ಏನಿದರ ವಿಶೇಷ? ಒಂದು ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ವಿಶ್ವದಲ್ಲಿಯೇ ಅತಿಹೆಚ್ಚು ತಾಮ್ರದ ನಿಕ್ಷೇಪ ಹೊಂದಿರುವ ದೇಶ ಅಂದ್ರೆ ಅದು ಜಾಂಬಿಯಾ, ಈ ದೇಶವನ್ನು ಕಂಟ್ರಿ ಆಫ್ ಕಾಪರ್ ಎಂದು ಕರೆಯುತ್ತಾರೆ ಅಂದ್ರೆ ತಾಮ್ರದ ತವರೂರು ಎಂದು. ಕಾರಣ ಈ ದೇಶದಲ್ಲಿ ಅಪಾರವಾದ ತಾಮ್ರದ ನಿಕ್ಷೇಪವಿದೆ. ಕಾಪರ್ ಮೈನಿಂಗ್, ಕಾಪರ್ಬೆಲ್ಟ್ ಪ್ರಾವಿನ್ಸ್ನಲ್ಲಿ ವಿಶ್ವದ ದೇಶಗಳಲ್ಲಿ ಮೊದಲ ಸಾಲಿನಲ್ಲಿ ಬಂದು ನಿಲ್ಲುತ್ತದೆ ಜಾಂಬಿಯಾ. ತಾಮ್ರದ ಗಣಿಗಾರಿಕೆಯಲ್ಲಿ ಜಾಂಬಿಯಾ ವಿಶ್ವದಲ್ಲಿಯೇ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅದರ ಇತಿಹಾಸ ಮತ್ತು ಅಭಿವೃದ್ಧಿ ಇದೇ ತಾಮ್ರದ ನಿಕ್ಷೇಪದಿಂದ ಗುರುತಿಸಲಾಗುತ್ತದೆ.
ಈಗಾಗಲೇ ಹೇಳಿದಂತೆ ಜಾಂಬಿಯಾದಲ್ಲಿ ಬೃಹತ್ ಪ್ರಮಾಣದ ತಾಮ್ರದ ನಿಕ್ಷೇಪವಿದೆ. ಪ್ರಮುಖವಾಗಿ ಕಾಪರ್ಬೆಲ್ಟ್ ಎನ್ನುವ ಪ್ರದೇಶದಲ್ಲಿ. ಈ ಪ್ರದೇಶದಲ್ಲಿ ಅತಿಹೆಚ್ಚು ತಾಮ್ರದ ಗಣಿಗಾರಿಕೆಯ ಚಟುವಟಿಕೆಗಳು ನಡೆಯುತ್ತವೆ. ಇಲ್ಲಿ ಅತ್ಯುತ್ತಮ ಗುಣಮಟ್ಟದ ತಾಮ್ರವನ್ನು ತಯಾರಿಸಲಾಗುತ್ತದೆ. ಜಾಂಬಿಯಾ ಆರ್ಥಿಕತೆಯನ್ನ ಹೆಚ್ಚು ಬಲಿಷ್ಠ ಮಾಡಿದ್ದೆ ಈ ತಾಮ್ರದ ಗಣಿಗಾರಿಕೆ. ಈ ತಾಮ್ರದ ರಫ್ತಿನಿಂದಾಗಿಯೇ ಜಾಂಬಿಯಾ ಅತಿಹೆಚ್ಚು ಆದಾಯವನ್ನು ಗಳಿಸುತ್ತದೆ ಮತ್ತು ದೇಶದ ಅಭಿವೃದ್ಧಿಗೆ ತಾಮ್ರದ ರಫ್ತು ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದೆ.
1964ರಲ್ಲಿ ಸ್ವಾತಂತ್ರ್ಯ ಪಡೆದ ಜಾಂಬಿಯಾ ತನ್ನ ದೇಶದಲ್ಲಿರುವ ತಾಮ್ರದ ಗಣಿಗಾರಿಕೆಯ ಮೇಲೆ ತನ್ನದೇ ಆದ ಸ್ವಾಮಿತ್ವವನ್ನು ಪಡೆಯಿತು. ಆರಂಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ ಜಾಂಬಿಯಾ ನಂತರ ತನ್ನನ್ನು ತಾನು ಸುಧಾರಿಸಿಕೊಂಡಿತು. ಮುಂದೆ ತಾಮ್ರದ ಉತ್ಪಾದಕ ದೇಶಗಳಲ್ಲಿ ಶಕ್ತಿ ಕೇಂದ್ರವಾಗಿ ತನ್ನನ್ನು ತಾನು ಗುರುತಿಸಿಕೊಂಡಿತು. ಈ ದೇಶದ ಕಿಟ್ವೆ, ನ ಎನ್ಡೊಲಾ ಮತ್ತು ಚಿಂಗಾಲೊ ಪ್ರದೇಶದಲ್ಲಿ ಅತಿಹೆಚ್ಚು ತಾಮ್ರದ ಗಣಿಗಾರಿಕೆ ನಡೆಯುತ್ತದೆ. ಸ್ವಾತಂತ್ರ್ಯಾ ನಂತರ ಜಾಂಬಿಯಾ ಸರ್ಕಾರ ತಾಮ್ರದ ಉದ್ಯಮದ ಮೇಲೆ ತನ್ನ ಹಿಡಿತವನ್ನು ಹೊಂದಿತ್ತು.
ಇದನ್ನೂ ಓದಿ: 21 ಕೋಟಿ ಲಾಟರಿ ಗೆದ್ದ ಮಹಿಳೆಗೆ ಬಿಗ್ ಶಾಕ್.. ಟಿಕೆಟ್ ದಾನ ಮಾಡಿದ ಮೇಲೆ ಏನಾಯ್ತು ಗೊತ್ತಾ?
ಆದರೆ ಈ ಕ್ಷೇತ್ರ ಅನೇಕ ಸಮಸ್ಯೆಗಳನ್ನ ಅಂದರೆ ಕಡಿಮೆ ಉತ್ಪಾದನೆ ಮತ್ತು ಹಣಕಾಸಿನ ಬಿಕ್ಕಟ್ಟುಗಳನ್ನು ಎದುರಿಸಲಾರಂಭಿಸಿತು. ಬಳಿಕ ಖಾಸಗಿಇಕಂಪನಿಗಳು ಇಲ್ಲಿ ಹೂಡಿಕೆ ಮಾಡುವ ಮೂಲಕ ಈ ಉದ್ಯಮಕ್ಕೆ ಹೊಸ ರೂಪುರೇಷೆಯನ್ನು ಕೊಟ್ಟರು. ಸದ್ಯ ಜಾಂಬಿಯಾ ವರ್ಷಕ್ಕೆ ಸುಮಾರು 8 ಲಕ್ಷ 20 ಸಾವಿರದ 670 ಮೆಟ್ರಿಕ್ ಟನ್ನಷ್ಟು ತಾಮ್ರದ ಉತ್ಪಾದನೆ ಮತ್ತು ರಫ್ತು ಮಾಡುತ್ತದೆ. ಸದ್ಯ ತಾಮ್ರದ ಬೆಲೆ ಭಾರತದಲ್ಲಿ ಕೆಜಿಗೆ ಸುಮಾರ 899 ರೂಪಾಯಿ ಇದೆ. ಜಾಂಬಿಯಾ ಹೊರತುಪಡಿದರೆ ಚೀಲಿ, ಚೀನಾ ಮತ್ತು ಅಮೆರಿಕಾ ದೇಶಗಳು ಅತಿಹೆಚ್ಚು ತಾಮ್ರದ ಉತ್ಪಾದನೆಯನ್ನು ಮಾಡುತ್ತದೆ. ಭಾರತದಲ್ಲಿಯೂ ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಸೇರಿ ಹಲವು ರಾಜ್ಯಗಳಲ್ಲಿ ತಾಮ್ರದ ಗಣಿಗಾರಿಕೆ ನಡೆಯುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ