/newsfirstlive-kannada/media/post_attachments/wp-content/uploads/2025/02/Long-Life.jpg)
ಜಗತ್ತಿನಲ್ಲಿ ಅತಿಹೆಚ್ಚು ವರ್ಷಗಳ ಕಾಲ ಬದುಕುವ ಪ್ರಾಣಿಗಳಲ್ಲಿ ಮಾನವನೂ ಕೂಡ ಒಬ್ಬ. ಪ್ರತಿಯೊಬ್ಬ ಮನುಷ್ಯನು ತನ್ನ ದೀರ್ಘಾಯುಷ್ಯಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತಾನೆ. ಚಿಕ್ಕವರು ದೊಡ್ಡವರ ಕಾಲಿಗೆ ನಮಸ್ಕಾರ ಮಾಡಿದಾಗ ದೀರ್ಘಾಯುಷಿಯಾಗು ಅಂತಲೇ ಹಾರೈಸುತ್ತಾರೆ. ತಮ್ಮ ಜೀವನ ಶೈಲಿಯಿಂದ, ಆಹಾರ ಕ್ರಮದಿಂದ ನೂರಕ್ಕೂ ಹೆಚ್ಚು ವರ್ಷ ಬದುಕಿದವರು ನಮ್ಮ ನಡುವೆಯೇ ಇದ್ದಾರೆ. ಆದರೆ ಅತಿಹೆಚ್ಚು ಕಾಲ ಬದುಕವ ಜನರು ಯಾವ ದೇಶದಲ್ಲಿ ಹೆಚ್ಚು ಇದ್ದಾರೆ ಅಂತ ನಿಮಗೆ ಗೊತ್ತಾ? ಈ ಕೆಲವು ದೇಶಗಳಲ್ಲಿ ದೀರ್ಘಾಯುಷಿಗಳ ರೇಟ್​ ಹೆಚ್ಚಿದೆ. ಅವು ಯಾವುವು ಎಂಬುದನ್ನು ನೋಡ್ತಾ ಹೋಗುವುದಾದ್ರೆ.
/newsfirstlive-kannada/media/post_attachments/wp-content/uploads/2025/02/Long-Life-Monaco.jpg)
ಮೊನಾಕೊದಲ್ಲಿ ವಾಸಿಸುವ ಜನರ ಜಗತ್ತಿನಲ್ಲಿ ಅತಿಹೆಚ್ಚು ದೀರ್ಘಾಯುಷ್ಯ ಹೊಂದಿರುವ ಜನರು ಇದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಪ್ರತಿ ವ್ಯಕ್ತಿಯು ಕನಿಷ್ಠ 85 ರಿಂದ 87 ವರ್ಷಗಳ ಕಾಲ ಬದುಕುತ್ತಾನೆ. ಇಲ್ಲಿ ಬಡತನ ಅನ್ನೋದು ಅತ್ಯಂತ ಕಡಿಮೆ ಇದೆ. ಜಗತ್ತಿನಲ್ಲಿ ಪ್ರತಿ ವ್ಯಕ್ತಿಗೆ ಇಂತಿಷ್ಟು ವೈದ್ಯರು ಇರಬೇಕು ಎಂಬ ನಿಯಮದಲ್ಲಿ ಮೊನಾಕೊ ಮುಂದಿದೆ. ಇಲ್ಲಿ ಅತಿಹೆಚ್ಚು ವೈದ್ಯರು ನಮಗೆ ಕಾಣಸಿಗುತ್ತಾರೆ.
/newsfirstlive-kannada/media/post_attachments/wp-content/uploads/2025/02/Long-Life-JAPAN.jpg)
ದೀರ್ಘಕಾಲ ಬದುಕುವ ಜನರನ್ನು ಹೊಂದಿದ ಮತ್ತೊಂದು ದೇಶವೆಂದರೆ ಅದು ಜಪಾನ್. ಜಪಾನ್​ನ ಪ್ರತ್ಯೇಕ ಮನುಷ್ಯನು ಕನಿಷ್ಠ 85 ವರ್ಷಗಳ ಕಾಲ ಬದುಕುತ್ತಾನೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಒಂದು ಅಂದಾಜಿನ ಪ್ರಕಾರ 2050ರಲ್ಲಿ ಇದರ ಸಂಖ್ಯೆ 88ಕ್ಕೆ ತಲುಪಲಿದೆ ಎಂದು ಕೂಡ ಹೇಳಲಾಗುತ್ತದೆ. ಇನ್ನು ಜಪಾನ್​ನಲ್ಲಿ ಅನಾರೋಗ್ಯ ಬೊಜ್ಜಿನಿಂದ ನರಳುತ್ತಿರುವವರ ಸಂಖ್ಯೆ ತೀರ ಅಂದ್ರೆ ತೀರ ಕಡಿಮೆ ಇದೆ. ಇದೇ ಅವರ ದೀರ್ಘಾಯುಷ್ಯದ ಗುಟ್ಟು ಎಂದು ಕೂಡ ಹೇಳಲಾಗುತ್ತದೆ.
ಇದನ್ನೂ ಓದಿ:ನಿಮ್ಮ ಮಕ್ಕಳು ಅತೀ ಹಠಮಾರಿಯಾ..? ಅವರನ್ನು ಸುಧಾರಿಸುವುದು ಹೇಗೆ? ಇಲ್ಲಿವೆ ಉಪಾಯಗಳು!
/newsfirstlive-kannada/media/post_attachments/wp-content/uploads/2025/02/Long-Life-SWITZERLAND.jpg)
ಸ್ವಿಟ್ಜರ್​ರ್ಲೆಂಡ್​ ತನ್ನ ಪ್ರಾಕೃತಿಕ ಸೌಂದರ್ಯದಿಂದಲೇ ಜಗತ್ತಿಗೆ ಪರಿಚಯಿಸಿಕೊಂಡಿರುವ ಯುರೋಪ್​​ನ ಪ್ರಮುಖ ದೇಶ. ಇಲ್ಲಿ ಬದುಕುವ ಜನರ ಆಯಸ್ಸು ಕನಿಷ್ಠ ಅಂದರೂ 84.4 ವರ್ಷ ಎಂದು ಹೇಳಲಾಗುತ್ತದೆ. ಇದು 2050ರಲ್ಲಿ 87.7ಕ್ಕೆ ತಲುಪಲಿದೆ ಎಂದು ಕೂಡ ಅಂದಾಜಿಸಲಾಗಿದೆ.
ಅತಿ ಹೆಚ್ಚು ಕಾಲ ಬಾಳಿ ಬದುಕುವವರ ಸಂಖ್ಯೆ ಹೆಚ್ಚಿರುವ ಮತ್ತೊಂದು ದೇಶ ಅಂದ್ರೆ ಅದು ಇಟಲಿ. ಇಟಲಿಯಲ್ಲಿ ಜನರ ಆಯಸ್ಸು ಸುಮಾರು 84 ವರ್ಷ ಎಂದು ಹೇಳಲಾಗುತ್ತದೆ. ಇದಾದ ನಂತರ ಬರುವ ದೇಶ ಸಿಂಗಾಪೂರ್ ಇಲ್ಲಿಯ ಜನರು ಕೂಡ ಕನಿಷ್ಠವೆಂದರೂ ಕೂಡ 84 ವರ್ಷ ಬದುಕುತ್ತಾರಂತೆ. ಇಲ್ಲಿನ ಆರೋಗ್ಯ ವ್ಯವಸ್ಥೆ ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ಎಂದು ಗುರುತಿಸಿಕೊಂಡಿದೆ. ಇನ್ನು ಸ್ಪೇನ್ ದಕ್ಷಿಣ ಕೊರಿಯಾದಲ್ಲಿಯೂ ಜನರು ಅತಿಹೆಚ್ಚು ಕಾಲ ಬದುಕುತ್ತಾರೆ. ಇಲ್ಲಿಯೂ ಕೂಡ ಪ್ರತಿಯೊಬ್ಬ ವ್ಯಕ್ತಿ ಸುಮಾರು 84 ವರ್ಷಗಳ ಕಾಲ ಬದುಕುತ್ತಾರೆ. ಇನ್ನು ಆಸ್ಟ್ರೇಲಿಯಾದಲ್ಲಿನ ಜನರು ಅಕಾಲಿಕ ಮೃತ್ಯುವಿನ ಹೊರತಾಗಿ ಸುಮಾರು 83 ವರ್ಷಗಳ ಕಾಲ ಬದಕುತ್ತಾರಂತೆ.
/newsfirstlive-kannada/media/post_attachments/wp-content/uploads/2025/02/Long-Life-INDIA.jpg)
ಇನ್ನು ಭಾರತದ ವಿಷಯಕ್ಕೆ ಬಂದರೆ ದೀರ್ಘಾಯುಷ್ಯದ ವಯಸ್ಸು ಉಳಿದ ದೇಶಗಳಿಗೆ ಹೋಲಿಸಿದರೆ ಕಡಿಮೆ ಇದೆ. ಇಲ್ಲಿಯ ಜನರು ಅಬ್ಬಬ್ಬಾ ಅಂದ್ರೆ 72 ರಿಂದ 77 ವರ್ಷದವರೆಗೆ ಬದುಕುತ್ತಾರೆ 2050ಕ್ಕೆ ಇದರ ಸಂಖ್ಯೆ 87.7ಕ್ಕೆ ತಲುಪಲಿದೆ ಎಂದು ಅಂಕಿಅಂಶಗಳು ಹೇಳುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us