/newsfirstlive-kannada/media/post_attachments/wp-content/uploads/2024/12/NEW-YEAR-4.jpg)
ಕೆಲವೇ ಗಂಟೆಗಳಲ್ಲಿ ಹೊಸ ವರ್ಷ ಸ್ವಾಗತಿಸಲು ಇಡೀ ಜಗತ್ತು ಸಜ್ಜಾಗಿದೆ. ಎಲ್ಲೆಡೆ ಹೊಸ ವರ್ಷದ ಹರುಷ, ಸಂಭ್ರಮ ಮನೆ ಮಾಡಿದೆ. ಹೊಸ ವರ್ಷಕ್ಕೆ ಹೊಸ ಚೈತನ್ಯ ಕಂಡುಕೊಂಡು ಕಹಿಯ ಕ್ಷಣಗಳನ್ನು ಕಳೆದು ಸಂಭ್ರಮ, ಸಂತೋಷದ ಕ್ಷಣಕ್ಕಾಗಿ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಇಂದು ರಾತ್ರಿ ಗಡಿಯಾರದ ಮುಳ್ಳು 12 ಗಂಟೆಗೆ ಬರುತ್ತಿದ್ದಂತೆ ಎಲ್ಲೆಡೆ ಪಟಾಕಿಗಳ ಸದ್ದು ಕೇಳಿಸುತ್ತದೆ.
ಮೊದಲು ಸ್ವಾಗತಿಸುವವರು ಯಾರು?
ಹೀಗೊಂದು ಪ್ರಶ್ನೆ ಎಲ್ಲರಲ್ಲೂ ಮೂಡಿರಬಹುದು. ತನ್ನ ಕಕ್ಷೆಯ ಸುತ್ತ ಭೂಮಿ ತಿರುಗುವುದರಿಂದ ಜಗತ್ತಿನ ವಿವಿಧ ದೇಶಗಳಲ್ಲಿ ಹೊಸ ವರ್ಷಾಚರಣೆ ಸಮಯ ಕೂಡ ವಿಭಿನ್ನವಾಗಿಯೇ ಇದೆ. ವಿಶ್ವದಲ್ಲೇ ಹೊಸ ವರ್ಷ ಮೊದಲು ಸ್ವಾಗತಿಸುವ ಪ್ರದೇಶವೆಂದರೆ ಕಿರಿಬಾಟಿ. ಓಷಿಯಾನಿಯಾದ ಕಿರಿಬಾಟಿ (Kiribati) ಎಂಬ ದ್ವೀಪ ರಾಷ್ಟ್ರ.
ಇದನ್ನೂ ಓದಿ:2024ರಲ್ಲಿ ಲಕ್ಸುರಿ ಕಾರು ಖರೀದಿಸಲು ಮುಗಿಬಿದ್ದ ಭಾರತೀಯರು; ದುಬಾರಿ ದುನಿಯಾದಲ್ಲೂ ಹೊಸ ದಾಖಲೆ!
ಹೊಸ ವರ್ಷ ಮೊದಲು ಸ್ವಾಗತಿಸುವ ಗೌರವ ಕಿರಿಬಾಟಿ ಗಣರಾಜ್ಯದಲ್ಲಿರುವ ಕ್ರಿಸ್ಮಸ್ ದ್ವೀಪ ಎಂದು ಕರೆಯಲ್ಪಡುವ ಕಿರಿಟಿಮತಿ ದ್ವೀಪದ್ದು. ಕಿರಿಟಿಮತಿ ದ್ವೀಪದ ಬಳಿಕ ಹೊಸ ವರ್ಷ ಸ್ವಾಗತಿಸುವ 2ನೇ ರಾಷ್ಟ್ರ ನ್ಯೂಜಿಲೆಂಡ್. ನ್ಯೂಜಿಲೆಂಡ್, ಟೊಂಗಾ, ಚಾಥಮ್ ದ್ವೀಪಗಳು ಹೊಸ ವರ್ಷ ಸ್ವಾಗತಿಸುತ್ತವೆ. ಟೊಂಗಾ, ಚಾಥಮ್ ದ್ವೀಪಗಳಲ್ಲಿ ಸಾಂಪ್ರದಾಯಿಕ ಸಾಂಸ್ಕೃತಿಕ ಆಚರಣೆಗಳ ಮೂಲಕ ಹೊಸ ವರ್ಷ ಸ್ವಾಗತಿಸುತ್ತಾರೆ.
ನ್ಯೂಜಿಲೆಂಡ್ ಬಳಿಕ ಹೊಸ ವರ್ಷ ಸ್ವಾಗತಿಸುವ ದೇಶವೆಂದರೆ ಆಸ್ಟ್ರೇಲಿಯಾ. ಆಸ್ಟ್ರೇಲಿಯಾದ ಪೂರ್ವ ಕರಾವಳಿ, ಜಪಾನ್, ದಕ್ಷಿಣ ಕೊರಿಯಾ ಬಳಿಕ ಭಾರತ ಹೊಸ ವರ್ಷ ಸ್ವಾಗತಿಸುತ್ತದೆ. ಶ್ರೀಲಂಕಾ, ಬ್ರಿಟನ್ ಸೇರಿ 25 ದೇಶಗಳು ನಂತರದಲ್ಲಿ ಹೊಸ ವರ್ಷ ಸ್ವಾಗತಿಸುತ್ತವೆ.
ಹೊಸ ವರ್ಷ ಸ್ವಾಗತಿಸುವ ಕೊನೆಯ ಸ್ಥಳ
ಕಿರಿಬಾಟಿ ಗಣರಾಜ್ಯದ ಕಿರಿಟಿಮತಿ ದ್ವೀಪ ಹೊಸ ವರ್ಷಸ್ವಾಗತಿಸುವ ಮೊದಲ ಪ್ರದೇಶವಾದರೆ ಹೊಸ ವರ್ಷ ಸ್ವಾಗತಿಸುವ ಕೊನೆಯ ಸ್ಥಳ ಬೇಕರ್ ದ್ವೀಪ ಮತ್ತು ಹೌಲ್ಯಾಂಡ್ ದ್ವೀಪಗಳು. ಇವೆರಡೂ ಜನವಸತಿ ಇಲ್ಲದ ಪ್ರದೇಶಗಳು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಜೀವ ಬಿಟ್ಟ ಮತ್ತೊಬ್ಬ ಅಯ್ಯಪ್ಪನ ಭಕ್ತ; ಮಾಲಾಧಾರಿಗಳ ದುರಂತ 7ಕ್ಕೆ ಏರಿಕೆ
ಆದರೆ ಹೊಸ ವರ್ಷ ಸ್ವಾಗತಿಸುವ ಜನವಸತಿ ಇರುವ ಕೊನೆಯ ಪ್ರದೇಶವೆಂದರೆ ಅಮೆರಿಕನ್ ಸಮೋವಾ ದ್ವೀಪ ರಾಷ್ಟ್ರ. ನ್ಯೂಜಿಲೆಂಡ್ ಮತ್ತು ಹವಾಯಿ ನಡುವೆ ಇರುವ ಈ ಅಮೆರಿಕನ್ ಸಮೋವಾ ಸರಿ ಸುಮಾರು 1,80,000 ಜನಸಂಖ್ಯೆ ಹೊಂದಿದ್ದು ವಿಶ್ವದ ಕೊನೆಯ ಸ್ಥಳವೆಂದೂ ಕರೆಯುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ