ಉಡುಪಿ ಜಿಲ್ಲೆಗೆ ಮೊದಲ ಸ್ಥಾನ.. ದ್ವಿತೀಯ PU ಫಲಿತಾಂಶದಲ್ಲಿ ನಿಮ್ಮ ಜಿಲ್ಲೆಗೆ ಯಾವ ಸ್ಥಾನ?

author-image
admin
Updated On
ಉಡುಪಿ ಜಿಲ್ಲೆಗೆ ಮೊದಲ ಸ್ಥಾನ.. ದ್ವಿತೀಯ PU ಫಲಿತಾಂಶದಲ್ಲಿ ನಿಮ್ಮ ಜಿಲ್ಲೆಗೆ ಯಾವ ಸ್ಥಾನ?
Advertisment
  • ಪಿಯು ಪರೀಕ್ಷೆಯಲ್ಲಿ ಒಟ್ಟು ಶೇಕಡಾ 73.45ರಷ್ಟು ಉತ್ತೀರ್ಣ
  • ಈ ಬಾರಿ ಸರ್ಕಾರಿ ಕಾಲೇಜುಗಳಲ್ಲಿ ಶೇಕಡಾ 57ರಷ್ಟು ಪಾಸ್
  • ದಕ್ಷಿಣ ಕನ್ನಡ ದ್ವಿತೀಯ ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಪಿಯು ಪರೀಕ್ಷೆಯಲ್ಲಿ ಒಟ್ಟು ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ವರ್ಷದ ಫಲಿತಾಂಶದಲ್ಲಿ ಶೇಕಡಾ 93.90ರಷ್ಟು ಫಲಿತಾಂಶ ಪಡೆದು ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ದ್ವಿತೀಯ ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ:Newsfirst ಜ್ಞಾನ ಸಂಗಮಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಏನು ಉಪಯೋಗ?

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಬಾರಿ ಸರ್ಕಾರಿ ಕಾಲೇಜುಗಳಲ್ಲಿ ಶೇಕಡಾ 57ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅನುದಾನ ರಹಿತ ಕಾಲೇಜುಗಳಲ್ಲಿ ಶೇ. 82.66, ಅನುದಾನಿತ ಪದವಿ ಪೂರ್ವ ಕಾಲೇಜು ಶೇ. 62.6, ಬಿಬಿಎಂಪಿ ವ್ಯಾಪ್ತಿಯ 68.88 ಪರ್ಸೆಂಟ್ ಮತ್ತು ವಸತಿ ಶಾಲಾ ಕಾಲೇಜುಗಳು ಶೇ. 86.18 ಹಾಗೂ ವಿಭಜಿತ ಕಾಲೇಜುಗಳಲ್ಲಿ ಶೇಕಡಾ 78.58 ಪರ್ಸೆಂಟ್ ಮಂದಿ ತೇರ್ಗಡೆ ಆಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಲಾರಿ ಡ್ರೈವರ್ ಮಗಳು ರಾಜ್ಯಕ್ಕೆ ಪ್ರಥಮ.. ದ್ವಿತೀಯ PU ಟಾಪರ್ಸ್​ ಯಾರು? ಇಲ್ಲಿದೆ ಪಟ್ಟಿ! 

ಜಿಲ್ಲೆಗಳ ಶೇಕಡಾವಾರು ಫಲಿತಾಂಶ!
1. ಉಡುಪಿ 93.90 %
2. ದಕ್ಷಿಣ ಕನ್ನಡ 93.57%
3. ಬೆಂ.ದಕ್ಷಿಣ 85.36%
4. ಕೊಡಗು 83.84%
5. ಬೆಂ.ಉತ್ತರ 83.31%
6. ಉ.ಕನ್ನಡ 82.93%
7. ಶಿವಮೊಗ್ಗ 79.91%
8. ಬೆಂ.ಗ್ರಾಮಾಂತರ 79.70%
9. ಚಿಕ್ಕಮಗಳೂರು 79.56%
10. ಹಾಸನ 77.56%
11. ಚಿಕ್ಕಬಳ್ಳಾಪುರ 75.80%
12. ಮೈಸೂರು 74.30%
13. ಚಾಮರಾಜನಗರ 73.97%
14. ಮಂಡ್ಯ 73.27%
15. ಬಾಗಲಕೋಟೆ 72.83%
16. ಕೋಲಾರ 72.45%
17. ಧಾರವಾಡ 72.32%
18. ತುಮಕೂರು 72.02%
19. ರಾಮನಗರ 69.71%
20. ದಾವಣಗೆರೆ 69.45%
21. ಹಾವೇರಿ 67.56%
22. ಬೀದರ್ 67.31%
23. ಕೊಪ್ಪಳ 67.20%
24. ಚಿಕ್ಕೋಡಿ 66.76%
25. ಗದಗ 66.64%
26. ಬೆಳಗಾವಿ 65.37%
27. ಬಳ್ಳಾರಿ 64.41%
28. ಚಿತ್ರದುರ್ಗ 59.87%
29. ವಿಜಯಪುರ 58.81%
30. ರಾಯಚೂರು 58.75%
31. ಕಲಬುರಗಿ 55.70%
32. ಯಾದಗಿರಿ 48.45%

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment