/newsfirstlive-kannada/media/post_attachments/wp-content/uploads/2025/04/ROMANTIC-FRUIT-2.jpg)
ಪ್ರೀತಿಯಲ್ಲಿ ಬಿದ್ದ ಮೇಲೆ ಪ್ರಣಯ ಇಲ್ಲದೇ ಇರುತ್ತಾ? ಪ್ರೀತಿಯೆಂಬುದೇ ಒಂದು ಅಮಲು. ಅದರಲ್ಲಿ ಕಳೆದುಹೋಗುವುದಕ್ಕಿಂತ ಬೇರೆ ಯಾವುದು ಇಲ್ಲ ಮೇಲು. ಪ್ರೀತಿಗೆ ಬಿದ್ದ ಜೋಡಿ ಸದಾ ಬಾಹುಗಳ ಬಿಸಿಯಲ್ಲಿ ಅಡಗಿಕೊಳ್ಳುವ ಸಿಹಿಯಾದ ಮೋಹವೊಂದು ಆವರಿಸುತ್ತೆ. ಸಂಗಾತಿಯ ಅಧರಗಳ ಮೇಲೆ ಆಗಾಗ ಕಣ್ಣುಗಳು ಬೀಳುತ್ತವೆ. ಒಂದು ಸಿಹಿ ಮುತ್ತಿಗಾಗಿ ಜೀವ ನಿತ್ಯವೂ ಹಂಬಲಿಸುತ್ತದೆ. ಯಾವ ಪ್ರೇಮಿಗೆ ತಾನೆ ಇವೆಲ್ಲಾ ಆಸೆ ಇರೋದಿಲ್ಲ. ಎಲ್ಲರಿಗೂ ಇರುತ್ತದೆ.
ಹಾಗೆಯೇ ಪ್ರಣಯಕ್ಕೆ ಅಂತಲೇ ಕೆಲವೊಂದು ವಿಶೇಷತೆಗಳು ಇವೆ. ನಾವು ಪ್ಯಾರಿಸ್ನ್ನು ಪ್ರಣಯ ನಗರಿ ಎಂದು ಕರೆಯುತ್ತೇವೆ. ಗುಲಾಬಿಯನ್ನು ಪ್ರೀತಿಯ ಮತ್ತು ಪ್ರಣಯದ ಸಂಕೇತದ ಹೂವು ಎಂದು ಗುರುತಿಸುತ್ತೇವೆ. ತಾಜ್ ಮಹಲ್ ಪ್ರೇಮದ ಸ್ಮಾರಕವಾಗಿ ಕಾಡುತ್ತದೆ. ವೃಂದಾವನ ಕೃಷ್ಣ ತನ್ನ ಸಖಿಯರೊಂದಿಗೆ ನಡೆಸಿದ ಸಿಹಿ ಪ್ರಣಯಗಳ ಗುರುತು. ಪ್ರಣಯಕ್ಕೆ ಸಾಕ್ಷಿ ಹೇಳುವ ಹಲವಾರು ಸಂಕೇತಗಳು ನಮ್ಮ ನಡುವೆಯೇ ಇದೆ. ಪ್ರಣಯವೊಂದು ಪಾಪ ಎಂದುಕೊಂಡರೆ ಅವರಂತಹ ಮೂರ್ಖ ಪ್ರೇಮಿಗಳು ಈ ಜಗತ್ತಿನಲ್ಲಿ ಮತ್ತೊಬ್ಬರಿಲ್ಲ. ಪ್ರೀತಿಗೆ ಮತ್ತೊಂದು ಎತ್ತರದ ವ್ಯಾಮೋಹ, ಸಮ್ಮೋಹ ಉನ್ಮತ್ತತೆ ಸೃಷ್ಟಿಸುವುದೇ ಪ್ರಣಯ. ಉನ್ಮತ್ತದ ತುತ್ತ ತುದಿ ತಲುಪಿದ ಪ್ರೇಮವೆಂದೂ ನೆಲಕ್ಕೆ ಕುಸಿದು ಬೀಳುವುದಿಲ್ಲ. ಈ ಪ್ರೇಮಿಗಳ ನಡುವೆ ಪ್ರಣಯದ ಅಂದ್ರೆ ರೋಮ್ಯಾನ್ಸ್ ಗುರುತಾಗಿ ವಿಶ್ವದಲ್ಲಿ ಒಂದು ಹಣ್ಣು ಕಾಣುತ್ತದೆ. ಇದನ್ನು ರೋಮ್ಯಾಂಟಿಕ್ ಫ್ರೂಟ್ ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ:ಇವು ಭಾರತದ ಮೂಲವಲ್ಲದ ಭಾರತೀಯರೇ ಇಷ್ಟಪಟ್ಟು ಸೇವಿಸುವ ಖಾದ್ಯಗಳು! ಯಾವುವು ಗೊತ್ತಾ?
ಈ ಒಂದು ಫಲ, ಪ್ರೀತಿಯ ಪ್ರಣಯದ ಫಲದ ಫಲವಾಗಿ ಗುರುತಿಸಿಕೊಂಡಿದೆ. ಈ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಹಾರ್ಮೋನ್ ಉತ್ಪತ್ತಿಯಾಗುವುದರಿಂದ ದೇಹದಲ್ಲಿ ಪ್ರಣಕ್ಕೆ ಸಜ್ಜಾಗುವ ಒಂದು ಸ್ಥಿತಿ ಉದ್ಭವವಾಗುತ್ತದೆ. ಆಗ ಪ್ರೇಮಿಗಳು ತಮ್ಮ ಪ್ರೀತಿಗೆ ಮತ್ತೊಂದು ಮಜಲನ್ನು ನೀಡಿ ಪ್ರಣಯಕ್ಕೆ ಕೂಡಿ ಪ್ರೀತಿಯ ಪಾವಿತ್ರ್ಯವನ್ನು ತಮ್ಮ ಬದುಕಲ್ಲಿ ಮತ್ತಷ್ಟು ವಿಸ್ತರಿಸಿಕೊಳ್ಳಬಹುದು.
ಇದನ್ನೂ ಓದಿ: ಖರ್ಜೂರ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು.. ಇವರು ತಿನ್ನಲೇಬಾರದಾ..?
ಇದೇ ಕಾರಣದಿಂದಾಗಿಯೇ ಈ ಒಂದು ಹಣ್ಣನ್ನು ರೋಮ್ಯಾಂಟಿಕ್ ಫ್ರೂಟ್ ಎಂದು ಕರೆಯುತ್ತಾರೆ. ನಾವು ಸೇಬು, ಮೊಸಂಬಿ, ದ್ರಾಕ್ಷಿ, ದಾಳಿಂಬೆ ಹಣ್ಣನ್ನು ಸದಾಕಾಲ ಸೇವಿಸುತ್ತಲೇ ಇರುತ್ತೇವೆ. ಇವು ಕೂಡ ಆರೋಗ್ಯಕ್ಕೆ ತುಂಬಾ ಉಪಯೋಗಕರ. ಆದರೆ ದೇಹದಲ್ಲಿ ಒಂದು ಉನ್ಮಾದ, ರತಿಭಾವ ಹುಟ್ಟಿಸುವ ಹಣ್ಣು ಅಂದ್ರೆ ಅದು ಈ ರೋಮ್ಯಾಂಟಿಕ್ ಫ್ರೂಟ್ ಎಂದು ಕರೆಸಿಕೊಳ್ಳುವ ಈ ಹಣ್ಣು. ಇದನ್ನು ಪ್ರಣಯದ ರಾಣಿ ಎಂದೇ ಕರೆಯುತ್ತಾರೆ. ಆ ಹಣ್ಣು ಯಾವುದು ಅಂದ್ರೆ ಸ್ಟ್ರಾಬೆರಿ ಹಣ್ಣು.
ಸ್ಟ್ರಾಬೆರಿ ಹಣ್ಣು ಪ್ರಣಯದ ರಾಣಿ ಎಂದು ಕರೆಸಿಕೊಳ್ಳುವ ವಿಶ್ವದ ಏಕೈಕ ಹಣ್ಣು. ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರೇಮಿಗಳು ಈ ಹಣ್ಣನ್ನು ಒಬ್ಬರಿಗೊಬ್ಬರು ಕಚ್ಚಿ ತಿನ್ನುತ್ತಾ ವಿನಿಮಯ ಮಾಡಿಕೊಂಡು ಪ್ರಣಯಕ್ಕೆ ಒಂದು ವೇದಿಕೆಯನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಈಗಾಗಲೇ ಹೇಳಿದಂತೆ ಈ ಹಣ್ಣು ಸೇವಿಸುವುದರಿಂದ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಅಥವಾ ಹಿಪ್ಪಿ ಹಾರ್ಮೋನ್ ಸೃಷ್ಟಿಯಾಗುತ್ತದೆ. ಇದು ನಮ್ಮನ್ನು ನಮ್ಮ ಸಂಗಾತಿಯತ್ತ ದೈಹಿಕವಾಗಿ ಸೆಳೆಯುವಲ್ಲಿ, ಅವಳತ್ತ ಇಲ್ಲವೇ ಅವನತ್ತ ಒಂದು ಸೆಳೆಯುವ ಒಂದು ಸಮ್ಮೋಹನಾತ್ಮಕ ಭಾವ ಹುಟ್ಟುತ್ತದೆ. ಈ ಕೆಂಪು ಬಣ್ಣದ ಸ್ಟ್ರಾಬೆರಿ ಹಣ್ಣು ತಿನ್ನಲು ಸಿಹಿಯಾಗಿಯೂ ಇರುತ್ತದೆ. ತಿಂದ ಮೇಲೆ ಸಿಹಿ ಭಾವವನ್ನು ಸೃಷ್ಟಿಸುತ್ತದೆ. ಇದನ್ನು ಹೊರತುಪಡಿಸಿದರೆ ಆವಾ ಚೆರಿಽ ಹಣ್ಣನ್ನೂ ಕೂಡ ಪ್ರಣಯ ಫಲ ಎಂದು ಕರೆಯುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ