/newsfirstlive-kannada/media/post_attachments/wp-content/uploads/2025/04/CITY-OF-KNIVES.jpg)
ಭಾರತ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ದೇಶಗಳಲ್ಲಿ 7ನೇ ಸ್ಥಾನವನ್ನು ಪಡೆದಿದೆ. ನಮ್ಮ ದೇಶದ ಭೂಮಿಯ ವಿಸ್ತೀರ್ಣ ಸುಮಾರು 32 ಲಕ್ಷ, 87 ಸಾವಿರದ 263 ಕಿಲೋ ಮೀಟರ್ ಇದೆ. ಹೀಗಾಗಿ ಇಲ್ಲಿ ವಿಭಿನ್ನ ಸಂಸ್ಕೃತಿ, ವಿಭಿನ್ನ ಜೀವನ ಶೈಲಿ, ವಿಭಿನ್ನ ವೇಷಭೂಷಣಗಳು ನಮಗೆ ಕಾಣಸಿಗುತ್ತವೆ. ದೇಶದ ಒಂದೊಂದು ರಾಜ್ಯ ಒಂದೊಂದು ವೈಶಿಷ್ಟ್ಯವನ್ನು ಹೊಂದಿವೆ, ಆಯಾ ರಾಜ್ಯದ ಅನೇಕ ನಗರಗಳು ತನ್ನದೇ ಆದ ಪ್ರಸಿದ್ಧಿಯನ್ನು ಪಡೆದಿದೆ. ಹೈದ್ರಾಬಾದ್ನ್ನು ನಾವು ಮುತ್ತಿನ ನಗರಿ ಎಂದು ಕರೆಯುತ್ತವೆ. ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎನ್ನುತ್ತಾರೆ. ಶಿಮ್ಲಾವನ್ನು ಪರ್ವತಗಳ ರಾಣಿ ಎಂದು ಕರೆಯುತ್ತಾರೆ. ಹೀಗೆಯೇ ಭಾರತದಲ್ಲಿ ಒಂದು ನಗರವಿದೆ. ಅದನ್ನು ಚಾಕುಗಳ ನಗರಿ ಎಂದು ಕರೆಯುತ್ತಾರೆ.
ಭಾರತದ ಅತಿದೊಡ್ಡ ರಾಜ್ಯ ಎಂದರೆ ಅದು ಉತ್ತರಪ್ರದೇಶ, ಸುಮಾರು 75 ಜಿಲ್ಲೆಗಳನ್ನು ಹೊಂದಿರುವ ರಾಜ್ಯ. ಭಾರತದಲ್ಲಿ ಅತಿಹೆಚ್ಚು ಜಿಲ್ಲೆಗಳನ್ನು ಹೊಂದಿರುವ ರಾಜ್ಯವೆಂದು ಕೂಡ ಅದನ್ನು ಕರೆಯುತ್ತಾರೆ. ಇದೇ ಉತ್ತರಪ್ರದೇಶದ ಒಂದು ನಗರವನ್ನ ಸಿಟಿ ಆಫ್ ನೈವ್ಸ್ ಎಂದು ಕರೆಯುತ್ತಾರೆ. ಅಂದರೆ ಚಾಕುಗಳ ಶಹರ ಎಂದು. ಈ ರೀತಿಯ ಹೆಸರಿನಿಂದ ಪ್ರಸಿದ್ಧಿ ಪಡೆದ ಜಿಲ್ಲೆ ಅಂದ್ರೆ ಅದು ರಾಮಪುರಿ. ಇದಕ್ಕೆ ಕಾರಣ ಇಲ್ಲಿ ಸಿದ್ಧಗೊಳ್ಳುವ ಚಾಕು ದೇಶದ ಯಾವ ಮೂಲೆಯಲ್ಲಿಯೂ ಕೂಡ ಸಿಗುವುದಿಲ್ಲ. ಚಾಕು ಉತ್ಪಾದನಾ ಉದ್ಯಮವನ್ನು ರಾಮಪುರಿ ಜಿಲ್ಲೆ ತನ್ನದಾಗಿಸಿಕೊಂಡಿದೆ.
ರಾಮಪುರಿ ತನ್ನ ರಾಜಾ ಲೈಬ್ರರಿ ಮತ್ತು ವೇದಶಾಲಾದಂತಹ ಸಾಂಸ್ಕೃತಿ ಸ್ಥಳಗಳಿಗೆ ಪ್ರಸಿದ್ಧಿ ಪಡೆದಿದೆ. ಅದರ ಜೊತೆಗೆ ಅತ್ಯುತ್ತಮ ಗುಣಮಟ್ಟದ ಚಾಕುಗಳನ್ನು ತಯಾರಿಸುವ ನಗರವಾಗಿಯೂ ಕೂಡ ಗುರುತಿಸಿಕೊಂಡಿದೆ. ರಾಮಪುರಿ ಜಿಲ್ಲೆಯನ್ನು ಅದರ ಕುಶಲ ಚಾಕು ತಯಾರಿಕೆಯ ಉದ್ಯಮದಿಂದ ಗುರುತಿಸಲಾಗುತ್ತದೆ. ಇಲ್ಲಿ ಶತಮಾನಗಳಿಂದ ಅನೇಕ ಪರಿವಾರಗಳು ಚಾಕು ಉತ್ಪಾದನೆಯನ್ನೇ ತಮ್ಮ ಪಾರಂಪರಿಕ ಉದ್ಯೋಗವನ್ನಾಗಿಸಿಕೊಂಡಿವೆ. ಅಂದಿನಿಂದ ಇಂದಿನವರೆಗೂ ಚಾಕುಗಳನ್ನು ತಯಾರಿಸುತ್ತಲೇ ಬಂದಿದ್ದಾರೆ.
ಇನ್ನು ಈ ರಾಮಪುರಿ ಜಿಲ್ಲೆ ಚಾಕುಗಳಿಗಾಗಿ ಪ್ರಸಿದ್ಧಿಯನ್ನು ಪಡೆದಿದ್ದರಿಂದ, ಈ ಜಿಲ್ಲೆಯಲ್ಲಿ ಸುಮಾರು 6.10 ಮೀಟರ್ ಉದ್ದದ ಚಾಕುವನ್ನು ನಗರದ ಒಂದು ಪ್ರಮುಖ ಬೀದಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಷ್ಟುಉದ್ದನೇಯ ಚಾಕು ನಿರ್ಮಾಣಕ್ಕೆ ಸುಮಾರು 50 ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಇದು ವಿಶ್ವದ ಅತ್ಯಂತ ದೊಡ್ಡ ಚಾಕು ಎಂಬ ದಾಖಲೆಯನ್ನು ಬರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ