ಭಾರತದ ಯಾವ ರಾಜ್ಯವನ್ನು ನಿದ್ರಾಸುಂದರಿ ಎಂದು ಕರೆಯುತ್ತಾರೆ? ಹಾಗೆ ಕರೆಯಲು 3 ಕಾರಣಗಳಿವೆ!

author-image
Gopal Kulkarni
Updated On
ಭಾರತದ ಯಾವ ರಾಜ್ಯವನ್ನು ನಿದ್ರಾಸುಂದರಿ ಎಂದು ಕರೆಯುತ್ತಾರೆ? ಹಾಗೆ ಕರೆಯಲು 3 ಕಾರಣಗಳಿವೆ!
Advertisment
  • ಭಾರತ ಯಾವ ರಾಜ್ಯವನ್ನು ನಿದ್ರಾ ಸುಂದರಿ ಎಂಬ ಹೆಸರಿನಿಂದ ಕರೆಯುತ್ತಾರೆ?
  • ಈ ರಾಜ್ಯಕ್ಕೆ ಇಂತಹದೊಂದು ಹೆಸರಿಂದ ಕರೆಯಲು ಅಸಲಿ ಕಾರಣವೇನು ಗೊತ್ತಾ?
  • ಯಾವ ಗುಣಗಳಿಂದ ಭಾರತದ ಈ ರಾಜ್ಯಕ್ಕೆ Sleeping State ಎಂಬ ಹೆಸರು ಬಂತು?

ಭಾರತದ ಹಲವು ರಾಜ್ಯಗಳಿಗೆ ಹಲವು ಹೆಸರು ಇವೆ. ಕೆಲವು ರಾಜ್ಯಗಳನ್ನು ದೇವಭೂಮಿ ಎಂದು ಕರೆದರೆ, ಮತ್ತೊಂದು ರಾಜ್ಯವನ್ನು ನದಿಗಳ ತವರು ಎಂದು ಕರೆಯುತ್ತಾರೆ. ಮುತ್ತಿನ ನಗರಿ ಎಂದು ಒಂದು ರಾಜ್ಯ ಹೆಸರು ಪಡೆದರೆ, ಕೋಟೆಗಳ ನಾಡು ಎಂದು ರಾಜಸ್ಥಾನವನ್ನು ಕರೆಯುತ್ತಾರೆ. ಭಾರತ ಈ ಒಂದು ರಾಜ್ಯವನ್ನು ಮಾತ್ರ ಒಂದು ವಿಚಿತ್ರ ಹೆಸರಿನಿಂದ ಕರೆಯುತ್ತಾರೆ. ಅದು ನಿದ್ರಾಸುಂದರಿ ಎಂದು.

ಹೌದು, ಭಾರತದ ಈ ಒಂದು ರಾಜ್ಯ ಸ್ಲೀಪಿಂಗ್ ಸ್ಟೇಟ್ ಎಂದೇ ಪ್ರಸಿದ್ಧಿ ಪಡೆದಿದೆ. ಅಂದ್ರೆ ನಿದ್ರಾಸುಂದರಿ ಅಂತ. ಹಾಗೆ ಕರೆಸಿಕೊಳ್ಳುವ ರಾಜ್ಯ ಯಾವುದು? ಅದನ್ನು ಹಾಗೆ ಕರೆಯಲು ಕಾರಣವೇನು ಎನ್ನುವುದನ್ನು ನಾವು ನಿಮಗೆ ಹೇಳುತ್ತೇವೆ. ಹಿಮಾಚಲ ಪ್ರದೇಶ ರಾಜ್ಯವನ್ನು ನಿದ್ರಾಸುಂದರಿ ಎಂದು ಕರೆಯಲಾಗುತ್ತದೆ. ಅದಕ್ಕೆ ಪ್ರಮುಖವಾಗಿ ಮೂರು ಕಾರಣಗಳಿವೆ. ಈ ಕಾರಣಗಳಿಂದಾಗಿ ಈ ರಾಜ್ಯವನ್ನು ನಿದ್ರಾ ಸುಂದರಿ ಎಂದು ಕರೆಯುತ್ತಾರೆ. ಆ ಕಾರಣಗಳು ಏನು ಎಂಬುದನ್ನು ನೋಡುವುದಾದ್ರೆ

publive-image

1. ಶಾಂತಿಯುತ ಮತ್ತು ರಮಣೀಯ: ನೀವು ಹಿಮಾಚಲ ಪ್ರದೇಶದ ಯಾವುದೇ ಭಾಗಕ್ಕೆ ಹೋದರು ಅಲ್ಲಿ ಶಾಂತಿ, ಪ್ರಶಾಂತತೆಯೆಂಬುದು ಹಾಸಿ ಹೊದ್ದುಕೊಂಡಿರುತ್ತೆ. ಹಿಮಾಲಯದ ಮಡಿಲಲ್ಲಿ ಮಲಗಿರುವ ಈ ರಾಜ್ಯ, ಬೆರಗುಗೊಳಿಸುವ ರಮಣೀಯ ಭೂದೃಶ್ಯಗಳನ್ನು ಹೊಂದಿದ್ದು, ನೈಸರ್ಗಿಕ ಸೌಂದರ್ಯವೆನ್ನವುದು ಇಲ್ಲಿ ಸದಾ ಕಾಲಕ್ಕೆ ವಾಸ್ತವ್ಯ ಹೂಡಿದೆ. ಹೀಗಾಗಿ ಸದ್ದುಗದ್ದಲಗಳಿಲ್ಲದ, ಪ್ರಶಾಂತತಯೇ ಮೂರ್ತಿವೆತ್ತ ರೀತಿಯಲ್ಲಿ ಈ ರಾಜ್ಯ ಇರುವುದರಿಂದ ಇದನ್ನು ನಿದ್ರಾ ಸುಂದರಿ ಅಥವಾ ಸ್ಲೀಪಿಂಗ್ ಸ್ಟೇಟ್ ಎಂದು ಕರೆಯುತ್ತಾರೆ.

ಇದನ್ನೂ ಓದಿ:ಉಳಿತಾಯ ಖಾತೆಯಲ್ಲಿ ಎಷ್ಟು ಲಕ್ಷದವರೆಗೆ ಡೆಪಾಸಿಟ್ ಮಾಡಬಹುದು? RBI ರೂಲ್ಸ್ ಏನು? ಓದಲೇಬೇಕಾದ ಸ್ಟೋರಿ

publive-image

2. ನಿಧಾನಗತಿಯ ಬದುಕು: ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿದರೆ ಹಿಮಾಚಲ ಪ್ರದೇಶದಲ್ಲಿ ಉಳಿದ ರಾಜ್ಯಗಳಿಗಿರುವಂತ ಗಡಿಬಿಡಿಗಳು ಇಲ್ಲ. ಯಾರಿಗೂ ಇಲ್ಲಿ ಅವಸರದಿಂದ ಬದುಕು ಕಟ್ಟಿಕೊಳ್ಳುವ ಧಾವಂತವಿಲ್ಲ. ಶಾಂತ ಜೀವನ ಶೈಲಿ ಮತ್ತು ಸದ್ದು ಗದ್ದಲಗಳಿಲ್ಲದ ಬದುಕನ್ನು ಈ ರಾಜ್ಯದ ಬಹುತೇಕ ನಗರಗಳಿಂದ ಹಿಡಿದು ಹಳ್ಳಿಗಳವರೆಗೂ ನಾವು ಕಾಣಬಹುದು. ಈ ರಾಜ್ಯವನ್ನು ನಿದ್ರಾಸುಂದರಿ ಎಂದು ಕರೆಯಲು ಇದು ಮತ್ತೊಂದು ಕಾರಣ.

publive-image

3 ಶಾಂತ ಪರ್ವತ ಪರಿಸರ: ಹಿಮಾಚಲ ಪ್ರದೇಶ ಎಂಬ ರಾಜ್ಯವೇ ಹಿಮಾಲಯದ ಬೃಹತ್ ಬೆಟ್ಟಗಳ ಮಡಿಲಲ್ಲಿ ನಿಂತಿರುವ ರಾಜ್ಯ. ಇಲ್ಲಿಯ ಹಿಮ ಹೊತ್ತುಕೊಂಡು ನಿಂತಿರುವ ಪರ್ವತಗಳು ಶಾಂತತೆಯನ್ನು ತಮ್ಮ ಸ್ವಂತ ಅಸ್ತಿತ್ವನ್ನಾಗಿಸಿಕೊಂಡಿವೆ. ಇಲ್ಲಿಗೆ ಬರುವ ಪ್ರವಾಸಿಗರಿಗೂ ಕೂಡ ಬೆಟ್ಟಗಳಿಗೆ ಇರುವ ಶಾಂತತೆ ಮತ್ತು ಪ್ರಸನ್ನತೆಯ ಅನುಭವ ಆಗುತ್ತದೆ. ಹಿಮಾಚಲ ಪ್ರದೇಶ ಪ್ರವಾಸಿಗರ ನೆಚ್ಚಿನ ತಾಣವಾದರೂ ಕೂಡ ಇಲ್ಲಿ ಗಲಿಬಿಲಿ, ಗಡಿಬಿಡಿ, ಸದ್ದಗದ್ದಲ ಯಾವುದು ಕೂಡ ಕಾಣಸಿಗುವುದಿಲ್ಲ ಎಲ್ಲ ಕಡೆಯೂ ಶಾಂತ ಪರ್ವತದ ಪರಿಸರವೇ ನಮಗೆ ಕಾಣ ಸಿಗುತ್ತದೆ.

ಇದನ್ನೂ ಓದಿ: ಶ್ರೀರಾಮ ನವಮಿಯಂದೇ ಹುಟ್ಟುಹಬ್ಬ ಆಚರಿಸಿಕೊಂಡ ಅನಂತ್​ ಅಂಬಾನಿ; ಪತ್ನಿ ಹೇಳಿದ್ದೇನು?

ಈ ಎಲ್ಲಾ ಕಾರಣಗಳಿಂದ ಹಿಮಾಚಲ ಪ್ರದೇಶವನ್ನು ನಿದ್ರಾ ಸುಂದರಿ ರಾಜ್ಯ ಎಂದು ಕರೆಯುತ್ತಾರೆ. ಇದು ಸದಾ ಮನುಷ್ಯನೊಬ್ಬ ಗಾಢವಾದ ನಿದ್ದೆಯಲ್ಲಿ ಅನುಭವಿಸುವ ತನ್ಮಯತೆಯ ಅನುಭವವನ್ನು ನೀಡುತ್ತದೆ. ಅತ್ತ ಜಗತ್ತು ವಿಪರೀತ ವೇಗದಲ್ಲಿ, ಗಡಿಬಿಡಿಯಲ್ಲಿ, ವಿನಾಕಾರಣದ ಅವಸರದಲ್ಲಿ ಓಡುತ್ತಿದ್ದರೆ. ಇಲ್ಲಿಯ ಜಗತ್ತು ಅತ್ಯಂತ ಶಾಂತವಾಗಿ, ಪ್ರಶಾಂತವಾಗಿ ಯಾವುದೇ ಸದ್ದುಗದ್ದಲಗಳಿಗೆ ಅವಕಾಶವಿಲ್ಲದೇ ಯಾವುದೇ ಅವಸರವಿಲ್ಲದೇ ನಿಧಾನಗತಿಯಲ್ಲಿ ನಿದ್ರೆಯಲ್ಲಿನ ನಡಿಗೆಯನ್ನು ನಡೆಯುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment