/newsfirstlive-kannada/media/post_attachments/wp-content/uploads/2025/03/LAND-OF-ROTI-1.jpg)
ಭಾರತದ ಪ್ರತಿಯೊಂದು ರಾಜ್ಯವೂ ಒಂದೊಂದು ವಿಷಯಕ್ಕೆ ತನ್ನದೇ ಆದ ಹೆಸರನ್ನು ಗಳಿಸಿಕೊಂಡಿವೆ. ವಿವಿಧ ಬಗೆಯ ಪರಂಪರೆ ಸಂಸ್ಕೃತಿಯಾಚೆಗೂ ಹಲವು ವಿಷಯಗಳಲ್ಲಿ ಬೇರೆಯದ್ದೇ ವಿಷಯಕ್ಕೆ ಗುರುತಿಸಿಕೊಂಡಿವೆ. ಅದು ಬೆಳೆ, ಆಹಾರ, ಕಲೆ, ಸಿನಿಮಾ, ನಾಟಕ ಹೀಗೆ ಅನೇಕ ವಿಚಾರಗಳಲ್ಲಿ ತಮ್ಮದೇ ಆದ ವಿಶಿಷ್ಟ ಗುರುತುಗಳನ್ನು ಹೊಂದಿವೆ. ಅದೇ ರೀತಿ ಭಾರತದ ಒಂದು ರಾಜ್ಯವನ್ನು ಲ್ಯಾಂಡ್ ಆಫ್ ರೋಟಿ ಎಂದು ಕರೆಯಲಾಗುತ್ತದೆ. ಅಂದ್ರೆ ರೊಟ್ಟಿಗಳ ಭೂಮಿ ಎಂದು. ಹೀಗೆ ಕರೆಯಲಾಗುವ ರಾಜ್ಯ ಯಾವುದು?
ಇದನ್ನೂ ಓದಿ:ಬೆಂಗಳೂರಿನಲ್ಲಿ ಪಾಕಿಸ್ತಾನದ ಗೂಢಚಾರ ಸದಸ್ಯ ಅರೆಸ್ಟ್! ಯಾರಿದು ದೀಪರಾಜ್ ಚಂದ್ರನ್?
ಭಾರತದ ಪ್ರತಿ ರಾಜ್ಯಗಳಲ್ಲೂ ವಿಭಿನ್ನವಾದ ರೋಟಿಗಳು ನಮಗೆ ಸಿಗುತ್ತವೆ. ಕರ್ನಾಟಕವನ್ನೇ ನಾವು ಉದಾಹರಣೆಗೆ ತೆಗೆದುಕೊಂಡರೆ ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ, ಸಜ್ಜೆರೊಟ್ಟಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದರೆ ಮೈಸೂರು ಭಾಗದ ಕರ್ನಾಟಕದಲ್ಲಿ ರಾಗಿ ರೊಟ್ಟಿ ಮತ್ತು ಮುದ್ದೆ ಹೆಚ್ಚು ನೆಚ್ಚಿನ ಆಹಾರ. ಇತ್ತ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಬೇರೆಯದ್ದೇ ರೀತಿಯ ರೊಟ್ಟಿಗಳು ನಮಗೆ ಕಾಣಸಿಗುತ್ತವೆ. ಆದ್ರೆ ಭಾರತದ ಒಂದು ರಾಜ್ಯವನ್ನು ರೊಟ್ಟಿಗಳ ನಾಡು ಅಥವಾ ರೊಟ್ಟಿಗಳ ಭೂಮಿ ಎಂದು ಕರೆಯುತ್ತಾರೆ. ಈ ರಾಜ್ಯದಲ್ಲಿ ಅನೇಕ ಬಗೆಯ ರೋಟಿಗಳನ್ನು ತಯಾರಿಸಿ ಸೇವಿಸಲಾಗುತ್ತದೆ. ಆ ರಾಜ್ಯದ ಹೆಸರು ಹರಿಯಾಣ.
ಇದನ್ನೂ ಓದಿ:ಭಾರತದಲ್ಲಿ ಅತಿಹೆಚ್ಚು ದ್ರಾಕ್ಷಿ ಉತ್ಪಾದನೆ ಮಾಡುವ 2ನೇ ಅತಿದೊಡ್ಡ ರಾಜ್ಯ ಕರ್ನಾಟಕ.. ನಂಬರ್ ಒನ್ ಯಾವುದು?
ಹರಿಯಾಣದಲ್ಲಿ ಗೋಧಿ ರೊಟ್ಟಿ, ಸಜ್ಜೆ ರೊಟ್ಟಿ, ಮೆಕ್ಕೆಜೋಳದ ರೊಟ್ಟಿ ಹಾಗೂ ಕಡಲೆಹಿಟ್ಟಿನ ರೊಟ್ಟಿಯನ್ನು ಹೆಚ್ಚು ಮಾಡುತ್ತಾರೆ. ಇಲ್ಲಿ ಮೂರರಿಂದ ನಾಲ್ಕು ಬಗೆಯ ರೋಟಿಗಳು ಹೆಚ್ಚು ಪ್ರಸಿದ್ಧ. ಆಮೇಲೆ ಅತಿಹೆಚ್ಚು ರೊಟ್ಟಿಗಳನ್ನು ಸೇವಿಸುವ ರಾಜ್ಯವೂ ಕೂಡ ಹರಿಯಾಣ. ಇಲ್ಲಿ ಕುಸ್ತಿಪಟುಗಳ ಸಂಖ್ಯೆ ಜಾಸ್ತಿ. ಅವರೆಲ್ಲರೂ ಕೂಡ ರೊಟ್ಟಿ ಪ್ರಿಯರು. ಕುಸ್ತಿಯಾಟದ ಕ್ರೇಜ್ ಇಲ್ಲಿ ಹೆಚ್ಚು. ರೊಟ್ಟಿ ತಿಂದು ಗಟ್ಟಿಯಾಗು ಎಂಬ ಗಾದೆಯನ್ನು ಈ ರಾಜ್ಯ ತಮ್ಮದಾಗಿಸಿಕೊಂಡಿದೆ. ಹೀಗಾಗಿ ಈ ರಾಜ್ಯವನ್ನು ಲ್ಯಾಂಡ್ ಆಫ್ ರೋಟಿ ಎಂದು ಕರೆಯುತ್ತಾರೆ.
ಇಲ್ಲಿ ಅನೇಕ ಬಗೆಯ ರೊಟ್ಟಿಗಳನ್ನು ತಯಾರಿಸಿದರು ಕೂಡ ಹರಿಯಾಣದ ಜನರು ಅತಿಹೆಚ್ಚು ಇಷ್ಟಪಟ್ಟು ತಿನ್ನುವ ರೊಟ್ಟಿ ಯಾವುದು ಗೊತ್ತಾ? ಇಲ್ಲಿಯ ಜನರು ಅತಿಹೆಚ್ಚು ಇಷ್ಟಪಟ್ಟು ತಿನ್ನುವ ರೊಟ್ಟಿ ಅಂದ್ರೆ ಅದು ಸಜ್ಜೆ ಹಾಗೂ ಗೋವಿನಜೋಳದ ಅಂದ್ರೆ ಮೆಕ್ಕೆಜೋಳದ ರೊಟ್ಟಿ. ಇಲ್ಲಿಯ ಜನರು ಈ ಎರಡು ಬಗೆಯ ರೋಟಿಗಳನ್ನು ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಅದು ಅಲ್ಲದೇ ಈ ಎರಡು ರೋಟಿಗಳು ಹರಿಯಾಣ ಜನರ ಪರಂಪರೆಯ ಭಾಗವಾಗಿವೆ. ಶತಮಾನಗಳಿಂದ ಇಲ್ಲಿಯ ಜನ ಸಜ್ಜೆ ಹಾಗೂ ಮೆಕ್ಕೆಜೋಳದ ರೊಟ್ಟಿಯನ್ನು ತಮ್ಮ ಆಹಾರ ಪದ್ಧತಿಯ ಒಂದು ಭಾಗವಾಗಿ ಮಾಡಿಕೊಂಡಿದ್ದಾರೆ. ಸಜ್ಜೆ ರೊಟ್ಟಿಯಲ್ಲಿ ಹೆಚ್ಚು ಖನಿಜಾಂಶಗಳಿದ್ದು ಇದರಂದ ಎಲಬುಗಳು ಗಟ್ಟಿಯಾಗಿ ಉತ್ತಮ ಆರೋಗ್ಯವು ತಮ್ಮದಾಗುತ್ತದೆ. ಅದು ಅಲ್ಲದೇ ಇಲ್ಲಿಯ ಕುಸ್ತಿಪಟುಗಳ ಹಾಗೂ ಪೈಲ್ವಾನರ ನೆಚ್ಚಿನ ರೋಟಿಯೂ ಕೂಡ ಸಜ್ಜೆಯ ರೋಟಿಯೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ