/newsfirstlive-kannada/media/post_attachments/wp-content/uploads/2025/03/COTTON-CROP-3.jpg)
ಹತ್ತಿ, ಭಾರತದ ರೈತರು ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಹತ್ತಿ ಬೆಳೆಯುವ ದೇಶಗಳಲ್ಲಿ ಭಾರತ ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಈ ವಿಷಯದಲ್ಲಿ ಯುಎಸ್​ ಕೂಡ ಭಾರತಕ್ಕಿಂತ ಒಂದು ಸ್ಥಾನದಲ್ಲಿ ಕೆಳಗಿದ್ದರೆ. ಮೊದಲ ಸ್ಥಾನದಲ್ಲಿ ಚೀನಾ ಇದೆ. ಭಾರತದಲ್ಲಿ ಹಲವು ರಾಜ್ಯಗಳಲ್ಲಿ ಹತ್ತಿ ಬೆಳೆಯನ್ನು ಬೆಳೆಯಲಾಗುತ್ತದೆ.
ಈ ಹತ್ತಿ ಬೆಳೆಯಿಂದ ಬಟ್ಟೆ, ಬೆಡ್​, ತಲೆದಿಂಬು ಸೇರಿ ಹಲವು ವಸ್ತುಗಳನ್ನು ನಿರ್ಮಾಣ ಮಾಡಲಾಗುತ್ತದೆ. ಭಾರತದಿಂದ ಅನ್ಯ ದೇಶಗಳಿಗೆ ಪ್ರತಿವರ್ಷ ನೂರಾರು ಕ್ವಿಂಟಲ್ ಹತ್ತಿ ರಫ್ತಾಗುತ್ತದೆ. ಹತ್ತಿ ಬೆಳೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದರೂ ಕೂಡ ಚೀನಾ ಭಾರತದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತದೆ. ಬಾಂಗ್ಲಾದೇಶ ಹಾಗೂ ವಿಯೆಟ್ನಾಮ್ ಕೂಡ ಭಾರತದಿಂದಲೆ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತವೆ. ಆದ್ರೆ ಭಾರತದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯ ಯಾವುದು ಗೊತ್ತಾ?
ಇದನ್ನೂ ಓದಿ: ಕೇಸರಿ ಬಳಿಕ ಅತ್ಯಂತ ದುಬಾರಿ ಹಾಗೂ ಲಾಭ ತಂದು ಕೊಡುವ ಬೆಳೆ ಇದು.. ಕೆಜಿಗೆ ಎಷ್ಟು ಸಾವಿರ ಗೊತ್ತಾ?
ಭಾರತದಲ್ಲಿ ಸುಮಾರು 10 ರಾಜ್ಯಗಳು ಹತ್ತಿ ಬೆಳೆಯನ್ನು ಬೆಳೆಯುತ್ತವೆ. ಅದರಲ್ಲಿ ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರಮುಖವಾಗಿ ಹೆಚ್ಚು ಹತ್ತಿ ಉತ್ಪಾದನೆ ಮಾಡುವ ರಾಜ್ಯಗಳಾಗಿವೆ. ಈ ಎಲ್ಲಾ ರಾಜ್ಯಗಳಿಗೆ ಹೋಲಿಸಿ ನೋಡಿದರೆ. ಗುಜರಾತ್​ ಅತಿ ಹೆಚ್ಚು ಹತ್ತಿ ಬೆಳೆಯಯನ್ನು ಬೆಳೆಯುವ ರಾಜ್ಯವಾಗಿ ಗುರುತಿಸಿಕೊಂಡಿದೆ. ಇದನ್ನು ಭಾರತದ ಹತ್ತಿ ಕಾರ್ಖಾನೆ ಎಂದೇ ಕರೆಯಲಾಗುತ್ತದೆ.
/newsfirstlive-kannada/media/post_attachments/wp-content/uploads/2025/03/COTTON-CROP-2.jpg)
ಗುಜರಾತ್​ನ ನಂತರ ಹೆಚ್ಚು ಹತ್ತಿ ಉತ್ಪಾದನೆ ಎರಡನೇ ರಾಜ್ಯ ಅಂದ್ರೆ ಅದು ಮಹಾರಾಷ್ಟ್ರ. ಗುಜರಾತ್​ನ ಬಳಿಕ ಇಲ್ಲಿಯ ರೈತರು ಅತಿ ಹೆಚ್ಚು ಹತ್ತಿ ಬೆಳೆಯನ್ನು ಬೆಳೆಯುತ್ತಾರೆ. ಈ ರಾಜ್ಯಗಳನ್ನು ಬಿಟ್ಟರೆ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶ ಹತ್ತಿ ಬೆಳೆಯುವ ರಾಜ್ಯಗಳಲ್ಲಿ ಟಾಪ್ 5 ಆಗಿ ಗುರುತಿಸಿಕೊಂಡಿವೆ.
ಇದನ್ನೂ ಓದಿ:ಭಾರತಕ್ಕೆ ಸುವರ್ಣ ಯುಗ.. ಒಡಿಶಾದಲ್ಲಿ 7 ಅಲ್ಲ ಬರೋಬ್ಬರಿ 18 ಕಡೆ ಚಿನ್ನದ ನಿಕ್ಷೇಪಗಳು ಪತ್ತೆ
ಇನ್ನು ಹತ್ತಿ ಬೆಳೆಯುವ ಟಾಪ್​ ಟೆನ್ ರಾಜ್ಯಗಳಲ್ಲಿ ಕರ್ನಾಟಕದ ಕೊಡುಗೆಯೂ ಇದೆ. ಅತಿಹೆಚ್ಚು ಹತ್ತಿ ಬೆಳೆಯುವ ಟಾಪ್ ಟೆನ್ ರಾಜ್ಯಗಳಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಹರಿಯಾಣ, ರಾಜಸ್ಥಾನ, ಪಂಜಾಬ್ ಹಾಗೂ ಓಡಿಶಾಗಳು ಬರುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us