/newsfirstlive-kannada/media/post_attachments/wp-content/uploads/2025/03/FIRST-RAILWAY-STATION.jpg)
ಭಾರತೀಯ ರೈಲ್ವೆಯನ್ನು ಭಾರತದ ಜೀವನಾಡಿ ಎಂದೇ ಕರೆಯಲಾಗುತ್ತದೆ. ಹೀಗೆ ಕರೆದಿದ್ದು ಕೂಡ ಅತಿಶೋಕ್ತಿಯೇನಲ್ಲ.ಇದು ಕಡಿಮೆ ಸಮಯದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಜನರ ತಲುಪಬೇಕಾದ ಸ್ಥಳಕ್ಕೆ ತಲುಪಿಸುತ್ತದೆ ಸಾರಿಗೆ ವ್ಯವಸ್ಥೆ ಇದು. ನಮ್ಮ ದೇಶದಲ್ಲಿ ಸುಮಾರು 13,169 ರಷ್ಟು ಪ್ಯಾಸೆಂಜರ್ ರೈಲುಗಳು 7325 ನಿಲ್ದಾಣಗಳ ಮಧ್ಯೆ ಸಂಚಾರ ಮಾಡುತ್ತವೆ. ನಿತ್ಯ ಸುಮಾರು ಮೂರು ಕೋಟಿಯಷ್ಟು ಜನರು ತಮ್ಮ ಸಂಚಾರಕ್ಕಾಗಿ ರೈಲನ್ನು ಬಳಸುತ್ತಾರೆ. ಇಷ್ಟೊಂದು ಸೇವೆಯನ್ನು ನೀಡುವ ರೈಲು ನಮ್ಮ ದೇಶದ ಸಾರಿಗೆಯ ಜೀವನಾಡಿ ಅಂದ್ರೆ ತಪ್ಪಾಗಲಾರದು. ಆದ್ರೆ ನಿಮಗೆ ಗೊತ್ತಾ ನಮ್ಮ ದೇಶದ ಮೊಟ್ಟ ಮೊದಲ ರೈಲ್ವೆ ನಿಲ್ದಾಣ ಸ್ಥಾಪನೆಯಾಗಿದ್ದು ಎಲ್ಲಿ ಅಂತ? ಅದರ ಹೆಸರು ಏನಿತ್ತು ಅಂತ?
ಇದನ್ನೂ ಓದಿ:ಬಳೆಗಳ ತಯಾರಿಕೆಯಲ್ಲಿ ಅತಿಹೆಚ್ಚು ಪ್ರಸಿದ್ಧಿ ಪಡೆದ ರಾಜ್ಯ ಯಾವುದು? ಬಹುತೇಕ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ
ಬೋರಿಬಂದರ್ ಭಾರತದ ಮೊದಲ ರೈಲ್ವೆ ನಿಲ್ದಾಣವಾಗಿತ್ತು. ಈಗ ಅದನ್ನು ಛತ್ರಪತಿ ಶಿವಾಜಿ ಟರ್ಮಿನಸ್ ಸಿಎಸ್ಟಿ ಎಂದು ಕರೆಯುತ್ತಾರೆ. ಈ ಒಂದು ರೈಲು ನಿಲ್ದಾಣ ಮಹಾರಾಷ್ಟ್ರ ರಾಜ್ಯದಲ್ಲಿದೆ. ಈ ಬೋರಿಬಂದರ್ ರೈಲ್ವೆ ನಿಲ್ದಾಣದ ನಿರ್ಮಾಣವಾಗಿದ್ದು ಸುಮಾರು 1853ರಲ್ಲಿ ಗ್ರೇಟ್ ಇಂಡಿಯನ್ ಪೆನಿನ್ಸೂಲರ್ ರೈಲ್ವೆ (GIPR) ನಿರ್ಮಾಣ ಮಾಡಿತ್ತು.
ಬೋರಿಬಂದರ್ನಿಂದ ಮೊಟ್ಟ ಮೊದಲ ರೈಲು ಪ್ರಯಾಣ ಆಗಿದ್ದು 1953ರಲ್ಲಿ ಮುಂಬೈನ ಬೋರಿಬಂದರ್ ರೈಲು ನಿಲ್ದಾಣದಿಂದ ಥಾಣೆಯವರೆಗೂ ಮೊದಲ ಬಾರಿಗೆ ರೈಲು ಸಂಚಾರ ಕೈಗೊಳ್ಳಲಾಯ್ತು. ನಡುವೆ ಈ ರೈಲ್ವೆ ನಿಲ್ದಾಣದ ಹೆಸರನ್ನು ವಿಕ್ಟೋರಿಯಾ ಟರ್ಮಿನಸ್ ಎಂದು ಕರೆಯಲಾಗುತ್ತಿತ್ತು. 1996ರಲ್ಲಿ ಇದನ್ನು ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಲಾಯ್ತು. 2017ರಲ್ಲಿ ಮತ್ತೆ ಈ ರೈಲ್ವೆ ನಿಲ್ದಾಣಕ್ಕೆ ಛತ್ರಪತಿ ಶಿವಾಜಿ ಟರ್ಮಿನಸ್ ಎಂದು ಹೆಸರನ್ನು ಬದಲಾಯಿಸಲಾಯ್ತು. ಈ ಒಂದು ರೈಲ್ವೆ ನಿಲ್ದಾಣವನ್ನು ನಿರ್ಮಾಣ ಮಾಡಲು ಬರೋಬ್ಬರಿ 9ವರ್ಷಗಳು ಬೇಕಾಗಿದ್ದವು ಎಂದು ಇತಿಹಾಸ ಹೇಳುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ