/newsfirstlive-kannada/media/post_attachments/wp-content/uploads/2023/07/veg.jpg)
ಭಾರತದ ರಾಷ್ಟ್ರ ಪಕ್ಷಿ ಯಾವುದು? ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು? ಹೂವು ಯಾವುದು? ಚಿನ್ಹೆ ಯಾವುದು? ಘೊಷ ವಾಕ್ಯ ಯಾವುದು ಇವೆಲ್ಲವುಗಳ ಬಗ್ಗೆ ಅನೇಕರಿಗೆ ಗೊತ್ತೆ ಇರುತ್ತದೆ. ಹುಲಿ ನಮ್ಮ ರಾಷ್ಟ್ರ ಪ್ರಾಣಿ, ನವಿಲು ನಮ್ಮ ರಾಷ್ಟ್ರ ಪಕ್ಷಿ. ಇವುಗಳ ಬಗ್ಗೆ ನಮ್ಮೆಲ್ಲರಿಗೂ ಬಹುತೇಕ ತಿಳಿದೆ ಇದೆ. ಆದ್ರೆ ಭಾರತದ ರಾಷ್ಟ್ರೀಯ ತರಕಾರಿ ಯಾವುದು ಅಂತ ನಿಮಗೆ ಗೊತ್ತಾ? ಈ ವಿಷಯ ಬಹುತೇಕ ಜನರಿಗೆ ಗೊತ್ತಿರುವುದಿಲ್ಲ. ಅದರ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.
ಭಾರತದ ರಾಷ್ಟ್ರೀಯ ತರಕಾರಿ ಯಾವುದು ಎಂಬ ಪ್ರಶ್ನೆಯನ್ನು ಐಎಎಸ್ ಸಂದರ್ಶನದಲ್ಲಿಯೂ ಕೂಡ ಒಮ್ಮೆ ಕೇಳಲಾಗಿತ್ತು ಎನ್ನಲಾಗುತ್ತದೆ. ಆದರೆ ವಿಪರ್ಯಾಸವೆಂದರೆ ಅನೇಕ ಜನರಿಗೆ ಗೊತ್ತೆ ಇಲ್ಲ ಭಾರತದ ರಾಷ್ಟ್ರೀಯ ತರಕಾರಿ ಯಾವುದು ಅಂತ. ಇದರ ಬಗ್ಗೆ ನಾವು ನಿಮಗೆ ಒಂದು ಹಿಂಟ್ ಕೊಡುತ್ತೇವೆ. ಈ ಒಂದು ತರಕಾರಿ ಸಿಹಿಯಾಗಿರುತ್ತದೆ. ಇದರಿಂದ ಹಲ್ವಾವನ್ನು ಕೂಡ ರೆಡಿಮಾಡಿಕೊಂಡು ತಿನ್ನಬಹುದು. ಈ ತರಕಾರಿಯಿಂದ ರೆಡಿಯಾಗುವ ಹಲ್ವಾ ಅದ್ಭುತ ರುಚಿಯನ್ನು ಹೊಂದಿರುತ್ತದೆ.
ಇಷ್ಟು ಮಾತ್ರವಲ್ಲ ಹಿಂದೂ ಧರ್ಮದಲ್ಲಿ ಈ ತರಕಾರಿಗೆ ವಿಶೇಷ ಸ್ಥಾನಮಾನವಿದೆ. ಪೂಜಾ ಪಾಠದಲ್ಲಿ ಇದನ್ನು ಬಳಸುವುದು ಅತ್ಯುತ್ತಮ ಎಂದೇ ಹೇಳಲಾಗುತ್ತದೆ. ಈ ಒಂದು ತರಕಾರಿ ಅಷ್ಟೊಂದು ದುಬಾರಿಯೂ ಕೂಡ ಇಲ್ಲ. ಇದು ಆರೋಗ್ಯಕ್ಕೆ ತುಂಬಾ ಉತ್ತಮ ಅನೇಕ ವಿಟಮಿನ್ಗಳು ಈ ತರಕಾರಿಯಲ್ಲಿ ಹೇರಳವಾಗಿವೆ. ಅದರಲ್ಲೂ ಅತಿಹೆಚ್ಚು ವಿಟಮಿನ್ ಎ ಹೊಂದಿರುವ ತರಕಾರಿ ಇದು. ಈ ತರಕಾರಿ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಇದನ್ನೂ ಓದಿ:ಅಬು ಅಜ್ಮಿ ಮತ್ತೊಂದು ವಿವಾದ.. ಆತನನ್ನು ನಮ್ಮಲ್ಲಿಗೆ ಕಳಿಸಿ ಉಪಚಾರ ಮಾಡ್ತೇವೆಂದ ಯೋಗಿ..!
ಈ ಒಂದು ತರಕಾರಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ. ಈ ತರಕಾರಿಯನ್ನು ತೂಕ ಇಳಿಸಿಕೊಳ್ಳಲು ಹಾಗೂ ಸಕ್ಕರೆ ಕಾಯಿಲೆಯಿಂದ ದೂರ ಇರಲು ಕೂಡ ಬಳಸುತ್ತಾರೆ. ಕೊಲೆಸ್ಟ್ರಾಲ್ ಕರಗಿಸಲು ಸಹ ಈ ತರಕಾರಿ ಉತ್ತಮವಾದ ಆಹಾರ. ಇನ್ನು ಈ ತರಕಾರಿಯ ಬೀಜಗಳು ಕೂಡ ಅನೇಕ ಆರೋಗ್ಯಕರ ಲಾಭಗಳನ್ನು ನೀಡುತ್ತವೆ. ಇವುಗಳನ್ನು ಸುಟ್ಟು ತಿನ್ನುವ ರೂಢಿ ಕೂಡ ಇದೆ. ಇನ್ನು ಒಂದು ವಿಶೇಷವೆಂದರೆ ಈ ತರಕಾರಿಯನ್ನು ನಾವು ತಿಂಗಳಾನುಗಟ್ಟಲೇ ಇಟ್ಟರು ಕೆಡುವುದಿಲ್ಲ. ಅದನ್ನು ಫ್ರಿಡ್ಜ್ನಲ್ಲಿ ಇಡಬೇಕಾದ ಅವಶ್ಯಕತೆಯೂ ಕೂಡ ಇರುವುದಿಲ್ಲ
ಇದನ್ನೂ ಓದಿ:ಹೆಂಡತಿ ನನ್ನ ಎದೆ ಮೇಲೆ ಕುಳಿತು ರಕ್ತ ಕುಡಿಯಲು ಬರ್ತಾಳೆ.. ಕಷ್ಟ ಹೇಳಿಕೊಂಡ ಕಾನ್ಸ್‌ಟೇಬಲ್‌ಗೆ ಸಂಕಷ್ಟ!
ಇಷ್ಟೆಲ್ಲಾ ಸುಳಿವು ಕೊಟ್ಟರು ನಿಮಗೆ ಆ ತರಕಾರಿಯ ಹೆಸರು ಗೊತ್ತಾಗುತ್ತಿಲ್ಲ ಅಂದ್ರೆ ಬಿಡಿ ನಾವೇ ಹೇಳ್ತೀವಿ. ಭಾರತದ ರಾಷ್ಟ್ರೀಯ ತರಕಾರಿ ಎಂದು ಗುರುತಿಸಿಕೊಂಡಿದ್ದು ಕುಂಬಳಕಾಯಿ. ಇದನ್ನು ಇಂಗ್ಲಿಷ್ನಲ್ಲಿ ಪಂಪ್ಕಿನ್ ಎಂದು ಕೂಡ ಕರೆಯುತ್ತಾರೆ. ಈ ಪಂಪ್ಕಿನ್ ನಮ್ಮ ಭಾರತದ ರಾಷ್ಟ್ರೀಯ ತರಕಾರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ