/newsfirstlive-kannada/media/post_attachments/wp-content/uploads/2025/03/LARGEST-DISTRICT.jpg)
ಭಾರತದಲ್ಲಿ ಅತಿಹೆಚ್ಚು ಜಿಲ್ಲೆಗಳನ್ನು ಹೊಂದಿರುವ ರಾಜ್ಯ ಅಂದ್ರೆ ಅದು ಉತ್ತರಪ್ರದೇಶ. ದೇಶದ ಅತ್ಯಂತ ಹೆಚ್ಚು ಜಿಲ್ಲೆಗಳನ್ನು ಉತ್ತರಪ್ರದೇಶ ಹೊಂದಿದೆ. ಉತ್ತರಪ್ರದೇಶದಲ್ಲಿ ಒಟ್ಟು 75 ಜಿಲ್ಲೆಗಳಿವೆ. ಆದರೆ ಈ ದೇಶದಲ್ಲಿ ಅತಿದೊಡ್ಡ ಜಿಲ್ಲೆಯೊಂದಿದೆ. ಅದರ ವಿಸ್ತೀರ್ಣ ನಮ್ಮ ದೇಶದ ಕೆಲವು 9 ರಾಜ್ಯಗಳಿಗಿಂತ ಹೆಚ್ಚು. ಆದ್ರೆ ಅದು ಉತ್ತರಪ್ರದೇಶದಲ್ಲಿ ಇಲ್ಲ. ಅದು ಇರೋದು ಗುಜರಾತ್ನಲ್ಲಿ. ದೇಶದಲ್ಲಿಯೇ ಅತ್ಯಂತ ಜಿಲ್ಲೆ ಎಂದು ಕರೆಸಿಕೊಳ್ಳುವ ಜಿಲ್ಲೆ ಪಶ್ಚಿಮ ದಿಕ್ಕಿನಲ್ಲಿರುವ ಗುಜರಾತ್ನಲ್ಲಿದೆ. ಈ ದೇಶದಲ್ಲಿ ಸುಮಾರು 28 ರಾಜ್ಯಗಳಿವೆ. ಆಡಳಿತ ಸುಗಮವಾಗಿ ನಡೆಯಲು ಎಂದು ಅವುಗಳ ವಿಸ್ತಿರ್ಣಕ್ಕೆ ತಕ್ಕಂತೆ ಜಿಲ್ಲೆಗಳನ್ನು ನೀಡಲಾಗಿದೆ. ದೇಶದಲ್ಲಿ ಸುಮಾರು 800ಕ್ಕೂ ಅಧಿಕ ಜಿಲ್ಲೆಗಳಿವೆ. ಆದ್ರೆ ಭಾರತದಲ್ಲಿಯೇ ಅತಿ ದೊಡ್ಡದಾದ ಜಿಲ್ಲೆ ಇರುವುದು ಎಲ್ಲಿ ಗೊತ್ತಾ?
ಕಚ್ ಗುಜರಾತ್ಗೆ ಮಾತ್ರವಲ್ಲ ಇಡೀ ದೇಶದಲ್ಲಿಯೇ ಅತ್ಯಂತ ದೊಡ್ಡದಾದ ಜಿಲ್ಲೆ. ಈಗಾಗಲೇ ಹೇಳಿದಂತೆ ದೇಶದ ಒಟ್ಟು 9 ರಾಜ್ಯಗಳ ವಿಸ್ತೀರ್ಣಕ್ಕಿಂತ ಈ ಜಿಲ್ಲೆಯ ವಿಸ್ತೀರ್ಣ ದೊಡ್ಡದು. ಈ ಜಿಲ್ಲೆಯ ಒಟ್ಟು ವಿಸ್ತೀರ್ಣ ಸುಮಾರು 220.32 ಕಿಲೋ ಮೀಟರ್ ಉದ್ದ ಹಾಗೂ 376.80 ಕಿಮೀ ಅಗಲವಿದೆ. ಗುಜರಾತ್ನ ಶೇಕಡಾ 23.27ರಷ್ಟು ಭೂಮಿ ಕಚ್ ಜಿಲ್ಲೆಯೊಂದರಲ್ಲಿಯೇ ಇದೆ.
ಇದನ್ನೂ ಓದಿ:ವಿಶ್ವದಲ್ಲಿಯೇ ಅತ್ಯಂತ ಪರಿಶುದ್ಧ ಗಾಳಿಯನ್ನು ಹೊಂದಿದ ದೇಶಗಳು ಯಾವುವು? ಭಾರತ ಎಷ್ಟನೇ ಸ್ಥಾನದಲ್ಲಿದೆ?
ಈ ಒಂದು ಜಿಲ್ಲೆ ಕೇರಳ, ಹರಿಯಾಣ, ಗೋವಾ, ಸಿಕ್ಕಿಂ, ನಾಗಾಲ್ಯಾಂಡ್, ತ್ರಿಪುರಾ, ಮಿಜೋರಾಂ, ಮಣಿಪುರ, ಮತ್ತು ಮೇಘಾಲಯ ರಾಜ್ಯಗಳಿಗಿಂತ ದೊಡ್ಡದು. ಅಷ್ಟು ವಿಸ್ತೀರ್ಣವಾಗಿ ಈ ಜಿಲ್ಲೆ ಗುಜರಾತ್ನಲ್ಲಿ ಹರಡಿಕೊಂಡಿದೆ. ಕಚ್ ಒಂದು ಅಕ್ಷರಶಃ ಮರುಭೂಮಿ. ಕಚ್ ಪದದ ಅರ್ಥ ಒಣಗಿದ, ಶುಷ್ಕ ಎಂಬ ಅರ್ಥ ಬರುತ್ತದೆ. ಅರಬಿ ಸಮುದ್ರವನ್ನು ಸುತ್ತುವರಿದಿರುವ ಈ ಜಿಲ್ಲೆ, ಪಾಕಿಸ್ತಾನದ ಗಡಿಗೆ ತುಂಬಾ ಹತ್ತಿರವಾದಿದೆ. ಕಚ್ನಲ್ಲಿರುವ ಜನಸಂಖ್ಯೆ 2011ರ ಪ್ರಕಾರ 2,09,2371 ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ