/newsfirstlive-kannada/media/post_attachments/wp-content/uploads/2025/07/JOB_PHOTO.jpg)
ಪ್ರತಿಯೊಬ್ಬ ಇಂಜಿನಿಯರ್ಗೂ ವಿದೇಶದಲ್ಲಿ ಕೆಲಸ ಮಾಡೋ ಆಸೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಇಂಜಿನಿಯರ್ಸ್ ಭಾರತದ ಹೊರಗೆ ಹೋಗಿ ಕೆಲಸ ಹುಡುಕುತ್ತಿದ್ದಾರೆ. ಫಾರಿನ್ಗೆ ದುಡಿಯೋಕೆ ಹೋದ್ರೆ ವೃತ್ತಿ ಬೆಳವಣಿಗೆ ಜತೆಗೆ ಆದಾಯದ ಮೂಲವೂ ಹೆಚ್ಚುತ್ತದೆ ಅನ್ನೋದು ಎಲ್ಲರ ಪ್ಲಾನ್. ಕೆಲಸದ ದೃಷ್ಟಿಕೋನದಿಂದ ನೋಡಿದ್ರೆ ವಿದೇಶದಲ್ಲಿ ಕೆಲಸ ಮಾಡೋದು ಒಳ್ಳೆಯದೇ. ಇದೇ ಹೊತ್ತಲ್ಲಿ ಇಂಜಿನಿಯರ್ಸ್ಗೆ ಜಾಬ್ ಮಾಡೋಕೆ ಭಾರತ ಬೆಸ್ಟಾ ಅಥವಾ ದುಬೈ ಬೆಸ್ಟಾ? ಅನ್ನೋ ಡಿಬೇಟ್ ಶುರುವಾಗಿದೆ.
6 ವರ್ಷಗಳ ಅನುಭವ ಹೊಂದಿರೋ ಬ್ಯಾಕ್‌ಎಂಡ್ ಡೆವಲಪರ್ ಒಬ್ಬರಿಗೆ ದುಬೈ ಮತ್ತು ಭಾರತ ಎರಡು ದೇಶಗಳಿಂದಲೂ ಜಾಬ್ ಆಫರ್ ಬಂದಿದೆ. ದುಬೈನಲ್ಲಿ 50 ಲಕ್ಷ ಮತ್ತು ಭಾರತದಲ್ಲಿ ₹33 ಲಕ್ಷ ಪ್ಯಾಕೇಜ್ ಸಿಕ್ಕಿದ್ದು, ಎಲ್ಲಿ ಕೆಲಸಕ್ಕೆ ಹೋದ್ರೆ ಬೆಸ್ಟ್ ಎಂಬ ಗೊಂದಲದಲ್ಲಿ ಸಲಹೆ ಕೇಳಿದರು. ಇದಕ್ಕೀಗ ಕೊನೆಗೂ ಉತ್ತರ ಸಿಕ್ಕಿದ್ದು, ಮುಂದೆ ವಿದೇಶದಲ್ಲಿ ಕೆಲಸ ಮಾಡಬೇಕು ಅನ್ನೋ ಇಂಜಿನಿಯರ್ಸ್ಗೆ ಇದು ಒಂದು ಕ್ಲ್ಯಾರಿಟಿ ನೀಡುತ್ತದೆ.
ಇನ್ನೂ ಕೆಲಸ ಮಾಡಲು ಭಾರತ ಅಥವಾ ದುಬೈ ಬೆಸ್ಟಾ?
ನನಗೆ ದುಬೈನಿಂದ 50 ಲಕ್ಷ ಸಂಬಳದ ಆಫರ್ ಬಂದಿದೆ, ಹೋಗಬಹುದೇ? ಎಂದು ಬ್ಯಾಕ್‌ಎಂಡ್ ಡೆವಲಪರ್ ಒಬ್ಬರು ರೆಡ್ಡಿಟ್‌ನಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ವೈರಲ್ ಆದ ಕಾರಣ ಭಾರತ ಮತ್ತು ದುಬೈ ಆಫರ್‌ಗಳ ನಡುವಿನ ವ್ಯತ್ಯಾಸದ ಬಗ್ಗೆ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆ ನಡೆದಿದೆ.
ವಾರ್ಷಿಕವಾಗಿ 23 ಲಕ್ಷ ರೂಪಾಯಿ ಸಂಬಳ
ಸದ್ಯ ಈ ಎಂಜಿನಿಯರ್ ಭಾರತದಲ್ಲಿ ವಾರ್ಷಿಕ ₹23 ಲಕ್ಷ ಸಂಬಳ ಪಡೆಯುತ್ತಿದ್ದಾರೆ. ಈಗ ಇವರಿಗೆ 2 ಆಫರ್ಗಳಿವೆ. ಒಂದು ದುಬೈ ಆಫರ್, ಇವ್ರ ಪ್ರಕಾರ ತಿಂಗಳಿಗೆ AED 18,000 ಅಂದ್ರೆ 50 ಲಕ್ಷ ಸಂಬಳ ನೀಡಲಾಗುತ್ತದೆ. ಯಾವುದೇ ಟ್ಯಾಕ್ಸ್ ಕಟ್ ಆಗದೆ ಇದು 50 ಲಕ್ಷ ಆಗುತ್ತದೆ. ಈ ಪ್ಯಾಕೇಜ್‌ನಲ್ಲೇ ಇಂಜಿನಿಯರ್ ಆರೋಗ್ಯ ವಿಮೆ, ಪ್ರಯಾಣ ವೆಚ್ಚ ಹಾಗೂ ವರ್ಷಕ್ಕೆ AED 1,500 ವಿಮಾನ ಭತ್ಯೆ ಎಲ್ಲವೂ ಒಳಗೊಂಡಿದೆ. ಆದರೆ, ಈ ಆಫರ್ನಲ್ಲಿ ತನ್ನ ಫ್ಯಾಮಿಲಿ ಮೆಂಬರ್ಸ್ಗೆ ಯಾವುದೇ ವಸತಿ ಅಥವಾ ವಿಮೆಗಳನ್ನು ಒಳಗೊಂಡಿಲ್ಲ.
ಇನ್ನೊಂದೆಡೆ ಭಾರತೀಯ ಕಂಪನಿ ನೀಡಿರೋ ಆಫರ್. ಇದು ವಾರ್ಷಿಕ ₹33 ಲಕ್ಷ ಪ್ಯಾಕೇಜ್. ಹೈಬ್ರಿಡ್ ಕೆಲಸದ ಮಾದರಿ. ಪೋಷಕರು ಸೇರಿದಂತೆ ಫ್ಯಾಮಿಲಿ ಮೆಂಬರ್ಸ್ಗೆ ಆರೋಗ್ಯ ವಿಮೆ ಇದೆ. ವರ್ಕ್ ಫ್ರಮ್ ಹೋಮ್ ಆಪ್ಷನ್ ಕೂಡ ಇದೆ. ವರ್ಕ್ ಲೈಫ್ ಬ್ಯಾಲೆನ್ಸ್ ಮಾಡಬಹುದು. ಹಾಗಾಗಿ ನಿಮ್ಮ ಸಜೆಷನ್ ಏನು ಎಂದು ಕೇಳಿದ್ದರು. ಇದಕ್ಕೆ ಹಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಇದನ್ನೂ ಓದಿ: MG MOTORS ಇಂದ ಮೊದಲ EV ರೋಡ್ಸ್ಟರ್ ಕಾರು.. ಎಲ್ಲರೂ ಕೊಂಡುಕೊಳ್ಳಬಹುದಾ?
ನೀವು ಒಂಟಿಯಾಗಿದ್ದರೆ AED 10,000-12,000 ನಲ್ಲಿ ದುಬೈನಲ್ಲಿ ಜೀವನ ನಡೆಸಬಹುದು. ಭಾರತದಲ್ಲಿ ತೆರಿಗೆ ನಂತರ ತಿಂಗಳಿಗೆ ₹2 ಲಕ್ಷ ಸಿಗುತ್ತದೆ. ನೀವು ಒಂಟಿಯಾಗಿದ್ರೆ ದುಬೈ ಬೆಸ್ಟ್, ಫ್ಯಾಮಿಲಿ ಇದ್ರೆ ಭಾರತವೇ ಬೆಸ್ಟ್ ಎಂದಿದ್ದಾರೆ.
ರೂ. 33 ಲಕ್ಷದ ಭಾರತದ ಆಫರ್ ಬೆಸ್ಟ್ ಅನಿಸುತ್ತಾ?
ಅಷ್ಟೇ ಅಲ್ಲ, ದುಬೈಗೆ ಹೋಗೋದಾದ್ರೆ ಫ್ರೀ ಫುಡ್ ಅಂಡ್ ಅಕಾಮಡೇಷನ್ ಇರಬೇಕು. ಇಲ್ಲದಿದ್ದರೆ ನಿಮಗೆ ಸಿಗೋ AED 18,000 ಸಂಬಳ ಕೆಲವೇ ತಿಂಗಳಲ್ಲಿ ಖರ್ಚಾಗಿ ಹೋಗುತ್ತದೆ. ನನ್ನ ದೃಷ್ಟಿಯಿಂದ, ಭಾರತೀಯ ಆಫರ್ ಉತ್ತಮವಾಗಿದೆ ಎಂದಿದ್ದಾರೆ. ಯಾರಿಗೆ ಆಗಲಿ 50 ಲಕ್ಷದ ದುಬೈ ಆಫರ್ ಬೆಸ್ಟ್ ಎನಿಸಬಹುದು. ಆದರೆ, ಖರ್ಚು ವೆಚ್ಚ ಮತ್ತು ಫ್ಯಾಮಿಲಿ ಅಂತಾ ನೋಡಿದಾಗ 33 ಲಕ್ಷದ ಭಾರತದ ಆಫರ್ ಬೆಸ್ಟ್ ಅನಿಸುತ್ತದೆ. ಕಾರಣ ಫ್ಯಾಮಿಲಿ ಜತೆಗೆ ಟೈಮ್ ಸ್ಪೆಂಡ್ ಮಾಡಬಹುದು. ವರ್ಕ್ ಲೈಫ್ ಬ್ಯಾಲೆನ್ಸ್ ಕೂಡ ಆಗುತ್ತೆ ಎನ್ನುವುದು ಬಹುತೇಕರ ಅಭಿಪ್ರಾಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ