Advertisment

ಭಾರತದ ರಾಷ್ಟ್ರೀಯ ಆಹಾರ ಯಾವುದು ಗೊತ್ತಾ? ಈ ಭೋಜನವನ್ನೇ ಆಯ್ಕೆ ಮಾಡಲು ಕಾರಣವೇನು?

author-image
Gopal Kulkarni
Updated On
ಭಾರತದ ರಾಷ್ಟ್ರೀಯ ಆಹಾರ ಯಾವುದು ಗೊತ್ತಾ? ಈ ಭೋಜನವನ್ನೇ ಆಯ್ಕೆ ಮಾಡಲು ಕಾರಣವೇನು?
Advertisment
  • ಭಾರತದ ರಾಷ್ಟ್ರೀಯ ಆಹಾರವೆಂದು ಯಾವುದನ್ನು ಕರೆಯುತ್ತಾರೆ?
  • ಈ ಒಂದು ಭೋಜನ ರಾಷ್ಟ್ರೀಯ ಆಹಾರ ಆಗುವುದಕ್ಕೆ ಕಾರಣವೇನು?
  • ಮಹಾಭಾರತದಿಂದ ಮೊಘಲರ ಕಾಲದವರೆಗೂ ಪ್ರಸಿದ್ಧಿ ಪಡೆದ ಆಹಾರ

ಭಾರತ ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಪಕ್ಷಿ, ರಾಷ್ಟ್ರೀಯ ಹೂವು, ರಾಷ್ಟ್ರಗೀತೆ, ರಾಷ್ಟ್ರಧ್ವಜ ಇವುಗಳೆಲ್ಲಗಳ ಬಗ್ಗೆ ನಮಗೆ ಗೊತ್ತು. ಆದ್ರೆ ಭಾರತೀಯ ರಾಷ್ಟ್ರೀಯ ಆಹಾರ ಯಾವುದು ಎಂಬುದು ನಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲ. ಭಾರತದಲ್ಲಿ ಆಹಾರ ಪದ್ಧತಿ ರಾಜ್ಯ ರಾಜ್ಯಗಳ ನಡುವೆ ಭಿನ್ನವಾಗಿದೆ. ಅದು ಸಸ್ಯಾಹಾರಿ ಆಹಾರವಾಗಿರಬಹುದು ಇಲ್ಲವೇ ಮಾಂಸಾಹಾರ ಆಹಾರವಾಗಿರಬಹುದು. ಭಿನ್ನ ರುಚಿ, ತಯಾರಿಕೆಯಲ್ಲಿ ಭಿನ್ನತೆಗಳನ್ನು ನಾವು ಕಾಣುತ್ತೇವೆ. ಹೀಗಿರುವಾಗ ಭಾರತದ ರಾಷ್ಟ್ರೀಯ ಆಹಾರ ಯಾವುದು ಅಂತ ಗುರುತಿಸುವುದು ಕಷ್ಟವೇ. ಆದರೆ ಒಂದು ಆಹಾರ ಭಾರತೀಯ ರಾಷ್ಟ್ರೀಯ ಆಹಾರ ಎಂದು ಗುರುತಿಸಿಕೊಂಡಿದೆ.

Advertisment

ಭಾರತದ ರಾಷ್ಟ್ರೀಯ ಭೋಜನ ಅಥವಾ ಆಹಾರವೆಂದು ಕಿಚಡಿಯನ್ನು ಗುರುತಿಸಲಾಗುತ್ತದೆ. ಕಿಚಡಿ ಭಾರತದ ರಾಷ್ಟ್ರೀಯ ಆಹಾರ. ಕಿಚಡಿಯ ಲೋಕಪ್ರಿಯತೆ ಹಾಗೂ ಹಾಗೂ ಅದರ ಹಿಂದಿರುವ ಸಾಂಸ್ಕೃತಿಕ ಪರಂಪರೆಯನ್ನು ಗಣನೆಗೆ ತೆಗೆದುಕೊಂಡು ರಾಷ್ಟ್ರೀಯ ಆಹಾರ ಎಂದು ಘೋಷಿಸಲಾಗಿದೆ. ಇದು ಅಕ್ಕಿ ಮತ್ತು ಬೇಳೆಯಿಂದ ತಯಾರಿಸಲಾಗುವ ಅತ್ಯಂತ ಸರಳ ಆಹಾರ ಮತ್ತು ಇದು ದೇಶದಲ್ಲಿ ವಿವಿಧ ಶೈಲಿಯಲ್ಲಿ, ವಿವಿಧ ಸ್ವಾಧದಲ್ಲಿ ತಯಾರಾಗುತ್ತದೆ.

publive-image

ಇನ್ನು ಕಿಚಡಿಯಲ್ಲಿ ಪ್ರೋಟಿನ್ ಮತ್ತು ಕಾರ್ಬೋಹೈಡ್ರೆಡ್​ ಅಂಶ ಹೇರಳವಾಗಿ ಸಿಗುತ್ತದೆ. ಅದರಲ್ಲೂ ಭಾರತದಲ್ಲಿರುವ ಮಕ್ಕಳು ಅತ್ಯಂತ ಆರೋಗ್ಯಕರವಾದ ತಿನ್ನುಲು ಶುರು ಮಾಡುವ ಆಹಾರ ಕೂಡ ಇದೇ ಕಿಚಡಿಯಾಗಿದೆ. ಕಿಚಡಿಯನ್ನು ಮಾಡುವ ವಿಧಾನ ಹಾಗೂ ಸಿದ್ಧಗೊಳಿಸುವ ಸಮಯ ಎರಡು ಕಡಿಮೆ ಶ್ರಮವನ್ನೊಳಗೊಂಡಿದೆ. ಇದನ್ನು ಸರಳವಾಗಿ, ಹೆಚ್ಚು ಮಸಾಲೆ ಬಳಕೆಯಿಲ್ಲದೇ ಈ ಭೋಜನವನ್ನು ಸಿದ್ಧಗೊಳಿಸಬಹುದು.

ಇನ್ನು ಇದರ ಸಾಂಸ್ಕೃತಿಕ ಪರಂಪರೆಯನ್ನು ನೋಡುವುದಾದ್ರೆ. ಈ ಒಂದು ಕಿಚಡಿ ಒಂದೇ ಪ್ರದೇಶಕ್ಕೆ ಸೀಮಿತವಾಗದೇ ಭಾರತದ ಎಲ್ಲಾ ಕಡೆಯಲ್ಲೂ ಸಿದ್ಧಗೊಳ್ಳುವುದರಿಂದ ಒಂದು ರೀತಿಯಲ್ಲಿ ಇದು ಇಡೀ ಭಾರತದ ಐಕ್ಯತೆಯ ಗುರುತಾಗಿದ್ದು. ಈ ಕಾರಣದಿಂದ ಇದನ್ನು ರಾಷ್ಟ್ರೀಯ ಭೋಜನ ಎಂದು ಘೋಷಿಸಲಾಗಿದೆ.

Advertisment

publive-image

ಇನ್ನು ಭಾರತದ ಮಹಾಕಾವ್ಯವಾಗಿರುವ ಮಹಾಭಾರತದಲ್ಲಿಯೂ ಕೂಡ ಕಿಚಡಿಯ ಉಲ್ಲೇಖವಿದೆ. 16ನೇ ಶತಮಾನದಲ್ಲಿ ಕಿಚಡಿ ಭಾರತದ ಗ್ರಾಮೀಣ ಜನರ ಹಾಗೂ ಪಟ್ಟಣದಲ್ಲಿರುವ ಕಾರ್ಮಿಕರ ನೆಚ್ಚಿನ ಆಹಾರವಾಗಿತ್ತು ಎಂದು ಕೂಡ ಹೇಳಲಾಗುತ್ತದೆ. ಇನ್ನು ಮೊಘಲರ ಆಳ್ವಿಕೆಯಲ್ಲಿ ಕಿಚಡಿಯ ಪ್ರಾಮುಖ್ಯತೆ ಇನ್ನೂ ಹೆಚ್ಚಿತು. ಇವೆಲ್ಲಾ ಕಾರಣಗಳನ್ನು ಗಣನೆಗೆ ತೆಗೆದುಕೊಂಡು ಕಿಚಡಿಯನ್ನು ಭಾರತದ ರಾಷ್ಟ್ರೀಯ ಆಹಾರ ಎಂದು ಕರೆಯಲಾಗುತ್ತದೆ.

publive-image

ಕಿಚಡಿಯ ಹೊರತಾಗಿಯೂ ಭಾರತದ ಪ್ರಸಿದ್ಧ ಭೋಜನಗಳ ಪಟ್ಟಿಯಲ್ಲಿ ಅನೇಕ ಆಹಾರಗಳು ಬರುತ್ತವೆ. ಬಿರಿಯಾನಿ, ದೋಸಾ, ಬಟರ್ ಚಿಕನ್, ಇಡ್ಲಿ, ಪರೋಟಾ, ತಂದೂರಿ ಚಿಕನ್, ವಡಪಾವ್, ಮೋಮೊಸ್, ರಸಗುಲ್ಲಾ ಮತ್ತು ಚೋಲೆ ಬಟೂರೇ ಕೂಡ ಭಾರತದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಆಹಾರಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment