ಭಾರತದಲ್ಲಿರುವ ಅತ್ಯಂತ ಶ್ರೀಮಂತ ರೈಲ್ವೆ ನಿಲ್ದಾಣ ಯಾವುದು..? ಮುಂಬೈ, ಚೆನ್ನೈ, ಬೆಂಗಳೂರಲ್ಲ! ಮತ್ತೆ ಎಲ್ಲಿದೆ?

author-image
Gopal Kulkarni
Updated On
ಭಾರತದಲ್ಲಿರುವ ಅತ್ಯಂತ ಶ್ರೀಮಂತ ರೈಲ್ವೆ ನಿಲ್ದಾಣ ಯಾವುದು..? ಮುಂಬೈ, ಚೆನ್ನೈ, ಬೆಂಗಳೂರಲ್ಲ! ಮತ್ತೆ ಎಲ್ಲಿದೆ?
Advertisment
  • ಭಾರತದಲ್ಲಿ ಅತಿಹೆಚ್ಚು ಆದಾಯ ಗಳಿಸುವ ರೈಲ್ವೆ ನಿಲ್ದಾಣ ಯಾವುದು ಗೊತ್ತಾ?
  • ಈ ರೈಲ್ವೆ ನಿಲ್ದಾಣದಲ್ಲಿ ಪ್ರತಿ ವರ್ಷ ಎಷ್ಟು ಕೋಟಿ ಜನ ಪ್ರಯಾಣ ಮಾಡುತ್ತಾರೆ ?
  • ಈ ರೈಲ್ವೆ ಸ್ಟೇಷನ್ ವಾರ್ಷಿಕವಾಗಿ ಗಳಿಸುವ ಆದಾಯವಂತೂ ಬೆಚ್ಚಿ ಬೀಳಿಸುತ್ತೆ?

ಭಾರತ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ರೈಲ್ವೆ ಸಂಪರ್ಕ ಹೊಂದಿರುವ 5ನೇ ರಾಷ್ಟ್ರ ಎಂಬುದು ನಿಮಗೆ ಗೊತ್ತಿದೆ. ಭಾರತೀಯ ರೈಲ್ವೆ ಒಟ್ಟು 7308 ರೈಲ್ವೆ ನಿಲ್ದಾಣಗಳನ್ನು ದೇಶಾದ್ಯಂತ ನಿರ್ವಹಣೆ ಮಾಡುತ್ತದೆ. ನಿತ್ಯ ಸುಮಾರು 13 ಸಾವಿರಕ್ಕೂ ಹೆಚ್ಚು ರೈಲುಗಳು ಓಡಾಡುತ್ತವೆ. ನಿತ್ಯ ಕನಿಷ್ಠ ಎಂದರು 2 ಕೋಟಿ ಜನರು ಈ ದೇಶದಲ್ಲಿ ರೈಲು ಪ್ರಯಾಣ ಮಾಡುತ್ತಾರೆ.ರೈಲ್ವೆ ಸಾರಿಗೆ ಮೂಲಕವೇ ಭಾರತ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಸಂಪಾದಿಸುತ್ತದೆ. ಕೇವಲ ಪ್ರಯಾಣಿಕರಿಂದ ಮಾತ್ರವಲ್ಲ ರೈಲ್ವೆ ನಿಲ್ದಾಣದಲ್ಲಿರುವ ಅಂಗಡಿಗಳಿಂದ ಹಾಗೂ ಪ್ಲಾಟ್​ಫಾರ್ಮ್ ಟಿಕೆಟ್​ಗಳಿಂದ ಹೀಗೆ ಹಲವು ಮೂಲಗಳಿಂದಲೂ ಆದಾಯ ಗಳಿಸುತ್ತದೆ. ವಿಶ್ವದ ಅತ್ಯಂತ ಶ್ರೀಮಂತ ರೈಲ್ವೆ ಸಾರಿಗೆಯಲ್ಲಿ ಭಾರತವೂ ಕೂಡ ಒಂದು. ಆದ್ರೆ ನಿಮಗೆ ಒಂದು ವಿಷಯ ಗೊತ್ತಾ ಭಾರತದ ಅತ್ಯಂತ ಶ್ರೀಮಂತ ರೈಲ್ವೆ ನಿಲ್ದಾಣ ಯಾವುದು ಮತ್ತು ಎಲ್ಲಿದೆ ಅಂತ

ಶ್ರೀಮಂತ ರೈಲ್ವೆ ನಿಲ್ದಾಣ ಅಂದ್ರೆ ನಮ್ಮ ಕಣ್ಣ ಮುಂದೆ ಬರುವುದು ದೇಶದ ದೊಡ್ಡ ದೊಡ್ಡ ನಗರಗಳಾದ ಬೆಂಗಳೂರು, ಮುಂಬೈ, ಅಹ್ಮದಾಬಾದ್, ಚೆನ್ನೈ ಈ ತರಹದ ರೈಲ್ವೆ ನಿಲ್ದಾಣಗಳು. ಆದ್ರೆ ಇವು ಯಾವುವು ಅಲ್ಲ. ಆದ್ರೆ ಅದು ಕೂಡ ಒಂದು ದೇಶದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದು. 2023-24ರ ಪ್ರಕಾರ ಈ ಒಂದು ರೈಲ್ವೆ ನಿಲ್ದಾಣ ಸುಮಾರು 3,337 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ ಎಂದು ರೈಲ್ವೆ ಇಲಾಖೆಯಲ್ಲಿ ಮಾಹಿತಿಗಳು ದೊರೆಯುತ್ತವೆ. ಆ ರೈಲ್ವೆ ನಿಲ್ದಾಣ ಮತ್ಯಾವುದು ಅಲ್ಲ. ರಾಷ್ಟ್ರ ರಾಜಧಾನಿ ನವದೆಹಲಿ ರೈಲ್ವೆ ನಿಲ್ದಾಣ.

publive-image

ಇದನ್ನೂ ಓದಿ:ಭಾರತದ ಮತ್ತೊಂದು ರಾಜ್ಯದಲ್ಲಿ ಸಿಕ್ಕಿದೆ ಅಪಾರ ಬಂಗಾರದ ನಿಕ್ಷೇಪ ಪತ್ತೆ.. ಯಾವ ರಾಜ್ಯ ಅಂತ ಗೊತ್ತಾ?

ನವದೆಹಲಿ ರೈಲ್ವೆ ನಿಲ್ದಾಣವು ಭಾರತದ ಉಳಿದ ರೈಲ್ವೆ ನಿಲ್ದಾಣಕ್ಕಿಂತ ಅತಿಹೆಚ್ಚು ಪ್ರಯಾಣಿರಿಂದ ತುಂಬಿ ತುಳುಕುವ ನಿಲ್ದಾಣವಾಗಿದೆ. ಇಲ್ಲಿ ಪ್ರತಿವರ್ಷ ಸುಮಾರು 3 ಕೋಟಿ 93 ಲಕ್ಷ 62 ಸಾವಿರದ 272 ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಅಷ್ಟು ಜನಜಂಗಳಿಯಿಂದ ತುಂಬಿರುವ ರೈಲ್ವೆ ನಿಲ್ದಾಣ ನವದೆಹಲಿಯ ರೈಲ್ವೆ ನಿಲ್ದಾಣ.

publive-image

ಇದನ್ನೂ ಓದಿ:ದೇಶದಲ್ಲಿ ಹೆಚ್ಚುತ್ತಿವೆ ಡಿಜಿಟಲ್ ಅರೆಸ್ಟ್​ ಪ್ರಕರಣಗಳು.. ಫೇಕ್​ಕಾಲ್​​ನಿಂದ 20 ಕೋಟಿ ಕಳೆದುಕೊಂಡ ಮಹಿಳೆ!

ಇನ್ನು ಅತಿ ಹೆಚ್ಚು ಶ್ರೀಮಂತ ರೈಲ್ವೆ ನಿಲ್ದಾಣಗಳ ಪೈಕಿ ಎರಡನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ಹೌರಾ ರೈಲ್ವೆ ನಿಲ್ದಾಣ ಬರುತ್ತದೆ. ಈ ರೈಲ್ವೆ ನಿಲ್ದಾಣ ಭಾರತದಲ್ಲಿಯೇ ಅತಿಹೆಚ್ಚು ಆದಾಯ ಗಳಿಸುವ ಎರಡನೇ ರೈಲ್ವೆ ನಿಲ್ದಾಣವಗಿದೆ. ವಾರ್ಷಿಕವಾಗಿ ಈ ರೈಲ್ವೆ ನಿಲ್ದಾಣ ಗಳಿಸುವ ಆದಾಯ 1692 ಕೋಟಿ ರೂಪಾಯಿ ಎಂದು ರೈಲ್ವೆ ಇಲಾಖೆ ಹೇಳುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment