/newsfirstlive-kannada/media/post_attachments/wp-content/uploads/2025/03/GANGA-RIVER.jpg)
ಗಂಗಾ ನದಿ ಎಂದರೆ ಭಾರತದಲ್ಲಿ ಒಂದು ಪೂಜ್ಯ ಭಾವನೆಯಿದೆ. ಎಲ್ಲ ನದಿಗಳ ತಾಯಿ ಎಂದು ಕೂಡ ಕರೆಯಲಾಗುತ್ತದೆ. ಆಕೆಯ ಒಡಲಲ್ಲಿ ಒಂದು ಬಾರಿ ಮಿಂದೆದ್ದರೆ ಸಾಕು ಎಲ್ಲ ಪಾಪಗಳು ಪರಿಹಾರವಾಗುತ್ತವೆ ಎಂದು ಕೂಡ ಹೇಳಲಾಗುತ್ತದೆ. ಹೀಗಾಗಿಯೇ ಗಂಗೆಯನ್ನು ನಾವು ಕೇವಲ ನದಿಯೆಂದು, ಹರಿಯುವ ನೀರಿನ ಗುರುತೆಂದು ಪರಿಗಣಿಸಿಯೇ ಇಲ್ಲ. ಅವಳು ಲೋಕಮಾತೆ. ಮಾತೃಸಮಾನ ಎಂಬ ಅಪಾರವಾದ ನಂಬಿಕೆ ಸಹಸ್ರಾರು ವರ್ಷಗಳಿಂದ ಭಾರತೀಯರಲ್ಲಿ ಬೇರೂರಿದೆ. ಭಾರತದ ಅತಿ ಉದ್ದನೆಯ ನದಿ ಹಾಗೂ ಪವಿತ್ರ ನದಿಯೆಂದು ಗಂಗೆಯನ್ನು ಕರೆಯುತ್ತಾರೆ.
ಗಂಗಾ ನದಿ ಒಟ್ಟು 2525 ಕಿಲೋ ಮೀಟರ್ನಷ್ಟು ದೂರ ಹರಿಯುತ್ತಾಳೆ. ಗಂಗಾ ನದಿಯ ಉಗಮ ಭಾಗಿರಥಿ ಹಾಗೂ ಅಲಕನಂದಾ ಸಂಗಮದೊಂದಿಗೆ ಶುರುವಾಗುತ್ತದೆ.ಆದರೆ ಒಂದು ವಿಷಯ ನಿಮಗೆ ಗೊತ್ತಿದೆಯಾ. ದೇಶದ ಈ ಒಂದು ಪ್ರದೇಶವನ್ನು ಗಂಗಾಮಾತೆಯ ಮಾವನ ಮನೆಯೆಂದು ಕರೆಯುತ್ತಾರೆ.
ಇದನ್ನೂ ಓದಿ:ಆತನಿಗೆ 65 ವರ್ಷ; ಇಳಿವಯಸ್ಸಿನಲ್ಲೂ ಯುವತಿಯನ್ನು ಮದುವೆ ಆದ ಅಂಕಲ್
ವಾಸ್ತವಾಗಿ ಪಶ್ಚಿಮ ಉತ್ತರ ಪ್ರದೇಶವನ್ನು ಗಂಗಾಮಾತೆಯ ಅತ್ತೆ ಮಾವನ ಮನೆಯೆಂದು ನಂಬಲಾಗಿದೆ. ಇದಕ್ಕೆ ಕಾರಣವೂ ಇದೆ. ಮಹಾಭಾರತದ ಕಥೆಯಲ್ಲಿ ಶಂತನು ಮಾತಾ ಗಂಗೆಯನ್ನು ಇದೇ ಜಾಗದಲ್ಲಿ ವಿವಾಹವಾಗಿದ್ದನಂತೆ. ಅದು ಮಾತ್ರವಲ್ಲ ಮಹಾರಾಜ ಶಂತನುವಿನ ರಾಜ್ಯ ಇದೇ ಪಶ್ಚಿಮ ಉತ್ತರಪ್ರದೇಶದಲ್ಲಿ ಸ್ಥಾಪಿತವಾಗಿತ್ತು ಎಂದು ಕೂಡ ಉಲ್ಲೇಖಗಳಿವೆ. ಈ ಕಾರಣಗಳಿಂದಾಗಿ ಪಶ್ಚಿಯ ಉತ್ತರಪ್ರದೇಶವನ್ನು ಗಂಗಾನದಿಯ ಅತ್ತೆ ಮಾವನ ಮನೆಯೆಂದು ಕರೆಯಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ