/newsfirstlive-kannada/media/post_attachments/wp-content/uploads/2025/02/INDIAN-ARMY.jpg)
ವಿಶ್ವದ ಬಲಿಷ್ಠ ಸೇನೆಗಳಲ್ಲಿ ಭಾರತೀಯ ಸೇನೆಯೂ ಕೂಡ ಒಂದು. ಬಲಿಷ್ಠ ಸೇನೆ ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರ ನಮ್ಮ ಭಾರತ. ಭಾರತೀಯ ಸೇನೆಯಲ್ಲಿ 12 ಕೋಟಿಗೂ ಅಧಿಕ ಸೈನಿಕರಿದ್ದಾರೆ. 96 ಸಾವಿರ ರೀಸರ್ವ್ ಟ್ರೂಪ್ಸ್ ಇದೆ. ಆದರೆ ಭಾರತೀಯ ಸೇನೆಯಲ್ಲಿ ಅತಿಹೆಚ್ಚು ಸೈನಿಕರು ಸೇವೆ ಸಲ್ಲಿಸುತ್ತಿರುವುದು ಯಾವ ರಾಜ್ಯದವರು ಗೊತ್ತಾ?
ಭಾರತೀಯ ಸೇನೆಯಲ್ಲಿ ಪ್ರತಿಯೊಂದು ರಾಜ್ಯದ ಸೈನಿಕರು ಇದ್ದಾರೆ. ಆಯಾ ಆಯಾ ರಾಜ್ಯಗಳ ಹೆಸರಲ್ಲಿ ರೆಜಿಮೆಂಟ್ಗಳು ಇವೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಪ್ರತಿಯೊಂದು ರಾಜ್ಯವು ತನ್ನ ಪ್ರಜೆಯನ್ನು ಭಾರತೀಯ ಸೇನೆಗೆ ಕಳುಹಿಸಿ ಕೊಟ್ಟಿದೆ. ಅಷ್ಟೇ ಏಕೆ ಊರಿಗೆ ಊರೆ ಸೇನೆಗೆ ಸಮರ್ಪಿಸಿಕೊಂಡ ಉದಾಹರಣೆಗಳು ನಮಗೆ ಸಿಗುತ್ತವೆ. ಇವರೆಲ್ಲರೂ ಅಲ್ಲಿ ಮಳೆ, ಗಾಳಿ, ಚಳಿಗೆ ಮೈಯೊಡ್ಡಿ ಕದಲದೇ ಗಡಿಯಲ್ಲಿ ನಿಂತಿದ್ದರಿಂದಲೇ ನಾವಿಲ್ಲಿ ಇಂದಿಗೂ ಆರಾಮವಾಗಿ ನಿದ್ರಿಸುತ್ತಿರುವುದು. ದೇಶಕ್ಕೆ ದೇಶದ ರಕ್ಷಣೆಗೆ ಆಪತ್ತು ಬಂದಾಗ ಜೀವದ ಹಂಗು ತೊರೆದು ಗಡಿಯಲ್ಲಿ ಶತ್ರು ಸಂಹಾರಕ್ಕೆ ನಿಂತು ಬಿಡುತ್ತದೆ ನಮ್ಮ ಸೇನೆ.
ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಶ್ರೀಮಂತ ಅಂಬಾನಿ ಕುಟುಂಬದ 4 ತಲೆಮಾರು; ಫೋಟೋಗಳು ಇಲ್ಲಿವೆ!
ಈಗಾಗಲೇ ಹೇಳಿದಂತೆ ಭಾರತೀಯ ಸೇನೆಯಲ್ಲಿ ಪ್ರತಿ ರಾಜ್ಯವೂ ತನ್ನ ಸೈನಿಕರನ್ನು ನೀಡಿದೆ. ಆದರೆ ಯಾವ ರಾಜ್ಯದ ಸೈನಿಕರು ಅಧಿಕವಾಗಿ ನಮ್ಮ ಭಾರತೀಯ ಸೇನೆಯಲ್ಲಿದ್ದಾರೆ ಎಂಬ ಕುತೂಹಲ ಸಹಜವಾಗಿ ಎಲ್ಲರ ಮನಸ್ಸಿನಲ್ಲಿಯೂ ಇರುತ್ತದೆ. ಇದೊಂದು ಕೇವಲ ಕುತೂಹಲ ಹಾಗೂ ಆಸಕ್ತಿದಾಯಕ ವಿಷಯ. ಇದರ ಬಗ್ಗೆ ನಾವು ನಿಮಗೆ ಇಲ್ಲಿ ಹೇಳುತ್ತೇವೆ.
ಭಾರತೀಯ ಸೇನೆಯಲ್ಲಿ ಅತಿಹೆಚ್ಚು ಸೈನಿಕರು ಇರುವುದು ಉತ್ತರಪ್ರದೇಶದ ರಾಜ್ಯದವರು. ಉತ್ತರಪ್ರದೇಶ ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಲ್ಲಿ ಮೊದಲನೇಯ ಸ್ಥಾನದಲ್ಲಿದೆ. ಹೀಗಾಗಿ ಇಲ್ಲಿಂದಲೇ ಅತಿಹೆಚ್ಚು ಸೈನಿಕರು ಭಾರತೀಯ ಸೇನೆಯನ್ನು ಸೇರಿದ್ದಾರೆ. 2022ರ ರಕ್ಷಣಾ ಸಚಿವಾಲಯದಿಂದ ಬಂದ ಮಾಹಿತಿ ಪ್ರಕಾರ ಭಾರತೀಯ ಸೇನೆಯಲ್ಲಿ ಅತಿಹೆಚ್ಚು ಸೈನಿಕರು ಉತ್ತರಪ್ರದೇಶದ ರಾಜ್ಯದವರಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ರೀಲ್ಸ್‌ಗಾಗಿ ಶಾಲಾ ವಿದ್ಯಾರ್ಥಿಗಳಿಂದ ಐಷಾರಾಮಿ ಕಾರುಗಳ ಮೆರವಣಿಗೆ; ವಿಡಿಯೋ ವೈರಲ್ ಆದ್ಮೇಲೆ ಏನಾಯ್ತು?
ಈ ವರದಿಯ ಪ್ರಕಾರ ಸುಮಾರು 2 ಲಕ್ಷ 18 ಸಾವಿರ 512 ಉತ್ತರಪ್ರದೇಶದ ಸೈನಿಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾಯುಸೇನೆಯಲ್ಲಿ 37,450, ನೌಕಾಪಡೆಯಲ್ಲಿ 13.505 ಸೈನಿಕರು ಹಾಗೂ ಭೂದಳದಲ್ಲಿ 1 ಲಕ್ಷ 67 ಸಾವಿರ 557 ಸೈನಿಕರು ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂಬ ವರದಿ 2022ರಲ್ಲಿ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ವರದಿಯಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿ ಬಿಹಾರ ರಾಜ್ಯವಿದೆ. ಬಿಹಾರದ ಒಟ್ಟು 1 ಲಕ್ಷ 40 ಸಾವಿರ ಜನರು ಸೇನೆಯಲ್ಲಿದ್ದಾರೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಿವೆ.
SSBCrack ಪ್ರಕಾರ ಸೇನೆಗೆ ಹೆಚ್ಚು ಯೋಧರನ್ನು ಕಳುಹಿಸಿಕೊಟ್ಟ ಪ್ರಮುಖ 10 ರಾಜ್ಯಗಳ ಪಟ್ಟಿ ಇಲ್ಲಿದೆ.
- ಉತ್ತರ ಪ್ರದೇಶ
- ಬಿಹಾರ
- ರಾಜಸ್ಥಾನ್
- ಹರಿಯಾಣ
- ಉತ್ತರಾಖಂಡ್
- ಪಂಜಾಬ್
- ಮಧ್ಯಪ್ರದೇಶ
- ಮಹಾರಾಷ್ಟ್ರ
- ದೆಹಲಿ
- ಜಮ್ಮು ಮತ್ತು ಕಾಶ್ಮೀರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ