/newsfirstlive-kannada/media/post_attachments/wp-content/uploads/2025/04/NARMADA-RIVER-1.jpg)
ನದಿಗಳು ಅಂತ ಬಂದಾಗ ನಮಗೆ ಮೊದಲು ನೆನಪಾಗುವುದು ಗಂಗೆ, ಯುಮುನಾ, ಬ್ರಹ್ಮಪುತ್ರಾ ಎಂಬ ಬೃಹತ್ ನದಿಗಳು. ಅತಿಹೆಚ್ಚು ನದಿಗಳು ಉತ್ತರಾಖಂಡ್ ಮತ್ತು ಉತ್ತರಪ್ರದೇಶದಲ್ಲಿಯೇ ಇವೆ ಎಂಬುದು ನಮ್ಮ ನಂಬಿಕೆ. ಆದರೆ ಆ ರಾಜ್ಯಗಳಿಗಿಂತ ಹೆಚ್ಚು ನದಿ ಈ ರಾಜ್ಯದಲ್ಲಿ ಹರಿಯುತ್ತವೆ. ಈ ರಾಜ್ಯವನ್ನು ನದಿಗಳ ತವರುಮನೆ ಎಂದೇ ಕರೆಯಲಾಗುತ್ತದೆ ಆ ರಾಜ್ಯ ಯಾವುದು ಗೊತ್ತಾ?
ಮಧ್ಯಪ್ರದೇಶ, ಈ ರಾಜ್ಯದಲ್ಲಿ ಭಾರತದಲ್ಲಿಯೇ ಅತಿಹೆಚ್ಚು ನದಿಗಳು ಹರಿಯುತ್ತವೆ. ಇದನ್ನು ಮದರ್ ಹೌಸ್ ಆಫ್ ರಿವರ್ಸ್ ಎಂದು ಕರೆಯಲಾಗುತ್ತದೆ.ಅಂದ್ರೆ ನದಿಗಳ ತವರುಮನೆ ಎಂದೇ ಕರೆಯಲಾಗುತ್ತದೆ.ಕಾರಣ ದೇಶದಲ್ಲಿಯೇ ಅತಿಹೆಚ್ಚು ನದಿಗಳು ಮಧ್ಯಪ್ರದೇಶದಲ್ಲಿ ಹರಿಯುತ್ತವೆ. ಮಧ್ಯಪ್ರದೇಶದಲ್ಲಿ ಚಿಕ್ಕ ಚಿಕ್ಕ ನದಿಯಿಂದ ಹಿಡಿದು ಅತಿದೊಡ್ಡ ನದಿಗಳು ಹರಿಯುತ್ತವೆ. ಈ ರಾಜ್ಯದಲ್ಲಿ ಒಟ್ಟು 207 ನದಿಗಳು ಹರಿಯುತ್ತವೆ ಎಂದರೆ ನೀವು ನಂಬಲೇಬೇಕು.
ಇದನ್ನೂ ಓದಿ: ಬದುಕಿನಲ್ಲಿ ಯಾವುದೇ ದಾರಿ ಕಾಣದಾದಾಗ ನದಿಯ ಈ ಗುಣಗಳನ್ನು ನೆನಪಿಸಿಕೊಳ್ಳಿ! ಯಶಸ್ವಿ ಬದುಕಿಗೆ ತುಂಬಾ ಅಮೂಲ್ಯ
ಮಧ್ಯಪ್ರದೇಶದಲ್ಲಿ ಭಾರತದ ಅನೇಕ ಪ್ರಮುಖ ನದಿಗಳು ಹರಿಯುತ್ತವೆ. ಇದೇ ಕಾರಣದಿಂದ ಈ ರಾಜ್ಯವನ್ನು ನದಿಗಳ ತವರುಮನೆ ಎಂದು ಕರೆಯಲಾಗುತ್ತದೆ. ಮಧ್ಯಪ್ರದೇಶದಲ್ಲಿ ಹರಿಯುವ ಪ್ರಮುಖ ನದಿಗಳು ಅಂದರೆ ನರ್ಮದಾ, ಬೇತವಾ, ಚಂಬಲ್ ಸೇರಿ ಹಲವು ಪ್ರಮುಖ ನದಿಗಳು ಹರಿಯುತ್ತವೆ. ಮಧ್ಯಪ್ರದೇಶದಲ್ಲಿ ಹರಿಯುವ ಅತಿದೊಡ್ಡದಾದ ನದಿ ಅಂದ್ರೆ ಅದು ನರ್ಮದಾ ನದಿ
ನರ್ಮದಾ ನದಿಯ ಉಗಮ ಇದೇ ಮಧ್ಯಪ್ರದೇಶದಲ್ಲಿ ಆಗುತ್ತದೆ.
ಇದನ್ನೂ ಓದಿ:ಭಾರತದಿಂದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿವೆ ಈ 80 ದೇಶಗಳು! ಕಾರಣವೇನು ಗೊತ್ತಾ?
ಮಧ್ಯಪ್ರದೇಶದ ಅಮರಕಂಠ ಎಂಬ ಗುಡ್ಡುಗಾಡು ಪ್ರದೇಶದಲ್ಲಿ ನರ್ಮದಾ ನದಿಯ ಉಗಮವಾಗುತ್ತದೆ. ನರ್ಮದಾ ನದಿ ಸುಮಾರು 1312 ಕಿಲೋ ಮೀಟರ್ ಉದ್ದದಷ್ಟು ಹರಿಯುತ್ತದೆ. ಮಧ್ಯಪ್ರದೇಶದಲ್ಲಿ ಇದರ ಹರಿಯುವಿಕೆ ಸುಮಾರು 1022 ಕಿಲೋಮೀಟರ್ ಎಂದು ಹೇಳಲಾಗುತ್ತದೆ. ನರ್ಮದಾ, ಚಂಬಲ್ ಇಂತಹ ದೊಡ್ಡ ದೊಡ್ಡ ನದಿಗಳನ್ನು ಸೇರಿ ಸಣ್ಣ ಪುಟ್ಟ ನದಿಗಳು ಮಧ್ಯಪ್ರದೇಶದಲ್ಲಿ ಹರಿಯುತ್ತವೆ. ಒಟ್ಟು 207 ನದಿಗಳ ತವರು ಮಧ್ಯಪ್ರದೇಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ