ಯಾವ ರಾಜ್ಯಗಳು ಅತ್ಯಂತ ದುಬಾರಿ ಸೀರೆಗಳನ್ನು ಉತ್ಪಾದಿಸುತ್ತವೆ? ಇಲ್ಲಿದೆ ಅಪರೂಪದ ಮಾಹಿತಿ

author-image
Gopal Kulkarni
Updated On
ಯಾವ ರಾಜ್ಯಗಳು ಅತ್ಯಂತ ದುಬಾರಿ ಸೀರೆಗಳನ್ನು ಉತ್ಪಾದಿಸುತ್ತವೆ? ಇಲ್ಲಿದೆ ಅಪರೂಪದ ಮಾಹಿತಿ
Advertisment
  • ದೇಶದಲ್ಲಿಯೇ ಅತ್ಯಂತ ದುಬಾರಿ ಸೀರೆಗಳು ಎಲ್ಲಿ ಉತ್ಪಾದನೆಯಾಗುತ್ತವೆ
  • ಈ ಐದು ರಾಜ್ಯಗಳಲ್ಲಿ ಸಿದ್ಧಗೊಳ್ಳುವ ಸೀರೆಗಳಿಗೆ ಇದೆ ಭಾರೀ ಡಿಮ್ಯಾಂಡ್​
  • ಯಾವ ರಾಜ್ಯ ಅತೀ ದುಬಾರಿ ಬೆಲೆಯ ಸೀರೆಗಳನ್ನು ಉತ್ಪಾದಿಸುತ್ತದೆ ಗೊತ್ತಾ?

ಸೀರೆ, ಈ ದೇಶದ ಸಂಪ್ರಾದಾಯಿಕ ಉಡುಗೆ. ಸೀರೆಯಲ್ಲಿ ಹೆಣ್ಣು ಮಕ್ಕಳನ್ನು ನೋಡುವುದೇ ಒಂದು ಚೆಂದ. ಹೆಣ್ಣಿನ ಸೌಂದರ್ಯಕ್ಕೆ ಮತ್ತಷ್ಟು ಮೆರಗು ತಂದು ಕೊಡುವಲ್ಲಿ ಸೀರೆ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ನಮ್ಮ ಭಾರತೀಯರ ಮಹಿಳೆಗೂ ಹಾಗೂ ಸೀರೆಗೂ ಒಂದು ಅವಿನಾಭಾವ ನಂಟು ಇದೆ. ಅವರನ್ನು ವಿಪರೀತವಾಗಿ ಆಕರ್ಷಿಸುವ ದಿರಿಸು ಅಂದ್ರೆ ಅದು ಸೀರೆ. ಒಪ್ಪಾಗಿ ನೆರಿಗೆ ಹೆಣೆದು ಮೈಮಾಟಕ್ಕೆ ತಕ್ಕಂತೆ ಸೀರೆಯನ್ನುಟ್ಟುಕೊಂಡು ಹೆಣ್ಣು ಮಕ್ಕಳು ನಡೆದುಕೊಂಡು ಬರ್ತಿದ್ರೆ, ಸೌಂದರ್ಯದ ಮೂರ್ತಿಗೆ ಜೀವಕಳೆ ಬಂದು ನಡೆದಾಡುತ್ತಿದೆಯೆನೋ ಎನ್ನುವ ಮಟ್ಟಿಗೆ ಅವರ ಚೆಲುವಿಗೆ ಒಂದು ಕಾಂತಿ ಮೂಡುತ್ತದೆ.

ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸೀರೆಗಳು ಉತ್ಪಾದನೆಯಾಗುವುದೇ ಭಾರತದಲ್ಲಿ. ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ ವಿದೇಶಗಳಿಗೂ ಇಲ್ಲಿಯ ಅತ್ಯಂತ ದುಬಾರಿ ಬೆಲೆ ಬಾಳುವ ಸೀರೆಗಳು ರಫ್ತಾಗುತ್ತವೆ. ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಬಹುತೇಕ ಸೀರೆ ಉತ್ಪಾದನೆಗಳು ನಡೆಯುತ್ತವೆ ಆದ್ರೆ ಅತಿ ದುಬಾರಿ ಸೀರೆಗಳನ್ನು ಉತ್ಪಾದಿಸುವ ರಾಜ್ಯಗಳು ಯಾವುವು ಗೊತ್ತಾ?

publive-image

ಬನಾರಸ್​ ಸೀರೆ ಉತ್ತರಪ್ರದೇಶ
ಬನಾರಸ್ ಸಿಲ್ಕ್​ ಸೀರೆ ಎಂದರೆ ಕೇವಲ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಕೂಡ ಭಾರೀ ಬೇಡಿಕೆಯನ್ನು ಪಡೆದಿವೆ.ಅತ್ಯಂತ ಉತ್ಕೃಷ್ಟವಾದ ರೇಷ್ಮೆಯಿಂದ ತಯಾರಾಗುವ ಈ ಸೀರೆಗಳಿಗೆ ಬಂಗಾರ ಹಾಗೂ ಬೆಳ್ಳಿಯ ದಾರಗಳನ್ನು ಸೇರಿಸಲಾಗಿರುತ್ತದೆ. ಬನಾರಸ್ ರೇಷ್ಮೆ ಸೀರೆ ಉತ್ತರಪ್ರದೇಶದ ವಾರಾಣಸಿಯಲ್ಲಿ ಉತ್ಪಾದನೆಯಾಗುತ್ತವೆ. ಅತ್ಯಂತ ದುಬಾರಿ ಸೀರೆಗಳಲ್ಲಿ ಬನಾರಸ್​ ಸೀರೆ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

publive-image

ಕಾಂಜೀವರಂ ಸಾರೀಸ್​: ತಮಿಳುನಾಡು
ತಮಿಳುನಾಡಿನಲ್ಲಿ ಉತ್ಪಾದನೆಯಾಗುವ ಕಾಂಜೀವರಂ ಸೀರೆಗೂ ಕೂಡ ವಿಪರೀತ ಡಿಮ್ಯಾಂಡ್​ ಇದೆ. ಅತ್ಯಂತ ಶ್ರೇಷ್ಠ ಗುಣಮಟ್ಟದ ರೇಷ್ಮೆಯೊಂದಿಗೆ ಸಿದ್ಧಗೊಳ್ಳುವ ಈ ಸೀರೆಗಳು, ದೇಶದಲ್ಲಿಯ ಅತ್ಯಂತ ದುಬಾರಿ ಸೀರೆಗಳಲ್ಲಿ ಒಂದಾಗಿದೆ. ಇದರ ಬಣ್ಣ ವಿನ್ಯಾಸ ಹಾಗೂ ಅದರ ಸೌಂದರ್ಯಕ್ಕೆ ಮರುಳಾಗದ ಮಹಿಳೆಯರೇ ಇಲ್ಲ.

publive-image

ಪಟೋಲಾ ಸಾರಿಸ್​: ಗುಜರಾತ್​
ವಿಶೇಷ ರೀತಿಯಲ್ಲಿ ನೇಯ್ಗೆ ಮಾಡುವ ಮೂಲಕ ತಯಾರಾಗುವ ಸೀರೆ ಅಂದ್ರೆ ಅದು ಪಟೋಲಾ ರೇಷ್ಮೆ ಸೀರೆ. ಅಪ್ಪಟ್ಟವಾಗಿ ಕೈಯಿಂದಲೇ ತುಂಬಾ ಕೌಶಲ್ಯ ಪಡೆದ ನೇಕಾರರು ಈ ಸೀರೆಗಳನ್ನು ನೇಯುತ್ತಾರೆ. ದೇಶದಲ್ಲಿ ಅತ್ಯಂತ ದುಬಾರಿ ಸೀರೆಯಲ್ಲಿ ಗುಜರಾತ್​ನ ಪಟೋಲಾ ಸೀರೆಯೂ ಕೂಡ ಒಂದು

publive-image

ಚಂದೇರಿ ಸಾರೀಸ್​: ಮಧ್ಯಪ್ರದೇಶ
ಮಧ್ಯಪ್ರದೇಶದ ಚಂದೇರಿ ಸೀರೆಗಳಿಗೆ ದೇಶ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇವು ಕೂಡ ಅತ್ಯಂತ ಉತ್ಕೃಷ್ಟ ಗುಣಮಟ್ಟದ ರೇಷ್ಮೆಯಿಂದ ತಯಾರಿಸಲಾಗುತ್ತದೆ. ಈ ಸೀರೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದಾರಗಳನ್ನು ಬಳಸಿ ನೇಯ್ಗೆ ಮಾಡಲಾಗಿರುತ್ತದೆ. ಈ ಸೀರೆಗಳು ಬೇಸಿಗೆ ಕಾಲದಲ್ಲಿ ಧರಿಸಲು ತುಂಬಾ ಉತ್ತಮ ಎಂದು ಹೇಳಲಾಗುತ್ತದೆ.

publive-image

ಮುಗಾ ಸಿಲ್ಕ್​ ಸಾರಿ: ಅಸ್ಸಾಂ
ಅಸ್ಸಾಂನಲ್ಲಿ ಸಿದ್ಧಗೊಳ್ಳುವ ಮುಗಾ ಸಿಲ್ಕ್ ಸಾರಿಗೂ ಕೂಡ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅತ್ಯಂತ ದುಬಾರಿ ಸೀರೆಗಳಲ್ಲಿ ಮುಗಾ ಸಿಲ್ಕ್ ಸಾರಿ ಕೂಡ ಇದೆ. ಈ ಸೀರೆಗಳಲ್ಲಿ ಕಂಡು ಬರುವ ಬಂಗಾರದ ಬಣ್ಣದ ಹೊಳಪು ನಮಗೆ ಬೇರೆ ರೇಷ್ಮೆ ಸೀರೆಗಳಲ್ಲಿ ಕಂಡು ಬರುವುದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment