/newsfirstlive-kannada/media/post_attachments/wp-content/uploads/2025/03/BANGLES-1.jpg)
ಬಳೆಗಳು ಎಂದರೆ ನಮ್ಮ ಭಾರತೀಯ ನಾರಿಯರಿಗೆ ಬಹುಪ್ರೀತಿಯ ಆಡಂಭರವಲ್ಲದ ಆಭರಣಗಳಲ್ಲೊಂದು. ಸೀರೆ, ಸೀರೆಗೆ ತಕ್ಕಂತೆ ಕೈಬಳೆ ಬಳೆ, ಹಣೆಯಲ್ಲಿ ಒಂದು ಪುಟ್ಟ ಕುಂಕುಮ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಲು ಇಷ್ಟು ಸಾಕು. ನಮ್ಮ ದೇಶದಲ್ಲಿ ಬಳೆಗಳಿಗೆ ತುಂಬಾ ಬೇಡಿಕೆಯಿದೆ. ವಿವಿಧ ಬಗೆಯ ಬಳೆಗಳ ನಾದ ನಮಗೆ ಬಳೆ ಮಾರುಕಟ್ಟೆಯಲ್ಲಿ ಕೇಳಿ ಬರುತ್ತವೆ. ತಮಗಿಷ್ಟವಾದ ಬಳೆಯನ್ನು ಆಯ್ಕೆ ಮಾಡುವಲ್ಲಿ ಬ್ಯುಸಿಯಾಗಿರುವ ಹೆಣ್ಣು ಮಕ್ಕಳ ಗುಂಪನ್ನು ಬಳೆ ಮಾರುಕಟ್ಟೆಯಲ್ಲಿ ನೋಡುವುದೇ ಒಂದು ಚೆಂದ. ಆದ್ರೆ ಬಳೆ ತಯಾರಿಕೆಯಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದ ರಾಜ್ಯ ಯಾವುದು ಗೊತ್ತಾ?
ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಕೂಡ ಬಳೆ ತಯಾರಿಕೆ ಹಾಗೂ ಬಳೆ ಮಾರಾಟ ಜೋರಾಗಿಯೇ ನಡೆಯುತ್ತದೆ. ಆದರೆ ಯಾವ ರಾಜ್ಯದಲ್ಲಿ ಅತಿಹೆಚ್ಚು ಬಳೆ ಉತ್ಪಾದನೆಗೊಳ್ಳುತ್ತವೆ ಗೊತ್ತಾ? ಬಳೆಗಳ ತಯಾರಿಕೆಯಲ್ಲಿ ಭಾರತದಲ್ಲಿಯೇ ಅತ್ಯಂತ ಪ್ರಸಿದ್ಧಿ ಪಡೆದ ರಾಜ್ಯವೆಂದರೆ ಅದು ಉತ್ತರಪ್ರದೇಶ.ಅದರಲ್ಲೂ ಉತ್ತರಪ್ರದೇಶದ ಫಿರೋಜಾಬಾದ್ನಲ್ಲಿ ಗಾಜಿನ ಬಳೆಗಳನ್ನು ದೇಶದಲ್ಲಿಯೇ ಅತಿಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತದೆ.
ಫಿರೋಜಾಬಾದ್ನಲ್ಲಿ ಸಿದ್ಧಗೊಳ್ಳುವ ಬಳೆಗಳು ಅನನ್ಯವಾದ ವಿನ್ಯಾಸ ಮತ್ತು ಬಣ್ಣವನ್ನು ಹೊಂದಿರುತ್ತವೆ. ಇದರಿಂದಾಗಿಯೇ ಇಲ್ಲಿ ತಯಾರಾಗುವ ಬಳೆಗಳು ಭಾರತದಾದ್ಯಂತ ಅತಿಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಂಡಿವೆ.
ಬಳೆಗಳು ಅಂದ್ರೆ ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಸ್ಥಾನಮಾನವಿದೆ. ಮಹಿಳೆಯರು ತಮ್ಮ ಸಿಂಗಾರಕ್ಕಾಗಿ ಬಳೆಗಳನ್ನು ತೊಡುತ್ತಾರೆ. ಅದರಲ್ಲೂ ವಿಶೇಷ ಹಬ್ಬ ಹರಿದಿನಗಳಲ್ಲಿ ಬಗೆ ಬಗೆಯ ಬಣ್ಣದ ಬಳೆಗಳನ್ನು ತೊಡುವುದು ಭಾರತೀಯ ನಾರಿಯರಿಗೆ ಎಲ್ಲಿಲ್ಲದ ಹುರುಪು. ಅಂತಹ ಬಳೆಗಳು ಹೆಚ್ಚು ಸಿದ್ಧವಾಗುವುದು ಉತ್ತರಪ್ರದೇಶವೆಂಬ ರಾಜ್ಯದಲ್ಲಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ